ETV Bharat / state

ರೈತರಿಗೆ ಸಿಹಿಸುದ್ದಿ ನೀಡಿದ ಬೊಮ್ಮಾಯಿ: 3 ಲಕ್ಷದವರೆಗಿದ್ದ ಶೂನ್ಯ ಬಡ್ಡಿದರ ಸಾಲದ ಮೊತ್ತ 5 ಲಕ್ಷಕ್ಕೆ ಏರಿಕೆ

author img

By

Published : Feb 17, 2023, 10:55 AM IST

Updated : Feb 17, 2023, 1:34 PM IST

ಹಣಕಾಸು ಸಚಿವರೂ ಆಗಿರುವ ಸಿಎಂ ಬಸವರಾಜ ಬೊಮ್ಮಾಯಿ ಬಿಜೆಪಿ ಸರ್ಕಾರದ ಅವಧಿಯ ಕೊನೆಯ ಬಜೆಟ್​ ಹಾಗೂ ತಮ್ಮ ಎರಡನೇ ಬಜೆಟ್​ ಅನ್ನು ಮಂಡಿಸುತ್ತಿದ್ದಾರೆ.

Bommai gave goodnews for Farmer
ರೈತರಿಗೆ ಸಿಹಿಸುದ್ದಿ ನೀಡಿದ ಬೊಮ್ಮಾಯಿ

ಕೃಷಿ ಬಜೆಟ್​ ಮಂಡಿಸುತ್ತಿರುವ ಬಸವರಾಜ ಬೊಮ್ಮಾಯಿ

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯ ಕೊನೆಯ ಬಜೆಟ್​ ಮಂಡನೆ ಮಾಡುತ್ತಿರುವ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್​ನಲ್ಲಿ ರೈತರಿಗೆ ಬಂಪರ್​ ಗಿಫ್ಟ್​ ನೀಡಿದ್ದಾರೆ. ಈ ಬಾರಿ ಶೂನ್ಯ ಬಡ್ಡಿದರದಲ್ಲಿ ರೈತರಿಗೆ 5 ಲಕ್ಷದವರೆಗೆ ಸಾಲ ನೀಡುವ ಯೋಜನೆಯನ್ನು ಘೋಷಿಸಿದ್ದಾರೆ. ಈ ಹಿಂದೆ 3 ಲಕ್ಷವರಗಿದ್ದ ಶೂನ್ಯ ಬಡ್ಡಿದರದ ಸಾಲದ ಮೊತ್ತವನ್ನು ರೂ. 5 ಲಕ್ಷಕ್ಕೆ ಏರಿಕೆ ಮಾಡಿ ಬಸವರಾಜ ಬೊಮ್ಮಾಯಿ ರೈತರಿಗೆ ಸಿಹಿಸುದ್ದಿ ನೀಡಿದ್ದಾರೆ.

ಇಂದಿನ ಬಜೆಟ್​ನಲ್ಲಿ ಕೃಷಿ ಮತ್ತು ಪೂರಕ ಚಟುವಟಿಕೆಗಳ ವಲಯಕ್ಕೆ 2023- 24ನೇ ಸಾಲಿನಲ್ಲಿ ಒಟ್ಟಾರೆ 39,031 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಈ ವರ್ಷ ರಾಜ್ಯದ 30 ಲಕ್ಷಕ್ಕಿಂತಲೂ ಹೆಚ್ಚು ರೈತರಿಗೆ 25 ಸಾವಿರ ಕೋಟಿ ರೂ ಸಾಲ ನೀಡುವ ಗುರಿಯನ್ನು ಹೊಂದಲಾಗಿದೆ. ಕಿಸಾನ್​ ಕ್ರೆಡಿಟ್​ ಕಾರ್ಡ್​ ಹೊಂದಿರುವ ರೈತರಿಗೆ ಭೂ ಸಿರಿ ಎಂಬ ನೂತನ ಯೋಜನೆ ಘೋಷಣೆಯಾಗಿದ್ದು, ಈ ನೂತನ ಯೋಜನೆಯಡಿ 2023- 24 ಸಾಲಿನಲ್ಲಿ 10 ಸಾವಿರ ರೂ. ಹೆಚ್ಚುವರಿ ಸಹಾಯಧನ ನೀಡಲು ನಿರ್ಧಾರ ಮಾಡಲಾಗಿದೆ. ಇದರಿಂದ 50 ಲಕ್ಷ ರೈತರಿಗೆ ಅನುಕೂಲವಾಗಲಿದೆ.

