ಬೆಳಗಾವಿ: ಜಾರ್ಖಾಂಡ್ನ ಶೀಖರ್ಜಿ ಪ್ರವಾಸ ಕೈಗೊಂಡು ಮರಳಿದ್ದ ಜಿಲ್ಲೆಯ 13 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಪರಿಣಾಮ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 141ಕ್ಕೆ ಏರಿಕೆಯಾಗಿದೆ.
ದೆಹಲಿಯ ತಬ್ಲಿಘಿ, ರಾಜಸ್ಥಾನದ ಅಜ್ಮೇರ್ ಯಾತ್ರಾರ್ಥಿಗಳ ಬಳಿಕ ಶೀಖರ್ಜಿ ನಂಜು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ. ಆರಂಭದಲ್ಲಿ ದೆಹಲಿಯ ಧರ್ಮಸಭೆಯಲ್ಲಿ ಪಾಲ್ಗೊಂಡು ಬಂದಿದ್ದ 14 ತಬ್ಲಿಘಿಗಳಿಗೆ, ನಂತರ ಅಜ್ಮೇರದಿಂದ ಬಂದಿದ್ದ 30 ಮಂದಿಗೆ ಸೋಂಕು ತಗುಲಿತ್ತು.
ನಾಲ್ಕೈದು ದಿನಗಳ ಹಿಂದೆಯೂ ನಾಲ್ವರು ಶೀಖರ್ಜಿ ಯಾತ್ರಾರ್ಥಿಗಳಿಗೆ ಸೋಂಕು ವಕ್ಕರಿಸಿತ್ತು. ಇಂದು ಮತ್ತೆ 13 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಶೀಖರ್ಜಿಯಿಂದ ಮರಳಿದ್ದ ಜಿಲ್ಲೆಯ ಒಟ್ಟು 17 ಜನರಿಗೆ ಸೋಂಕು ದೃಢಪಟ್ಟಿದೆ. ಜಿಲ್ಲೆಗೆ ಬೇರೆ ಬೇರೆ ಕಡೆಯಿಂದ ಕೊರೊನಾ ಬಂದಿದ್ದು, ಜನರಲ್ಲಿ ಆತಂಕ ಮೂಡಿಸಿದೆ.