ಚಿಕ್ಕೋಡಿ: ರೈಲು ಹಳಿಯಲ್ಲಿ ಹೋಗುತ್ತಿದ್ದ ಕುರಿಗಳ ಮೇಲೆ ರೈಲು ಹರಿದ ಪರಿಣಾಮ 15 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಬೆಳಗಾವಿಯ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದ ರೈಲು ನಿಲ್ದಾಣದ ಹೊರವಲಯದಲ್ಲಿರುವ ರೈಲ್ವೆ ಗೇಟ್ ಬಳಿ ಅವಘಡ ಸಂಭವಿಸಿದೆ. ಚಿಂಚಲಿ ಪಟ್ಟಣದ ವಸಂತ ಜಾವೇದಾರ್ ಎಂಬುವವರಿಗೆ ಸೇರಿದ 15 ಕುರಿಗಳು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಕುರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.
ಘಟನೆಯಿಂದ ಆಘಾತಕ್ಕೆ ಒಳಗಾದ ಮಾಲೀಕ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಬೆಳಗಾವಿಯಿಂದ ಮಹಾರಾಷ್ಟ್ರದ ಮೀರಜ್ ಕಡೆಗೆ ಹೊರಟಿದ್ದ ಜೋದಪುರ್ ರೈಲಿಗೆ ಕುರಿಗಳು ಅಡ್ಡ ಬಂದಿದೆ. ರೈಲು ಬರುತ್ತಿರುವುದನ್ನು ಗಮನಿಸದೇ ಕುರಿಗಳನ್ನು ಬಿಟ್ಟಿದಕ್ಕೆ ಅಪಘಾತ ಸಂಭವಿಸಿದೆ. ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ : ಲಾರಿ ಡಿಕ್ಕಿ ಹೊಡೆದು ಮೂರು ಎತ್ತುಗಳು ಸಾವು.. ಒಂದು ಎತ್ತಿನ ಸ್ಥಿತಿ ಗಂಭೀರ