ರೈತಸಿರಿ ಯೋಜನೆಯಡಿಯಲ್ಲಿ ಕಿರುಧಾನ್ಯ ಬೆಳೆಗಾರರಿಗೆ ಪ್ರತಿ ಹೆಕ್ಟೇರ್​ಗೆ 10 ಸಾವಿರ ಸಹಾಯಧನ, ಪ್ರತಿ ತಾಲೂಕಿಗೆ ಒಂದರಂತೆ ತಲ 50 ಹೆಕ್ಟೆ ಪ್ರದೇಶದಲ್ಲಿ ಗುಚ್ಛ ಮಾದರಿಯಲ್ಲಿ ಮುಂದಿನ ನಾಲ್ಕು ವರ್ಷದಲ್ಲಿ ಒಂದು ಲಕ್ಷ ಹೆಕ್ಟೇರ್ ಪ್ರದೇಶವನ್ನು ನೈಸರ್ಗಿಕ ಮತ್ತು ಸಮಗ್ರ ಕೃಷಿಗೆ ಒಳಪಡಿಸುವ ಗುರಿ ಇದೆ. ಸಹಸ್ರ ಸರೋವರ ಕಾರ್ಯಕ್ರಮದಲ್ಲಿ ರಾಜ್ಯದಲ್ಲಿ ಸಾವಿರ ಸಣ್ಣ ಸರೋವರಗಳ ಅಭಿವೃದ್ಧಿ. ಸಹ್ಯಾದ್ರಿ ಸಿರಿ ಯೋಜನೆ ಅಡಿ ಕರಾವಳಿ ಮಲೆನಾಡು ಹಾಗೂ ಅರೆ ಮಲೆನಾಡು ಪ್ರದೇಶದಲ್ಲಿ ಬೇಸಿಗೆ ನೀರು ಸಂಸ್ಕರಣೆಗೆ ಬಾವಿ ಕಿಂಡಿ ಅಣೆ ನಾಲಾ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಈ ಎರಡು ಯೋಜನೆಗಳಿಗೆ 75 ಕೋಟಿ ರೂ ಅನುದಾನ ಮೀಸಲಿಡಲಾಗಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.

ಪಿಎಂ ಕಿಸಾನ್ ಯೋಜನೆ: ಪಿಎಂ ಕಿಸಾನ್​ ಯೋಜನೆಯಡಿ ಕಳೆದ ಮೂರು ವರ್ಷಗಳಲ್ಲಿ ಕೇಂದ್ರ ಸರ್ಕಾರದಿಂದ 10,930 ಕೋಟಿ ರೂ. ಹಾಗೂ ರಾಜ್ಯ ಸರ್ಕಾರದಿಂದ 4,822 ಕೋಟಿ ರೂ ಒಟ್ಟಾರೆಯಾಗಿ ಇದುವರೆಗೆ 15,752 ಕೋಟಿ ರೂಪಾಯಿಗಳನ್ನು ಈಗಾಗಲೇ ರೈತರ ಖಾತೆಗೆ ಜಮೆ ಮಾಡಲಾಗಿದೆ. ಕಳೆದ ವರ್ಷ ಬಜೆಟ್​ನಲ್ಲಿ ಘೋಷಣೆ ಮಾಡಿದ್ದ ಡೀಸಲ್​ ಸಬ್ಸಿಡಿ ನೀಡುವ ರೈತ ಶಕ್ತಿ ಯೋಜನೆಗೆ ಈ ವರ್ಷದ ಬಜೆಟ್​ನಲ್ಲಿ 400 ಕೋಟಿ ರೂ ಅನುದಾನ ಒದಗಿಸಲಾಗಿದೆ.

ಯಾಂತ್ರೀಕೃತ ಕೃಷಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಬಾರಿ ಬಜೆಟ್​ನಲ್ಲಿ 2,037 ಕೋಟಿ ರೂ ಮೀಸಲಿಡಲಾಗಿದೆ. ಕೃಷಿ ಹಾಗೂ ತೋಟಗಾರಿಕೆಯಲ್ಲಿ ಹನಿ ನೀರಾವರಿಗಾಗಿ 2,900 ಕೋಟಿ ರೂ. ಮಾರುಕಟ್ಟೆ ನೆರವಿಗಾಗಿ ನೀಡಲಾಗಿದೆ. ಕೃಷಿ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಮುಂತಾದ ಪರಿಕರಗಳಿಗೆ 962 ಕೋಟಿ ರೂ. ವೆಚ್ಚ ಮಾಡಲಾಗಿದೆ. ಬೀಜ, ರಸಗೊಬ್ಬರ, ಕ್ರಿಮಿನಾಶಕ ಖರೀದಿಸಲು ಪ್ರೋತ್ಸಾಹvನ್ನೂ ನೀಡಲಾಗುವುದು ಎಂದರು.

