ಬೆಂಗಳೂರು : ರೈತರನ್ನ ಭಯೋತ್ಪಾದಕರಿಗೆ ಹೋಲಿಸಿ ಹೇಳಿಕೆ ನೀಡಿದ್ದ ಕೃಷಿ ಸಚಿವ ಬಿ ಸಿ ಪಾಟೀಲ್ ವಿರುದ್ಧ ಹೈಗ್ರೌಂಡ್ಸ್ ಠಾಣೆಗೆ ಬೆಂಗಳೂರು ಯುವ ಕಾಂಗ್ರೆಸ್ ಸಮಿತಿ ಮುಖಂಡ ಎಸ್ ಮನೋಹರ್ ನೇತೃತ್ವದಲ್ಲಿ ದೂರು ನೀಡಲಾಗಿದೆ.
ಓದಿ: ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳ್ತಾರೆ.. ದಿಲ್ಲಿಯಲ್ಲಿ ಪ್ರತಿಭಟಿಸುತ್ತಿರೋರು ರೈತರಲ್ವಂತೆ, ಭಯೋತ್ಪಾದಕರಂತೆ..
ರೈತರು ಪಾಕಿಸ್ತಾನ ಬೆಂಬಲಿತರು ಎನ್ನುವ ಮೂಲಕ ರೈತರ ಮೇಲೆ ಗಂಭೀರ ಆರೋಪ ಹೊರಿಸಲಾಗಿದೆ. ರೈತ ಹೋರಾಟಕ್ಕೆ ಕಾಂಗ್ರೆಸ್ ಕುಮ್ಮಕ್ಕಿದೆ ಎಂಬ ಸಚಿವರ ಬಹಿರಂಗ ಹೇಳಿಕೆ ಸರಿಯಲ್ಲ. ರೈತರು ಯಾರು, ಯಾವ ದೇಶದವರು ಎಂಬುದಕ್ಕೆ ಸಚಿವರಿಂದ ಉತ್ತರ ಪಡೆಯುವಂತೆ ಮನವಿ ಮಾಡಲಾಗಿದೆ.
ಕೂಡಲೇ ಸಚಿವ ಬಿ ಸಿ ಪಾಟೀಲ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಮತ್ತು ಇಂತಹ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.