ಅಥಣಿ(ಬೆಳಗಾವಿ)/ಶಿವಮೊಗ್ಗ/ ದಾವಣೆಗೆರೆ : ದೇಶಾದ್ಯಂತ ಕೊರೊನಾ ವಾರಿಯರ್ಸ್ಗೆ ಕೋವ್ಯಾಕ್ಸಿನ್ ನೀಡಲಾಗುತ್ತಿದೆ. 2ನೇ ಹಂತದ ಲಸಿಕೆ ವಿತರಣೆ ಹಿನ್ನೆಲೆ ಪಟ್ಟಣದ ಸಮುದಾಯ ಆಸ್ಪತ್ರೆಯಲ್ಲಿ ಚುಚ್ಚು ಮದ್ದು ನೀಡಲಾಯಿತು.
ಎರಡನೆ ಹಂತವಾಗಿ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಲಸಿಕೆ ನೀಡಲಾಯಿತು. ಅಥಣಿ ಡಿವೈಎಸ್ಪಿ ಎಸ್ ವಿ ಗಿರೀಶ್ ಲಸಿಕೆ ಪಡೆದುಕೊಂಡರು.
ಇತ್ತ ದಾವಣಗೆರೆಯಲ್ಲೂ ಲಸಿಕೆ ವಿತರಣೆ ಮಾಡಲಾಗಿದೆ. ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಎಸ್ಪಿ ಹನುಮಂತರಾಯ ಇಬ್ಬರು ಕೂಡ ಲಸಿಕೆ ಪಡೆದರು. ದಾವಣಗೆರೆ ನಗರದಲ್ಲಿರುವ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಎಸ್ಪಿ, ಡಿಸಿಯವರೊಂದಿಗೆ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಕೂಡ ಲಸಿಕೆ ಹಾಕಿಸಿಕೊಂಡರು.
ಶಿವಮೊಗ್ಗದಲ್ಲೂ ಸಹ ಲಸಿಕೆ ವಿತರಣಾ ಕಾರ್ಯ ನಡೆಯುತ್ತಿದೆ. ಇಂದು ಅಪರ ಜಿಲ್ಲಾಧಿಕಾರಿ ಅನುರಾಧ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಕೊರೊನಾ ಲಸಿಕೆ ಪಡೆದಿದ್ದಾರೆ. ಜಿಲ್ಲೆಯಲ್ಲಿ 2ನೇ ಹಂತದ ಕೊರೊನಾ ಲಸಿಕೆ ವಿತರಣೆ ಕಾರ್ಯ ನಡೆಯುತ್ತಿದೆ.
ಇದನ್ನೂ ಓದಿ: ಹತ್ತಾರು ನಿಮಿಷ ಕಾದರೂ ಬರಲಿಲ್ಲ ರವಿಕುಮಾರ್; ಅನುಪಸ್ಥಿತಿಯಲ್ಲೇ ಹೊರಟ್ಟಿ ನಾಮಪತ್ರ ಸಲ್ಲಿಕೆ