ವೈಜ್ಞಾನಿಕ ಪದ್ಧತಿಗಳ ಅಳವಡಿಕೆಗೆ ಪ್ರೋತ್ಸಾಹ: ಕೃಷಿ ಕ್ಷೇತ್ರದಲ್ಲಿ ನಮ್ಮ ಸರ್ಕಾರ ಹಲವು ಮಹತ್ವಪೂರ್ಣ ಕ್ರಮಗಳನ್ನು ಕೈಗೊಂಡಿದೆ. ತಂತ್ರಜ್ಞಾನ ಹಾಗೂ ವೈಜ್ಞಾನಿಕ ಪದ್ಧತಿಗಳ ಅಳವಡಿಕೆಯೊಂದಿಗೆ ರೈತರು ಮಾಹಿತಿಪೂರ್ಣ ನಿರ್ಧಾರ ಕೈಗೊಳ್ಳಲು ಪೂರಕ ಕ್ರಮಗಳನ್ನು ನಮ್ಮ ಸರ್ಕಾರ ಜಾರಿಗೊಳಿಸಲಿದೆ. ಇದಲ್ಲದೆ, ಕೃಷಿಯನ್ನು ಲಾಭದಾಯಕವಾಗಿಸಲು ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆ ಮತ್ತು ರಪ್ತಿಗೆ ಒತ್ತು ನೀಡಲಾಗುತ್ತಿದೆ. ಸಮಗ್ರ ಕೃಷಿ ಪದ್ಧತಿಯನ್ನು ಪ್ರೋತ್ಸಾಹಿಸುವ ಮೂಲಕ ರೈತರ ಆದಾಯದಲ್ಲಿ ಸ್ಥಿರತೆಯನ್ನು ತರಲು ನಮ್ಮ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ನೀರಾವರಿ ಪಂಪ್​ಸೆಟ್​ಗಳಿಗೆ ಸಹಾಯಧನ: ನೀರಾವರಿ ಪಂಪ್ಸೆಟ್​ಗೆ 52,590 ಕೋಟಿ ರೂ ವಿದ್ಯುತ್ ಸಹಾಯಧನ, ಫಸಲ್ ಭೀಮಾ ಯೋಜನೆ ಅಡಿ 86 ಲಕ್ಷ ರೈತರ ಬೆಳೆ ವಿಮೆಗಾಗಿ ರೂ. 4,900 ಕೋಟಿ ಪಾವತಿಸಲಾಗಿದೆ. ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ಭತ್ತ, ರಾಗಿ, ಜೋಳ, ಹೆಸರುಕಾಳು ಮತ್ತು ತೊಗರಿ ಮುಂತಾದ ಆಹಾರ ಧಾನ್ಯಗಳ ಖರೀದಿಗೆ 6,650 ಕೋಟಿ ಮೀಸಲಿಡಲಾಗಿದೆ. ಬೆಳೆಗಳ ಸಂರಕ್ಷಣೆ ಶೇಖರಣೆಗಾಗಿ 10.45 ಲಕ್ಷ ಫಲಾನುಭವಿಗಳಿಗೆ 175 ಕೋಟಿ ರೂ ನೆರವು, ತೋಟಗಾರಿಕೆ ಹಾಗೂ ರೇಷ್ಮೆ ಕೃಷಿಗೆ ಪ್ರೋತ್ಸಾಹ ನೀಡುವ ಉದ್ದೇಶಕ್ಕೆ 545 ಕೋಟಿ ರೂ ವೆಚ್ಚ ಮಾಡಲಾಗಿದೆ.

ರೈತ ವಿದ್ಯಾನಿಧಿ ಯೋಜನೆ ಅಡಿ 725 ಕೋಟಿ ಘೋಷಣೆ: ರೈತ ವಿದ್ಯಾನಿಧಿ ಯೋಜನೆ ಅಡಿಯಲ್ಲಿ 10.32 ಲಕ್ಷ ವಿದ್ಯಾರ್ಥಿಗಳಿಗೆ ಒಟ್ಟು 725 ಕೋಟಿ ರೂ. ನೀಡಲಾಗಿದೆ. ರಾಜ್ಯದ 3.6 ಲಕ್ಷ ರೈತರ ಅನುಕೂಲಕ್ಕೆ 2022- 23ನೇ ಸಾಲಿನಲ್ಲಿ ಪ್ರಥಮ ಬಾರಿಗೆ 5 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಗೆ ಪ್ರತಿ ಕ್ವಿಂಟಲ್​ಗೆ 3,578 ರೂ. ನಂತೆ 1,879 ಕೋಟಿ ರೂ. ವೆಚ್ಚ ಮಾಡಲಾಗಿದೆ. 75,000 ರೈತರಿಂದ ಭತ್ತ ಹಾಗೂ 40,000 ರೈತರಿಂದ ಬಿಳಿ ಜೋಳ ಖರೀದಿಗೆ 1,072 ಕೋಟಿ ರೂಪಾಯಿ. ಈ ಸಾರಿ ಕುಚಲಕ್ಕಿ ಖರೀದಿಗೂ ಸಹ ಪ್ರೋತ್ಸಾಹ ನೀಡಲಾಗುವುದು.

