ETV Bharat / state

ಮೇಷ್ಟ್ರಿಂದ ಹೆಚ್​ಡಿಕೆಗೆ ಪಾಠ: ಮಹಿಳೆಯರ ವಿಚಾರದಲ್ಲಿ ಭಾಷಾಹಿಡಿತ ಇರಲಿ ಎಂದ ವೈಎಸ್‌ವಿ ದತ್ತಾ - ಸುಮಲತಾ ವಿರುದ್ಧ ಕುಮಾರಸ್ವಾಮಿ ಹೇಳಿಕೆ ವಿಚಾರ

ಸಂಸದೆ ಸುಮಲತಾ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಕುಮಾರಸ್ವಾಮಿ ವಿಚಾರಕ್ಕೆ ಜೆಡಿಎಸ್ ನಾಯಕ ವೈಎಸ್‌ವಿ ದತ್ತಾ ಪ್ರತಿಕ್ರಿಯಿಸಿದ್ದು, ಉತ್ತಮ ಪದಗಳನ್ನು ಬಳಸಿ ಮಾತಾಡಬೇಕು ಎಂದಿದ್ದಾರೆ.

kumarswamy
ವೈಎಸ್ ವಿ ದತ್ತಾ ಪ್ರತಿಕ್ರಿಯೆ
author img

By

Published : Jul 7, 2021, 2:47 PM IST

ಬೆಂಗಳೂರು: ಸಂಸದೆ ಸುಮಲತಾ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಕುಮಾರಸ್ವಾಮಿ ವಿಚಾರಕ್ಕೆ ವಿಧಾನಸೌಧದಲ್ಲಿ ಜೆಡಿಎಸ್ ನಾಯಕ ವೈಎಸ್‌ವಿ ದತ್ತಾ ಪ್ರತಿಕ್ರಿಯಿಸಿದ್ದು, ಕನ್ನಡ ಶ್ರೀಮಂತ ಭಾಷೆ, ಕನ್ನಡದಲ್ಲಿ ಸಾಕಷ್ಟು ಪದಗಳಿವೆ. ಒಳ್ಳೊಳ್ಳೆ ಪದಗಳನ್ನು ಬಳಸಿ ರಾಜಕಾರಣದಲ್ಲಿ ಟೀಕೆ ಮಾಡಲು ಅವಕಾಶವಿದೆ ಎಂದರು.

ವೈಎಸ್ ವಿ ದತ್ತಾ ಪ್ರತಿಕ್ರಿಯೆ

ಈ ರೀತಿಯ ಹೇಳಿಕೆಗೆ ನನ್ನದೇ ಆಕ್ಷೇಪಗಳಿವೆ. ಇತ್ತೀಚೆಗೆ ಎಲ್ಲ ರಾಜಕಾರಣಿಗಳು ಇದೇ ತರಹ ಹೇಳಿಕೆಗಳನ್ನು ನೀಡುವುದು ಸರಿ ಕಾಣುವುದಿಲ್ಲ. ಉತ್ತಮ ಭಾಷಾ ಪ್ರಯೋಗದಿಂದ ಎಲ್ಲ ರಾಜಕಾರಣಿಗಳು ಮಾದರಿಯಾಗಬೇಕು ಎಂದರು.

ಜೆಡಿಎಸ್​ನಲ್ಲಿ ಪ್ರಜ್ವಲ್ ರೇವಣ್ಣ ಉತ್ತಮ ನಾಯಕ ಎಂಬ ಸಂಸದೆ ಸುಮಲತಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪಕ್ಷದ ಭವಿಷ್ಯ, ಮುಂದಿನ ನಾಯಕ ಬಗ್ಗೆ ಸುಮಲತಾರಿಂದ ಹೇಳಿಸಿಕೊಳ್ಳುವ ಅಗತ್ಯ ಇಲ್ಲ.ನಮ್ಮ ಪಕ್ಷದಲ್ಲಿ ಎಲ್ಲರೂ ಸಾಮಾನ್ಯ ಕಾರ್ಯಕರ್ತರೇ ಯಾರೂ ಮೇಲಲ್ಲ, ಕೀಳಲ್ಲ ಎಂದರು.

ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಸಂಸದರೇ ಕಾವಲು ಕಾಯಲಿ ಎಂಬರ್ಥದಲ್ಲಿ ಮಾತಾಡಿರೋದಾಗಿ ಹೇಳಿದ್ದಾರೆ. ಇತ್ತೀಚೆಗೆ ಎಲ್ಲ ಪಕ್ಷಗಳ ರಾಜಕಾರಣಿಗಳೂ ಭಾಷೆ ಮೇಲೆ ಸಂವೇದನಾಶೀಲರಾಗಿ ಯೋಚಿಸಿ ಪದ ಬಳಕೆ ಮಾಡುತ್ತಿಲ್ಲ. ಇದು ತುಂಬಾ ತಪ್ಪಾಗುತ್ತೆ. ಮಾತಾಡುವಾಗ ಉತ್ತಮ ಪದಗಳನ್ನು ಬಳಸಿ ಮಾತಾಡಬೇಕು ಎಂದರು.

ಇದನ್ನೂ ಓದಿ:ಪ್ರಜ್ವಲ್​ ಹೆಸರಲ್ಲಿ ಮುಂದುವರಿದ ಹಗ್ಗಜಗ್ಗಾಟ.. ದೇವೇಗೌಡರ ಕುಟುಂಬವನ್ನು ಒಡೆಯವ ತಂತ್ರ ನಡೆಯುತ್ತಿದೆ ಎಂದ ಹೆಚ್​ಡಿಕೆ

ನಮ್ಮ ಹೇಳಿಕೆಗಳನ್ನು ಜನ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿಗೆ ಪರೋಕ್ಷವಾಗಿ ವೈ ಎಸ್ ವಿ ದತ್ತಾ ಕಿವಿಮಾತು ಹೇಳಿದ್ರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.