ETV Bharat / state

ರೈಲಿನಲ್ಲಿ ಪ್ರಯಾಣಿಕರಿಗೆ ನಿದ್ರೆ ಮಾತ್ರೆ ನೀಡಿ ಕಳ್ಳತನ: ಆರೋಪಿಗಳ ಬಂಧನ

author img

By

Published : Mar 24, 2020, 10:31 AM IST

ಬೆಳಗಾವಿಯಿಂದ ಸಂಚರಿಸುವ ರೈಲಿನಲ್ಲಿ ಪ್ರಯಾಣಿಕರೊಂದಿಗೆ ಸ್ನೇಹ ಬೆಳೆಸಿ ಬಳಿಕ ಅವರಿಗೆ ನಿದ್ರೆ ಮಾತ್ರೆ ನೀಡಿ ಅವರಲ್ಲಿದ್ದ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ ಬಿಹಾರ ಮೂಲದ ಮೂವರು ಖದೀಮರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

3 are Arrested who robering in train by giving a sleeping pills to travelers
ರೈಲಿನಲ್ಲಿ ನಿದ್ರೆ ಮಾತ್ರೆ ನೀಡಿ ದರೋಡೆ ಮಾಡುತ್ತಿದ್ದ ಆರೋಪಿಗಳ ಬಂಧನ

ಬೆಳಗಾವಿ: ಜಿಲ್ಲೆಯಿಂದ ಮಹಾರಾಷ್ಟ್ರ, ಗೋವಾ, ಹೈದರಾಬಾದ್ ಹಾಗೂ ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ನಿದ್ರೆ ಮಾತ್ರೆ ನೀಡಿ ಚಿನ್ನ, ನಗದು, ಸೇರಿದಂತೆ ಬ್ಯಾಗ್​ಗಳನ್ನು ದರೋಡೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಿಹಾರ ಮೂಲದ ಮಹಮ್ಮದ್ ಅನ್ವರುಲ್(21), ಸಾದಾಬ್ ಲಲಿಯಾ (35) ಹಾಗೂ ಆನ್ವರ್ ಆಲಮ್ ಕಲಿವುಂದ್ಧಿನ್ (25) ಬಂಧಿತ ಆರೋಪಿಗಳು.

ಈ ಮೂವರು ಬಹುದಿನಗಳಿಂದ ಬೆಳಗಾವಿ, ಬೆಂಗಳೂರು, ಗೋವಾ ಮಾರ್ಗವಾಗಿ ಸಾಗುತ್ತಿರುವ ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರೊಂದಿಗೆ ಸ್ನೇಹ ಬೆಳೆಸಿಕೊಳ್ಳುತ್ತಿದ್ದರು. ಪ್ರಯಾಣಿಕರು ಹತ್ತಿರವಾದಂತೆ ಅವರಿಗೆ ತಂಪು ಪಾನೀಯಗಳಲ್ಲಿ ನಿದ್ರೆ ಮಾತ್ರೆ, ಸಮೋಸಾ, ಚಾಕೊಲೇಟ್ ನೀಡುತ್ತಾರೆ. ಇವುಗಳನ್ನು ತಿಂದು ಕುಡಿದು ನಿದ್ರೆಗೆ ಜಾರಿದ ಕ್ಷಣಾರ್ಧದಲ್ಲಿ ಈ ಕೃತ್ಯ ಎಸಗುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಶುಕ್ರವಾರ ಸಕೇಂದರ ಚೌಧರಿ ಕುಟುಂಬ ಸದಸ್ಯರು ಜಬಲಪೂರ ರೈಲಿನಲ್ಲಿ ಸಂಚಾರಿಸುವಾಗ ಇದೇ ರೀತಿ ಈ ಮೂವರು ಆರೋಪಿಗಳು ಸ್ನೇಹ ಬೆಳೆಸಿಕೊಂಡು ನಂತರ ಸಮೋಸಾ, ಚಾಕೊಲೇಟ್ ನೀಡಿದ್ದು, ಪ್ರಜ್ಞೆ ತಪ್ಪಿದ ಬಳಿಕ ಮೈಮೇಲಿನ ಬಂಗಾರದ ಆಭರಣಗಳು, ಮೊಬೈಲ್ ಸೇರಿದಂತೆ ಇನ್ನಿತರ ವಸ್ತುಗಳನ್ನು ದೋಚಿದ್ದರು.

ಈ ಕುರಿತು ಬೆಳಗಾವಿ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಕಳ್ಳತನ ಎಸಗಿ ಕಣ್ಮರೆಯಾಗಿಬೇಕಿದ್ದ ಆರೋಪಿಗಳು ಕೊರೊನಾ ಭೀತಿಯಿಂದ ನಗರದಲ್ಲಿ ಉಳಿದುಕೊಂಡಿದ್ದರು. ಈ ವೇಳೆ ರೈಲ್ವೆ ನಿಲ್ದಾಣದಲ್ಲಿ ಅಪರಿಚತವಾಗಿ ಅಲೆದಾಡುತ್ತಿದ್ದುದನ್ನು ಶಂಕಿಸಿದ ಪೊಲೀಸರು ಆರೋಪಿಗಳನ್ನು ಹಿಡಿದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.