ETV Bharat / state

ವರ್ಷದ ಹಿಂದೆ ಮಗು ಕಿಡ್ನಾಪ್​... 60 ಸಾವಿರಕ್ಕೆ ಮಾರಾಟ ಮಾಡಿದ್ದ ಕಳ್ಳ ಅಂದರ್​​​​

ಕಳೆದ ವರ್ಷ ಬ್ಯಾಟರಾಯನಪುರದ ಶಾಮಣ್ಣ ಗಾರ್ಡನ್​​​ನಲ್ಲಿ ಮಗು ಕಳ್ಳತನವಾಗಿತ್ತು. ಕಳ್ಳತನ ಮಾಡಿ ಹೊಸೂರು ಬಳಿಯ ಯಮರೆ ಗ್ರಾಮದಲ್ಲಿ 60 ಸಾವಿರಕ್ಕೆ ಮಾರಾಟ ಮಾಡಿದ್ದನು. ಆರೋಪಿಯ ಬೆನ್ನುಬಿದ್ದ ಪೊಲೀಸರು ಕೊನೆಗೂ ಆತನ ಬಂಧಿಸಿ ಮಗುವನ್ನ ಹೆತ್ತವರ ಮಡಿಲು ಸೇರಿಸಿದ್ದಾರೆ.

youth-arrested-for-kidnaping-and-selling-baby
60 ಸಾವಿರಕ್ಕೆ ಮಾರಾಟ ಮಾಡಿದ್ದ ಕಳ್ಳ ಅಂದರ್​​​​
author img

By

Published : Aug 28, 2021, 3:30 PM IST

ಬೆಂಗಳೂರು: ಮಗು ಕಿಡ್ನಾಪ್ ಮಾಡಿ ಮಾರಾಟ ಮಾಡಿದ್ದ ಆರೋಪಿಯೋರ್ವನನ್ನ ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಕಾರ್ತಿಕ್ (24) ಎಂಬಾತನನ್ನು ಪಶ್ಚಿಮ ವಿಭಾಗದ ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.

ಕಳೆದ ವರ್ಷ ಬ್ಯಾಟರಾಯನಪುರದ ಶಾಮಣ್ಣ ಗಾರ್ಡನ್​​​ನಲ್ಲಿ 3 ವರ್ಷದ ಗಂಡು ಮಗು ಕಳ್ಳತನವಾಗಿತ್ತು. ಕಳ್ಳತನ ಮಾಡಿ ಹೊಸೂರು ಬಳಿಯ ಯಮರೆ ಗ್ರಾಮದಲ್ಲಿ 60 ಸಾವಿರಕ್ಕೆ ಮಗುವನ್ನು ಮಾರಾಟ ಮಾಡಿದ್ದನು.

ಘಟನೆ ಬಗ್ಗೆ ಮಾಹಿತಿ ಹಂಚಿಕೊಂಡ ಡಿಸಿಪಿ ಸಂಜೀವ್ ಪಾಟೀಲ್​

ಈ ಘಟನೆ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕಳೆದೊಂದು ವರ್ಷದಿಂದ ಆರೋಪಿ ಮೇಲೆ ನಿಗಾ ಇಟ್ಟಿದ್ದ ಪೊಲೀಸರು. ಮಗು ಮಾರಾಟದ ಸುಳಿವು ಪತ್ತೆ ಹಚ್ಚಿ ಇದೀಗ ಆತನನ್ನು ಬಂಧನ ಮಾಡಿದ್ದಾರೆ.

ಮಗುವನ್ನ ಪತ್ತೆ ಹಚ್ಚಿ ಸಿಡಬ್ಲ್ಯೂಸಿ (ಚೈಲ್ಡ್ ವೆಲ್ಫರ್ ಕಮಿಟಿ)ಯ ಅನುಮತಿ ಪಡೆದು ಕಾನೂನು ಪ್ರಕ್ರಿಯೆ ಮುಗಿದ ಬಳಿಕ ಪೋಷಕರ ಮಡಿಲಿಗೆ ಒಪ್ಪಿಸಿದ್ದಾರೆ. ಒಂದು ವರ್ಷದ ಬಳಿಕ ಪುಟ್ಟ ಬಾಲಕ ಹೆತ್ತವರ ಮಡಿಲು ಸೇರಿದಂತಾಗಿದೆ.

ಓದಿ: ಜರ್ಮನಿಯಿಂದ ಬೆಂಗಳೂರಿಗೆ ಡ್ರಗ್ಸ್ ಆಮದು‌..ಅಂಚೆ ಕಚೇರಿಗೆ ಬಂದ ಮಹಿಳೆ ಎನ್​ಸಿಬಿ ಬಲೆಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.