ETV Bharat / state

ಉಕ್ರೇನ್‌ನಲ್ಲಿದ್ದಾರೆ ಬೆಳಗಾವಿಯ 17 ವಿದ್ಯಾರ್ಥಿಗಳು; ಕುಟುಂಬಸ್ಥರಿಗೆ ಜಿಲ್ಲಾಡಳಿತದಿಂದ ಧೈರ್ಯ

ಉಕ್ರೇನ್‌ನಲ್ಲಿ ಬೆಳಗಾವಿಯ 19 ವಿದ್ಯಾರ್ಥಿಗಳು ಸಿಲುಕಿದ್ದು, ಅದರಲ್ಲಿ ಇಬ್ಬರು ಮರಳಿ ಬಂದಿದ್ದಾರೆ. ಉಳಿದ 17 ಜನರ ಪಟ್ಟಿಯನ್ನು ಆಯಾ ತಾಲೂಕಿನ ತಹಶೀಲ್ದಾರ್‌ಗಳಿಗೆ ಕಳುಹಿಸಿ ಕೊಟ್ಟಿದ್ದೇವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

Students In Ukraine
Students In Ukraine
author img

By

Published : Mar 2, 2022, 3:17 PM IST

ಬೆಳಗಾವಿ: ಯುದ್ಧಪೀಡಿತ ಉಕ್ರೇನ್‌ನಲ್ಲಿ ಜಿಲ್ಲೆಯ ಇನ್ನೂ 17 ವೈದ್ಯಕೀಯ ವಿದ್ಯಾರ್ಥಿಗಳು ಸಿಲುಕಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಾಹಿತಿ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಕ್ರೇನ್‌ನಲ್ಲಿ ಬೆಳಗಾವಿಯ 19 ವಿದ್ಯಾರ್ಥಿಗಳು ಸಿಲುಕಿದ್ದರು. ಅದರಲ್ಲೀಗ ಇಬ್ಬರು ಮರಳಿ ಬಂದಿದ್ದಾರೆ. ರಾಜ್ಯ ನೋಡಲ್ ಅಧಿಕಾರಿ ಡಾ.ಮನೋಜ್ ರಾಜನ್ ನಮಗೆ ಪಟ್ಟಿ ನೀಡಿದ್ದಾರೆ. ಆ ಪ್ರಕಾರ ಉಕ್ರೇನ್‌ನಲ್ಲಿ ಬೆಳಗಾವಿಯ 19 ವಿದ್ಯಾರ್ಥಿಗಳು ಇದ್ದರು ಎಂದರು.

17 ಜನರ ಪಟ್ಟಿಯನ್ನು ಆಯಾ ತಾಲೂಕಿನ ತಹಶೀಲ್ದಾರ್‌ಗಳಿಗೆ ಕೊಟ್ಟಿದ್ದೇವೆ. ಅವರ ಮನೆಗೆ ಹೋಗಿ ಧೈರ್ಯ, ಆತ್ಮವಿಶ್ವಾಸ ತುಂಬುವ ಕೆಲಸ ಮಾಡಲಾಗುತ್ತಿದೆ. ಈಗಾಗಲೇ 12 ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ಧೈರ್ಯ ತುಂಬಲಾಗಿದೆ. ನಾನೂ ಸಹ ಕೆಲವು ವಿದ್ಯಾರ್ಥಿಗಳ ಪಾಲಕರ ಭೇಟಿಯಾಗುವೆ. ರಾಯಭಾಗ ಮೂಲದ ವಿದ್ಯಾರ್ಥಿ ಪಾಲಕರೊಂದಿಗೆ ನಾನೇ ಮಾತನಾಡಿದ್ದೇನೆ ಎಂದರು.

ಇದನ್ನೂ ಓದಿ: ಉಕ್ರೇನ್‌ನಿಂದ ಬೆಳಗಾವಿಗೆ ಬಂದ ವಿದ್ಯಾರ್ಥಿನಿ.. ಯುದ್ಧಪೀಡಿತ ದೇಶದ ಸಂಕಷ್ಟ ಬಿಚ್ಚಿಟ್ಟ ಯುವತಿ

ಉಕ್ರೇನ್‌ನ ಪೂರ್ವ ಭಾಗದಲ್ಲೇ ಹೆಚ್ಚಿನ ಜನ ಇದ್ದಾರೆ. ಕೇಂದ್ರ ಸಚಿವರ ತಂಡ ಸಹ ಅಲ್ಲಿಗೆ ಹೋಗಿದೆ. ನಾವೆಲ್ಲರೂ ಸೇರಿ ಪೋಷಕರಿಗೆ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡಬೇಕು. ಪಾಲಕರು ನೀಡಿದ ಮಾಹಿತಿ ರಾಜ್ಯ ನೋಡಲ್ ಅಧಿಕಾರಿಗಳಿಗೆ ನೀಡಿದ್ದೇವೆ. ಮುಂಬೈಗೆ ಬೆಳಗಾವಿಯ ಇಬ್ಬರು ಅಧಿಕಾರಿಗಳು ಹೋಗಿ ಮೂರು ದಿನಗಳಾಗಿದೆ. ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್ ಬಾಗೇವಾಡಿ, ಸಹಾಯಕ ಆಯುಕ್ತ ರವಿ ಕರಲಿಂಗಣ್ಣವರ್ ಮುಂಬೈ ಏರ್‌ಪೋರ್ಟ್‌‌ನಲ್ಲಿದ್ದಾರೆ. ರಾಜ್ಯದ ವಿದ್ಯಾರ್ಥಿಗಳ ಮಾಹಿತಿ ಪಡೆದು ಟಿಕೆಟ್ ಬುಕ್ ಮಾಡಿ ಸ್ವಂತ ಊರಿಗೆ ಕಳಿಸುವ ವ್ಯವಸ್ಥೆ ಮಾಡುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.