ಬೆಂಗಳೂರು: ನಗರದ ಕೆ.ಆರ್ ಮಾರುಕಟ್ಟೆ ಮೇಲಿನ ಫ್ಲೈ ಓವರ್ನಲ್ಲಿ ಯುವಕರ ಗುಂಪೊಂದು ಡೆಡ್ಲಿ ವ್ಹೀಲಿಂಗ್ ಮಾಡುವ ಮೂಲಕ ಪುಂಡಾಟ ಮೆರೆದಿದೆ. ವ್ಹೀಲಿಂಗ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವಕರ ಗುಂಪೊಂದು ನಾಲ್ಕು ದ್ವಿಚಕ್ರ ವಾಹನಗಳಲ್ಲಿ ಹೊರಟಿದ್ದು, ಒಂದು ಬೈಕ್ನಲ್ಲಿ ಇದ್ದ ಯುವಕರು ಏಕಾಏಕಿ ವ್ಹೀಲಿಂಗ್ ಮಾಡಿದ್ದಾರೆ.
ಈ ವೇಳೆ ಉಳಿದ ಮೂರು ಬೈಕ್ಗಳಲ್ಲಿ ಇದ್ದ ಯುವಕರು ಇದನ್ನ ಮೊಬೈಲ್ನಲ್ಲಿ ವಿಡಿಯೋ ಮಾಡಿದ್ದಾರೆ. ಯುವಕರ ಗುಂಪು ಕೆ.ಆರ್. ಮಾರುಕಟ್ಟೆ ಫ್ಲೈ ಓವರ್ ಆರಂಭದಿಂದ ಸ್ಯಾಟ್ಲೈಟ್ ಬಸ್ ನಿಲ್ದಾಣದವರೆಗೂ ವ್ಹೀಲಿಂಗ್ ಮಾಡಿದ್ದಾರೆ. ಇವರ ಪುಂಡಾಟಕ್ಕೆ ಅಕ್ಕಪಕ್ಕದ ವಾಹನ ಸವಾರರು ಗಾಬರಿಯಾಗಿದ್ದಾರೆ.
ಅದೇ ಮಾರ್ಗದಲ್ಲಿ ತೆರಳುತ್ತಿದ್ದ ಸಾರ್ವಜನಿಕರು ಈ ಯುವಕರ ಪುಂಡಾಟದ ವಿಡಿಯೋವನ್ನು ಸೆರೆಹಿಡಿದು ಸಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.