ಬೆಂಗಳೂರು: ಪಿಜಿಯಲ್ಲಿ ವಾಸವಿದ್ದ ಯುವಕನೋರ್ವ ನಿಗೂಢವಾಗಿ ಸಾವನ್ನಪ್ಪಿದ್ದು ಮೂರು ದಿನಗಳ ಬಳಿಕ ಬಾತ್ ರೂಮ್ನಲ್ಲಿ ಶವ ಪತ್ತೆಯಾದ ಘಟನೆ ದಾಸರಹಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಅನಿಲ್ ಕುಮಾರ್ ಮೃತ ಯುವಕ.
ಗೋವಿಂದರಾಜನಗರ ಠಾಣಾ ವ್ಯಾಪ್ತಿಯ ಅಗ್ರಹಾರ ದಾಸರಹಳ್ಳಿಯ ಪಿಜಿಯಲ್ಲಿ ವಾಸವಿದ್ದ ಅನಿಲ್ ಕುಮಾರ್, ಸೆಪ್ಟೆಂಬರ್ 16ರಿಂದ ನಾಪತ್ತೆಯಾಗಿದ್ದ. ಬಳಿಕ ಸಿಸಿಟಿವಿ ಪರಿಶೀಲಿಸಿದಾಗ ಕೊನೆಯದಾಗಿ ಅನಿಲ್ ರಾತ್ರಿ ಬಾತ್ ರೂಂಗೆ ತೆರಳಿದ್ದು, ಸೆಪ್ಟೆಂಬರ್ 20ರಂದು ಬಾತ್ರೂಮ್ನಲ್ಲಿ ಕೊಳೆತ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ.
ಇದನ್ನೂ ಓದಿ: ತಾಯಿಯ ಸಾವಿನಿಂದ ಮನನೊಂದು ಮಗ ಆತ್ಮಹತ್ಯೆ: ಕೆರೆಯಲ್ಲಿ ಶವ ಪತ್ತೆ
ಕೊನೆಯದಾಗಿ ಮನೆಗೆ ಕರೆ ಮಾಡಿದಾಗ ಫುಡ್ ಪಾಯಿಸನ್ ಆಗಿರುವುದಾಗಿ ಅನಿಲ್ ಹೇಳಿಕೊಂಡಿದ್ದಾನೆ. ಸೂಕ್ತ ಸುರಕ್ಷತಾ ಕ್ರಮಗಳಿಲ್ಲದಿರುವುದೇ ಮಗನ ಸಾವಿಗೆ ಕಾರಣವೆಂದು ಆತನ ಪೋಷಕರು ಆರೋಪಿದ್ದಾರೆ. ಈ ಕುರಿತು ಗೊವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.