ಚಿಕ್ಕೋಡಿ: ಇಂದು ನಡೆದ ಎಸ್ಎಸ್ಎಲ್ಸಿಯ ಇಂಗ್ಲಿಷ್ ಪರೀಕ್ಷೆಗೆ ಸುಮಾರು 1,658 ವಿದ್ಯಾರ್ಥಿಗಳು ಗೈರಾಗಿದ್ದರು ಎಂದು ಡಿಡಿಪಿಐ ಗಜಾನನ ಮನ್ನಿಕೇರಿ ತಿಳಿಸಿದರು.
ಕೊರೊನಾ ನಡುವೆ ಇಂದು ನಡೆದ ಎಸ್ಎಸ್ಎಲ್ಸಿ ಇಂಗ್ಲಿಷ್ ಪರೀಕ್ಷೆಗೆ ಒಟ್ಟು 40,436 ಮಕ್ಕಳು ದಾಖಲಾಗಿದ್ದು, ಇದರಲ್ಲಿ 38,778 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದರು. ಉಳಿದ 1658 ಜನ ವಿದ್ಯಾರ್ಥಿಗಳು ಗೈರಾಗಿದ್ದರು ಎಂದು ತಿಳಿಸಿದರು.
ಚಿಕ್ಕೋಡಿಯಲ್ಲಿ ಎಂಟು ವಲಯಗಳಿದ್ದು, ಅಥಣಿ -165, ಕಾಗವಾಡ - 52, ಚಿಕ್ಕೋಡಿ -367, ನಿಪ್ಪಾಣಿ -132, ಗೋಕಾಕ - 113, ಮೂಡಲಗಿ - 203, ಹುಕ್ಕೇರಿ - 121, ರಾಯಬಾಗ - 505 ಹೀಗೆ ಒಟ್ಟು 1,658 ವಿದ್ಯಾರ್ಥಿಗಳು ಗೈರಾಗಿದ್ದಾರೆ.
ಪರೀಕ್ಷೆ ಆರಂಭಗೊಳ್ಳುವ ಮುನ್ನವೇ ಸುಮಾರು 2 ಗಂಟೆ ಮೊದಲು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಬಂದಿದ್ದರು. ಪರೀಕ್ಷೆ ಬರೆಯಲು ಬಂದ ಎಲ್ಲಾ ವಿದ್ಯಾರ್ಥಿಗಳಿಗೆ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿಂದ ಉಚಿತ ಮಾಸ್ಕ್ ವಿತರಿಸುವ ಜೊತೆಗೆ ಸ್ಯಾನಿಟೈಸರ್ ಹಾಕಿ ಆರೋಗ್ಯ ತಪಾಸಣೆ ನಡೆಸಲಾಯಿತು ಎಂದು ಮಾಹಿತಿ ನೀಡಿದರು.