ETV Bharat / state

ಬೆಂಗಳೂರಲ್ಲಿ ಪ್ರೀತಿಸಿದ ಯುವತಿಗೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟನಾ ಪ್ರಿಯಕರ?

ಪ್ರಿಯಕರನೇ ಯುವತಿಗೆ ಬೆಂಕಿಯಿಟ್ಟು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಬೆಳಕಿಗೆ ಬಂದಿದೆ.

young-man-set-fire-on-his-lover-in-bengaluru
ಯುವತಿಗೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟ ಯುವಕ
author img

By

Published : Mar 18, 2022, 12:54 PM IST

Updated : Mar 18, 2022, 2:33 PM IST

ಬೆಂಗಳೂರು: ಪ್ರಿಯಕರನೇ ಯುವತಿಗೆ ಬೆಂಕಿ ಹಚ್ಚಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಬೆಳಕಿಗೆ ಬಂದಿದೆ. ಬಾದಾಮಿ ಮೂಲದ ಶಿವಕುಮಾರ್ ಎಂಬಾತನೇ ದಾನೇಶ್ವರಿ ಎಂಬ ಯುವತಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ.

ಯುವತಿ ದಾನೇಶ್ವರಿ ಮತ್ತು ಶಿವಕುಮಾರ್ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಮದುವೆಯ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿದ್ದು, ಕೊಲೆಯಲ್ಲಿ ಅಂತ್ಯ ಕಂಡಿದೆ ಎನ್ನಲಾಗಿದೆ. ವೀರಸಂದ್ರದ ಕಂಪನಿಯೊಂದರಲ್ಲಿ ‌ಶಿವಕುಮಾರ್ ಕೆಲಸ ಮಾಡುತ್ತಿದ್ದು, ಅಲ್ಲಿಗೆ ದಾನೇಶ್ವರಿ ಬಂದಿದ್ದಳು. ಆಗ ಇಬ್ಬರ ನಡುವೆ ಮದುವೆಯ ವಿಚಾರದಲ್ಲಿ ಕಂಪನಿ ಮುಂದೆಯೇ ಜಗಳ ನಡೆದಿದೆ. ಆ ಸಮಯದಲ್ಲಿ ಬಾಟಲ್​ನಲ್ಲಿ ಪೆಟ್ರೋಲ್ ತಂದ ಯುವಕ, ದಾನೇಶ್ವರಿ ಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ ಎನ್ನಲಾಗುತ್ತಿದೆ.

ಬೆಂಗಳೂರಲ್ಲಿ ಪ್ರೀತಿಸಿದ ಯುವತಿಗೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟನಾ ಪ್ರಿಯಕರ?

ಬಳಿಕ ದಾನೇಶ್ವರಿಯನ್ನು ಶಿವಕುಮಾರ್​ನೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದ ಎನ್ನಲಾಗಿದ್ದು, ಚಿಕಿತ್ಸೆ ಫಲಿಸದೇ ಆಕೆ ಸಾವನ್ನಪ್ಪಿದ್ದಾಳೆ. ಈ ಬಗ್ಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರೇಯಸಿ ಹತ್ಯೆ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.

ಮದುವೆ ಮಾಡಲು ಸಿದ್ಧತೆ ನಡೆದಿತ್ತು: ಘಟನೆ ಬಗ್ಗೆ ಮಾತನಾಡಿರುವ ಯುವತಿಯ ತಂದೆ ಅಶೋಕ್ ಶರ್ಮ, ನಾವು ಮಗಳ ಮದುವೆ ಮಾಡಲು ಸಿದ್ಧತೆ ನಡೆಸಿದ್ದಾಗ ಅವಳು ತಾನು ಪ್ರೀತಿಸುವ ವಿಷಯವನ್ನು ತಿಳಿಸಿದ್ದಳು. ಶಿವಕುಮಾರ್ ಹಾಗೂ ದಾನೇಶ್ವರಿ ಇಬ್ಬರೂ ಒಂದೇ ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಪ್ರೀತಿಸಿದ್ದಾರೆ. ಶಿವಕುಮಾರ್​ನನ್ನೇ ಮದುವೆಯಾಗುತ್ತೇನೆ, ಆದರೆ, ಆತ ಒಪ್ಪುತ್ತಿಲ್ಲ ಎಂದು ಅವಳು ತಮಗೆ ಹೇಳಿದ್ದಳು.

