ETV Bharat / state

ಬೆಂಗಳೂರಲ್ಲಿ ಡಿಸಿಪಿ ಕಚೇರಿ ಬಳಿಯೇ ಯುವತಿಗೆ ಕಿರುಕುಳ ; ಪ್ರಕರಣ ದಾಖಲು - young woman harassed near dcp office at bengaluru

Harassment on Young Woman: ಯುವತಿಯ ಬಟ್ಟೆ ಎಳೆದಾಡಿ, ಕಿರುಕುಳ ನೀಡಿದ ಪುಂಡನೊಬ್ಬನ ವಿರುದ್ಧ ಬೆಂಗಳೂರಿನ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವತಿಗೆ ಕಿರುಕುಳ
ಯುವತಿಗೆ ಕಿರುಕುಳ
author img

By ETV Bharat Karnataka Team

Published : Nov 13, 2023, 3:14 PM IST

ಬೆಂಗಳೂರು : ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಯುವತಿಯ ಬಟ್ಟೆ ಎಳೆದಾಡಿ ಪುಂಡನೊಬ್ಬ ಕಿರುಕುಳ ನೀಡಿರುವ ಘಟನೆ ನವೆಂಬರ್ 6ರಂದು ಜಯನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜಯನಗರದ ಸೌತ್ ಎಂಡ್ ಸರ್ಕಲ್ ಬಳಿಯಿರುವ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಕಚೇರಿಯ ಮುಂಭಾಗದಲ್ಲಿಯೇ ಆರೋಪಿಯು ಅಸಭ್ಯವಾಗಿ ವರ್ತಿಸಿದ್ದಾನೆ. ಈ ಬಗ್ಗೆ 26 ವರ್ಷದ ಯುವತಿ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರುದಾರ ಯುವತಿ ಕೂಡ್ಲು ಗೇಟ್ ಬಳಿ ಕೆಲಸ ಮಾಡುತ್ತಿದ್ದು, ನವೆಂಬರ್ 6ರಂದು ರಾತ್ರಿ 10.40ರ ಸುಮಾರಿಗೆ ಕೆಲಸ ಮುಗಿಸಿ ಕನಕಪುರ ಮುಖ್ಯ ರಸ್ತೆಯ ಕಡೆಯಿರುವ ಮನೆಗೆ ತನ್ನ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಳು. ಆ ಸಂದರ್ಭದಲ್ಲಿ ಯುವತಿಯನ್ನ ಹಿಂಬಾಲಿಸಿಕೊಂಡು ಬಂದಿದ್ದ ಆರೋಪಿ ಸೌತ್ ಎಂಡ್ ಸರ್ಕಲ್ ಬಳಿಯಿರುವ ದಕ್ಷಿಣ ವಿಭಾಗದ ಡಿಸಿಪಿ ಕಚೇರಿ ಮುಂಭಾಗದಲ್ಲಿ ಆಕೆಯ ಬಟ್ಟೆ ಎಳೆದಾಡಿ, ಅಶ್ಲೀಲವಾಗಿ ನಿಂದಿಸಿದ್ದಾನೆ. ನಂತರ ಕನಕಪುರ ಮುಖ್ಯ ರಸ್ತೆಯ ಸರ್ಕಲ್ ಬಳಿ ತನ್ನ ದ್ವಿಚಕ್ರ ವಾಹನ ಯೂಟರ್ನ್ ಮಾಡಿಕೊಂಡು ತೆರಳಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸದ್ಯ ನೊಂದ ಯುವತಿ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಶೋಧ ಆರಂಭಿಸಿದ್ದಾರೆ.

ಇದನ್ನೂ ಓದಿ: ಅಮಲು ಪದಾರ್ಥ ಕುಡಿಸಿ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ: ನರ್ಸ್​ ಸೇರಿ ಮೂವರ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.