ETV Bharat / state

ಜಮೀರ್ ಕೊರೊನಾ ಮುಕ್ತ; ಆಸ್ಪತ್ರೆಯಿಂದ ಡಿಸ್ಚಾರ್ಜ್

ಕೊರೊನಾ ಸೋಂಕಿನಿಂದ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಸಚಿವ ಜಮೀರ್ ಅಹಮ್ಮದ್​ ಚಿಕಿತ್ಸೆ ಪಡೆದು ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಈ ಕುರಿತು ಟ್ವೀಟ್​ ಮಾಡಿರುವ ಅವರು ವೈದ್ಯರ ಸಲಹೆಯಂತೆ ಇನ್ನೂ 10 ದಿನ ಹೋಂ ಕ್ವಾರಂಟೈನ್​​ನಲ್ಲಿರುವುದಾಗಿ ತಿಳಿಸಿದ್ದಾರೆ.

zameer ahmed khan discharge from hospital
ಆಸ್ಪತ್ರೆಯಿಂದ ಡಿಸ್ಚಾರ್ಜ್
author img

By

Published : Aug 25, 2020, 10:46 PM IST

ಬೆಂಗಳೂರು: ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್ ಇಂದು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಆಸ್ಪತ್ರೆಯಿಂದ ಡಿಸ್ಚಾರ್ಜ್
ಈ ಸಂಬಂಧ ಟ್ವೀಟ್ ಮಾಡಿರುವ ಅವರು ಕೊರೊನಾದಿಂದ ಗುಣಮುಖನಾಗಿ ಮನೆಗೆ ಮರಳುತ್ತಿದ್ದೇನೆ. ವೈದ್ಯರ ಸಲಹೆಯ ಮೇರೆಗೆ ಮುಂದಿನ 10 ದಿನಗಳ ಕಾಲ ನಾನು ಹೋಮ್ ಕ್ವಾರೆಂಟೈನ್‌ನಲ್ಲಿ ಇರಲಿದ್ದು, ನಂತರದಲ್ಲಿ ಸಕ್ರಿಯ ಜನಸೇವೆಗೆ ಮರಳಲಿದ್ದೇನೆ. ಈವರೆಗೆ ಅತ್ಯಂತ ಕಾಳಜಿಯಿಂದ ನನಗೆ ಚಿಕಿತ್ಸೆ ನೀಡಿದ ವಿಕ್ರಂ ಆಸ್ಪತ್ರೆಯ ಎಲ್ಲಾ ವೈದ್ಯಕೀಯ ಸಿಬ್ಬಂದಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.ನಾನು ಶೀಘ್ರ ಗುಣಮುಖನಾಗುವಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮತ್ತು ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಜನರು ಮಸೀದಿ, ಮಂದಿರ, ಚರ್ಚ್‌ಗಳಲ್ಲಿ ಪ್ರಾರ್ಥನೆ, ಹರಕೆ, ಪೂಜೆಗಳನ್ನು ಮಾಡಿದ್ದಾರೆ. ತಮ್ಮೆಲ್ಲರ ಪ್ರೀತಿಯ ಋಣ ದೊಡ್ಡದು. ತಮ್ಮ ಸೇವೆಯ ಮೂಲಕ ಅದನ್ನು ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ‌ ಎಂದಿದ್ದಾರೆ. ನಾನು ಆಸ್ಪತ್ರೆಗೆ ದಾಖಲಾದ ದಿನವೇ ಕರೆ ಮಾಡಿ, ನನಗೆ ಧೈರ್ಯ ತುಂಬಿ, ಶೀಘ್ರ ಗುಣಮುಖರಾಗುವಂತೆ ಹಾರೈಸಿದ ಆತ್ಮೀಯರು, ನಮ್ಮ ಪಕ್ಷದ ಹಿರಿಯ ನಾಯಕರೂ ಆದ ಸಿದ್ದರಾಮಯ್ಯ ಅವರಿಗೂ ಹಾಗೂ ಮಾಜಿ ಪ್ರಧಾನಿಗಳಾದ ದೇವೇಗೌಡರಿಗೂ ಧನ್ಯವಾದಗಳು. ತಮ್ಮ ಪ್ರೀತಿ ಮತ್ತು ಕಾಳಜಿಗೆ ನಾನು ಆಭಾರಿ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.