ಮದುವೆಯಾಗಲು ಕೇಳಿದಾಗ ಶಿವಕುಮಾರ್,​ ನಮ್ಮಿಬ್ಬರದು ಬೇರೆ ಬೇರೆ​​ ಜಾತಿಯಾಗಿದ್ದು, ನಿನ್ನನ್ನು ಮದುವೆಯಾದರೆ ನನ್ನ ತಂದೆ - ತಾಯಿ ಮನೆಗೆ ಸೇರಿಸುವುದಿಲ್ಲ ಅಂತ ಹೇಳಿದ್ದಾನೆ. ನಮ್ಮ ಮಗಳು ಬಿಟಿಎಂ ಲೇಔಟ್​​ನಲ್ಲಿನ ಪಿಜಿಯಲ್ಲಿದ್ದುಕೊಂಡು, ಕೋರ್ಸ್ ಮಾಡುತ್ತಿದ್ದಳು. ಮಾರ್ಚ್​​ 16ರಂದು ಘಟನೆ ಬಗ್ಗೆ ನಮಗೆ ಮಾಹಿತಿ ತಿಳಿದಿದ್ದು, ಬಳಿಕ ಆಸ್ಪತ್ರೆಗೆ ಹಣ ಕಳುಹಿಸಿ, ಚಿಕಿತ್ಸೆ ನೀಡುವುದಕ್ಕೆ ವೈದ್ಯರಿಗೆ ಹೇಳಿದ್ದೆ ಎಂದರು.

ಪೊಲೀಸರ ಮೇಲೆ ಆರೋಪ: ಇನ್ನೊಂದೆಡೆ ಪೊಲೀಸರು ಯುವತಿಯೇ ಬೆಂಕಿ ಹಚ್ಚಿಕೊಂಡಿದ್ದಾಳೆ ಎನ್ನುತ್ತಾರೆ. ಆದರೆ, ಯುವಕನೇ ರಸ್ತೆ ಪಕ್ಕದಲ್ಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ಬಳಿಕ ಆತನೇ ಅಸ್ಪತ್ರೆಗೆ ಸೇರಿಸಿ ನಮ್ಮ ನಂಬರ್ ಕೊಟ್ಟಿದ್ದಾನೆ ಎಂದು ಅಶೋಕ್ ಶರ್ಮ ಆರೋಪಿಸಿದ್ದಾರೆ.

ಯುವಕನಿಗೆ ತಕ್ಕ ಶಿಕ್ಷೆ ಆಗಬೇಕು. ನಾನು ಕೂಡ ಉಪ ತಹಸೀಲ್ದಾರ್ ಆಗಿದ್ದೇನೆ, ಸರ್ಕಾರಿ ಅಧಿಕಾರಿಯಾಗಿ ನನಗೂ ಕಾನೂನು ಗೊತ್ತಿದೆ. ಪ್ರಕರಣ ಸಂಬಂಧ ಪೊಲೀಸರು ನಮ್ಮನ್ನೇ ವಿಚಾರಣೆ ಮಾಡುತ್ತಿದ್ದಾರೆ. ನಮಗೆ ನ್ಯಾಯ ಬೇಕು ಎಂದು ಯುವತಿಯ ತಂದೆ ಅಶೋಕ್ ಶರ್ಮ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕೊಳ್ಳೇಗಾಲದಲ್ಲಿ ಪ್ಲಾಸ್ಟಿಕ್ ಆಯುತ್ತಿದ್ದ ವ್ಯಕ್ತಿಯ ಶವ ಪತ್ತೆ: ಕೊಲೆ ಶಂಕೆ!

Last Updated : Mar 18, 2022, 2:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.