ETV Bharat / state

ಒಂದೇ ದಿನಕ್ಕೆ ಬೆಳಗಾವಿಯಲ್ಲಿ ಕೋವಿಡ್​ನಿಂದ 24 ಬಲಿ

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕೊರೊನಾ ಅಟ್ಟಹಾಸ ಜೋರಾಗಿದ್ದು, ಒಂದೇ ದಿನ 24 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ.

Belgavi from covid
Belgavi from covid
author img

By

Published : May 26, 2021, 2:34 AM IST

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕೊರೊನಾ ‌ಅಟ್ಟಹಾಸ ಮುಂದುವರೆದಿದೆ. ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ‌ಪಡೆಯುತ್ತಿದ್ದ 24 ಸೋಂಕಿತರು ಚಿಕಿತ್ಸೆ ಫಲಿಸದೇ ಮೃತರಾಗಿದ್ದಾರೆ.

ಗೋಕಾಕ ತಾಲೂಕಿನ ಎಂಟು ಜನರು, ಹುಕ್ಕೇರಿಯ ಇಬ್ಬರು, ರಾಯಭಾಗದ ನಾಲ್ವರು, ಅಥಣಿಯ ಮೂವರು, ಖಾನಾಪುರದ ನಾಲ್ವರು ಹಾಗೂ ಬೆಳಗಾವಿಯ ಇಬ್ಬರು, ಬೈಲಹೊಂಗಲದ ಓರ್ವ ಮೃತಪಟ್ಟಿದ್ದಾರೆ. ಈ‌ ಎಲ್ಲರೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ‌ಪಡೆಯುತ್ತಿದ್ದರು.‌ ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಮತ್ತೆರಡು ದಿನ ಸಂಪೂರ್ಣ ಲಾಕ್​ಡೌನ್; ಡಿಸಿ ಆದೇಶ

ಅಲ್ಲದೆ ಜಿಲ್ಲೆಯಲ್ಲಿ ಹೊಸದಾಗಿ 1,260 ‌ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಕೆಲವರನ್ನು ‌ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಉಳಿದವರು ಹೋಮ್ ಐಸೋಲೇಶನ್ ಆಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.