ETV Bharat / state

ಬಿಜೆಪಿ ಮುಖಂಡರ ಹೆಸರಲ್ಲಿ ವಂಚನೆ ಪ್ರಕರಣ: ಯುವರಾಜನ ಮತ್ತೊಂದು ಮುಖವಾಡ ಬಯಲು - cheating in the name of BJP leaders case

ಯುವರಾಜ್ ಪೋಸ್ಟಿಂಗ್ ಮಾತ್ರವಲ್ಲ, ಜಾಗ ಕೊಡಿಸಿವುದಾಗಿಯೂ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ವಿಚಾರಣೆ ಮುಂದುವರೆದಿದೆ.

cheating in the name of BJP leaders case
ಬಿಜೆಪಿ ಮುಖಂಡರ ಹೆಸರಲ್ಲಿ ವಂಚನೆ ಪ್ರಕರಣ
author img

By

Published : Dec 22, 2020, 10:11 AM IST

ಬೆಂಗಳೂರು: ಬಿಜೆಪಿ ಮುಖಂಡರ ಹೆಸರಲ್ಲಿ ವಂಚನೆ ಮಾಡುತ್ತಿದ್ದ ಆರೋಪಿ ಯುವರಾಜ್ ಅಲಿಯಾಸ್ ಸೇವಾಲಾಲ್ ಸ್ವಾಮಿ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ.

ಯುವರಾಜ್ ಪೋಸ್ಟಿಂಗ್ ಮಾತ್ರವಲ್ಲ, ಜಾಗ ಕೊಡಿಸುವುದಾಗಿಯೂ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಮೈಸೂರು ಮೂಲದ ಡಾ.ಗುರುರಾಜ್ ರವಿ ಎಂಬುವರಿಗೆ ದೇವನಹಳ್ಳಿ ಬಳಿ ವಿವಾದಿತ ಭೂಮಿ ಇದ್ದು, ವಿವಾದ ಬಗೆಹರಿಸಿ ಕೊಡಿಸುವುದಾಗಿ ನಂಬಿಸಿದ್ದ. ಯುವರಾಜ್ ಮಾತಿಗೆ ಮರುಳಾಗಿ ಗುರುರಾಜ್ ಕೋಟ್ಯಂತರ ರೂಪಾಯಿಯನ್ನು ಈತನಿಗೆ ಕೊಟ್ಟಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ಓದಿ: ಬಿಜೆಪಿ ಮುಖಂಡರ ಹೆಸರಲ್ಲಿ ವಂಚನೆ ಪ್ರಕರಣ: ಸಾವಿರಾರು ಕೋಟಿ ಹಣಕ್ಕೆ ಈತನೇ ‘ಯುವರಾಜ’!

ಜಮೀನಿನ ಮಾಲೀಕರಿದ್ದಾರೆ ಎಂದು ತೋರಿಸಲು ಖಾಲಿ ಚೆಕ್ ಕೊಡಿ ಎಂದು ಕೇಳಿದ್ದಾನೆ. ಈ ವೇಳೆ 85 ಕೋಟಿ ರೂಪಾಯಿ ಬ್ಲ್ಯಾಂಕ್ ಚೆಕ್​ಗಳನ್ನ ರಿಯಲ್ ಎಸ್ಟೇಟ್ ಉದ್ಯಮಿ ಗುರುರಾಜ್ ಸ್ವಾಮಿಗೆ ಕೊಟ್ಟಿದ್ದಾರೆ ಎಂದು ಹೇಳಲಾಗ್ತಿದೆ.

ಆರೋಪಿ 6.5 ಕೋಟಿ ರೂಪಾಯಿ ಹಣ ಹಾಗೂ 85 ಕೋಟಿ ರೂ. ಚೆಕ್ ಪಡೆದು ಕೈಗೆ ಸಿಗದೆ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಈ ಮಧ್ಯೆ ಹಣ ವಾಪಸ್ ಬರದೇ ಇದ್ದಾಗ ಗುರುರಾಜ್ ಹಣ ಕೇಳಿದ್ರೆ ಯುವರಾಜ ಜೀವ ಬೆದರಿಕೆ ಹಾಕಿದ್ದಾನೆ ಎಂಬ ಆರೋಪ ಹಿನ್ನೆಲೆಯಲ್ಲಿ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ವಿಚಾರಣೆ ಮುಂದುವರೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.