ಹುಬ್ಬಳ್ಳಿ: ಮಕ್ಕಳು ಲವ್ ಮಾಡಿದರೇ ಪಾಲಕರು ಮಕ್ಕಳಿಗೆ ಬುದ್ಧಿ ಹೇಳುವುದು ಕಾಮನ್. ಮಕ್ಕಳು ಮಾತು ಕೇಳಿಲ್ಲ ಅಂದರೆ ಪಾಲಕರು ಮಕ್ಕಳಿಗೆ ಶಿಕ್ಷೆ ಕೊಡುವುದು ಕೂಡ ಸಾಮಾನ್ಯ. ಆದರೆ ಇಲ್ಲೊಂದು ಲವ ಸ್ಟೋರಿ ಮಾತ್ರ ವಿಭಿನ್ನವಾಗಿದೆ. ಇಲ್ಲಿ ಮಕ್ಕಳ ಪ್ರೀತಿಗೆ ಪಾಲಕರು ಶಿಕ್ಷೆ ಅನುಭವಿಸುವಂತಾಗಿದೆ.
ನಡೆದಿದ್ದೇನು?: ಹುಬ್ಬಳ್ಳಿಯ ನವನಗರದ ನಂದೀಶ್ವರ ನಿವಾಸಿ ನೂರ ಅಹ್ಮದ ಬ್ಯಾಹಟ್ಟಿ ಪುತ್ರ ಸುಬಾನಿ ಬ್ಯಾಹಟ್ಟಿ ಮತ್ತು ಆತಿಯಾ ಕಿತ್ತೂರು ನಡುವೆ ಪ್ರೇಮಾಂಕುರವಾಗಿತ್ತು. ಕಳೆದ 5 ವರ್ಷದಿಂದ ಪ್ರೀತಿಸುತ್ತಿದ್ದ ಸುಬಾನಿ ಮತ್ತು ಆತಿಯಾ ಕಳೆದ ಡಿ. 29 ರಂದು ಮನೆ ಬಿಟ್ಟು ಪರಾರಿಯಾಗಿದ್ದರು.
ಈ ಹಿನ್ನೆಲೆ ಯುವತಿ ಮನೆಯವರಿಂದ ಯುವಕನ ತಂದೆಗೆ ಸಾಕಷ್ಟು ಬಾರಿ ಟಾರ್ಚರ್ ಮಾಡಿದ್ದು, ಹುಡುಗನ ತಂದೆಯನ್ನು ಕಿಡ್ನಾಪ್ ಮಾಡಿ ಹಲ್ಲೆ ಮಾಡಿದ್ದಾರೆ. ಟಾಟಾ ಸುಮೋದಲ್ಲಿ ಕಿಡ್ನಾಪ್ ಮಾಡಿ ಹುಬ್ಬಳ್ಳಿ ಹೊರಹೊಲಯದ ಪ್ರದೇಶದಲ್ಲಿ ಕಾಲಿನ ಉಗುರು ಕಿತ್ತು ಚಿತ್ರಹಿಂಸೆ ನೀಡಿದ್ದಾರೆ ಎಂಬ ಆರೋಪ ಯುವತಿಯ ಕುಟುಂಬಸ್ಥರ ಮೇಲಿದೆ.
ಈ ಕುರಿತು ನವ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಚಿತ್ರ ಹಿಂಸೆ ನೀಡಿದ್ದ ಇಬ್ರಾಹಿಂ ಖಾನ್ ಕಿತ್ತೂರ, ಇಲಿಯಾಸ್ ಕಿತ್ತೂರ, ಶಬ್ಬೀರ್ ಬೆಟಗೇರಿ, ಸಲ್ಮಾ ಕಿತ್ತೂರ, ಹೀನಾ ಕಿತ್ತೂರ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಒಟ್ಟಿನಲ್ಲಿ ಲವ್ ಮಾಡಿ ಓಡಿ ಹೋದ ಜೋಡಿ ಅಲ್ಲಿ ಆರಾಮವಾಗಿ ಇದ್ದಾರೆ. ಆದರೆ ಇಲ್ಲಿ ಮಾತ್ರ ಪಾಲಕರು ನರಕಯಾತನೆ ಅನುಭವಿಸುವಂತಾಗಿದೆ. ಪ್ರೀತಿಯನ್ನು ವಿರೋಧಿಸುವ ವಿಕೃತ ಮನಸ್ಸಿನವರಿಗೆ ಶಿಕ್ಷೆ ಕೊಡುವ ಮನಸ್ಸಾದರೂ ಹೇಗೆ ಬಂದಿದೆಯೋ ಅರ್ಥವಾಗುತ್ತಿಲ್ಲ. ಪ್ರೀತಿ ಮಾಯಾ ಬಜಾರ್ ಎಂಬುವಂತ ಮಾತು ನಿಜಕ್ಕೂ ಅಕ್ಷರಶಃ ಸತ್ಯ.