2022- 23ನೇ ಸಾಲಿನಲ್ಲಿ 13.09 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬೆಳೆ ಹಾನಿಯಾದ 14.63 ಲಕ್ಷ ರೈತರ ಬ್ಯಾಂಕ್ ಖಾತೆಗೆ ನೇರವಾಗಿ 2,031 ಕೋಟಿ ರೂ.ಗಳನ್ನು ಎರಡು ತಿಂಗಳ ಅವಧಿಯೊಳಗೆ ಜಮೆ ಮಾಡಲಾಗುವುದು. ಬೀದರ್ ಕಲಬುರ್ಗಿ ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಯ ನೆಟೆ ರೋಗದಿಂದ ಹಾನಿಯಾಗಿರುವ ತೊಗರಿ ಬೆಳೆಗೆ ಹೆಕ್ಟೇರ್​ಗೆ 10,000 ರೂ. ನಂತೆ 223 ಕೋಟಿ ರೂ ಪರಿಹಾರ ನೀಡಲಾಗುವುದು.

ಅತಿ ಸಣ್ಣ ರೈತರ ಕುಟುಂಬಳಿಕೆ ಜೀವನ್​ ಜ್ಯೋತಿ ವಿಮಾ ಯೋಜನೆ: ರಾಜ್ಯದ 56 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರ ಕುಟುಂಬಗಳಿಗೆ 180 ಕೋಟಿ ರೂ ವೆಚ್ಚದಲ್ಲಿ ಜೀವನ್ ಜ್ಯೋತಿ ವಿಮಾ ಯೋಜನೆ ನೆರವಿನೊಂದಿಗೆ ಬದುಕಿನ ಭದ್ರತೆ ನೀಡಲಾಗುವುದು. ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ 300 ಹೈಟೆಕ್ ಹಾರ್ವೆಸ್ಟರ್​ಗಳನ್ನು ಹಂತ ಹಂತವಾಗಿ ಒದಗಿಸಲು ಉದ್ದೇಶಿಸಲಾಗಿದೆ. 2023- 24ನೇ ಸಾಲಿನಲ್ಲಿ 100 ಹೈಟೆಕ್ ಹಾರ್ವೆಸ್ಟರ್​ಗಳಿಗೆ 50 ಲಕ್ಷ ರೂ ನಂತೆ 50 ಕೋಟಿ ರೂ ನೀಡಲಾಗುವುದು. ರೈತ ಉತ್ಪಾದಕ ಸಂಸ್ಥೆಗಳ ಪ್ರೋತ್ಸಾಹಕ್ಕೆ ತಲಾ ಹತ್ತು ಲಕ್ಷ ರೂ ವರೆಗಿನ ಬಂಡವಾಳಕ್ಕೆ ಐದು ವರ್ಷಗಳ ಅವಧಿಗೆ ಬ್ಯಾಂಕುಗಳ ಮೂಲಕ ಮುಖ್ಯಮಂತ್ರಿ ರೈತ ಉನ್ನತಿ ಯೋಜನೆ ಅಡಿ ಬಡ್ಡಿ ಸಹಾಯಧನ ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.

ಬಜೆಟ್​ ಮಂಡನೆ ವೇಳೆ ಪ್ರಸಿದ್ಧ ಕವಿಗಳ ಸಾಲುಗಳನ್ನು ಹೇಳುವ ಪದ್ಧತಿಯೊಂದು ಬೆಳೆದುಬಂದಿದ್ದು, ಬಜೆಟ್​ ಮಧ್ಯೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕನ್ನಡ ನಾಡಿನ ಹೆಮ್ಮೆಯ ಪ್ರೇಮಕವಿ ಕೆ ಎಸ್​ ನರಸಿಂಹಸ್ವಾಮಿ ಅವರ ಕವನದ 'ಮಣ್ಣಿನ ಕೊಡುಗೆಗೆ ನೋವಿಗೆ ನಲಿವಿಗೆ ಕನ್ನಡಿ ಹಿಡಿವಾಸ ಮಾನವ ಹೃದಯದ ಕರುಣೆಗೆ ಒಲವಿಗೆ ದನಿಗೂಡಿಸುವಾಸೆ..' ಸಾಲುಗಳನ್ನು ಹಾಡಿದ್ದಾರೆ.

ಇದನ್ನೂ ಓದಿ: ಬಜೆಟ್ ಮಂಡನೆಗೂ ಮುನ್ನ ಸಿಎಂ ಟೆಂಪಲ್ ರನ್: ಮಹಾ ಜನತೆಯ ಹೆಸರಿನಲ್ಲಿ ಅರ್ಚನೆ ಮಾಡಿಸಿದ ಬೊಮ್ಮಾಯಿ‌

Last Updated : Feb 17, 2023, 1:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.