ETV Bharat / state

ವಿದ್ಯುತ್​ ತಗುಲಿ ಕೈ-ಕಾಲು ಕಳೆದುಕೊಂಡ ಬಾಲಕ: ಆಸ್ಪತ್ರೆ ಬಿಲ್​ ಕಟ್ಟಲಾಗದೆ ತಾಯಿ ಕಂಗಾಲು

ಚೆನ್ನಾಗಿ ಓದಿ ಫಸ್ಟ್ ಕ್ಲಾಸ್​ನಲ್ಲಿ ಪಾಸ್ ಆಗ್ತೀನಿ ಎಂದು ಅಮ್ಮನಿಗೆ ಮಾತು ಕೊಟ್ಟಿದ್ದ ಬಾಲಕನಿಗೆ ವಿದ್ಯುತ್​ ತಗುಲಿ ಕೈ-ಕಾಲು ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Electric Shock
ವಿದ್ಯುತ್​ ತಗುಲಿ ಕೈ-ಕಾಲು ಕಳೆದುಕೊಂಡ ಬಾಲಕ
author img

By

Published : Jan 2, 2021, 3:29 PM IST

ಬೆಂಗಳೂರು: ಚೆನ್ನಾಗಿ ಓದಿ ಫಸ್ಟ್ ಕ್ಲಾಸ್​ನಲ್ಲಿ ಪಾಸ್ ಆಗ್ತೀನಿ ಎಂದು ಅಮ್ಮನಿಗೆ ಮಾತು ಕೊಟ್ಟಿದ್ದ ಬಾಲಕ ಕರೆಂಟ್ ಶಾಕ್​ನಿಂದ ಕೈ-ಕಾಲು ಕಳೆದುಕೊಂಡಿರುವ ಮನಕಲಕುವ ಘಟನೆ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸಚಿನ್(16) ಕೈ-ಕಾಲು ಕಳೆದುಕೊಂಡಿರುವ ಬಾಲಕ. ಬೇಗೂರಿನ ಸೇಂಟ್ ಫಿಲೊಮಿನಾ ಸ್ಕೂಲ್​ನಲ್ಲಿ ಎಸ್ಎಸ್ಎಲ್‌ಸಿ‌ ವ್ಯಾಸಂಗ ಮಾಡುತ್ತಿದ್ದ. ಸಚಿನ್ ಎರಡು ದಿನಗಳ ಹಿಂದೆ ತನ್ನ ಸ್ನೇಹಿತ ರವಿ ಮನೆಗೆ ಓದಿಕೊಳ್ಳಲು ಹೋಗಿದ್ದ. ಈ ವೇಳೆ ಸ್ನೇಹಿತ ರವಿ ಮನೆಯ ಟೆರೇಸ್ ಮೇಲೆ ಕೂತು ಓದುತಿದ್ದಾಗ ಸಚಿನ್ ಬುಕ್ ಬಿದ್ದ ಕಾರಣ ಅದನ್ನು ತೆಗೆದುಕೊಳ್ಳಲು ಹೋದಾಗ ಆತನಿಗೆ ವಿದ್ಯುತ್ ತಗುಲಿದೆ. ತಕ್ಷಣ ಸಚಿನ್ ತಾಯಿಗೆ ರವಿ ಮಾಹಿತಿ ನೀಡಿದ್ದಾನೆ. ವೈರ್ ಮೇಲೆ ಸಚಿನ್ ನೇತಾಡುತ್ತಿದ್ದನ್ನು ಕಂಡ ತಾಯಿ ತೇಜಸ್ವಿನಿ ದೊಣ್ಣೆಯಿಂದ ವೈರ್​ನಲ್ಲಿ ಸಿಲುಕಿದ್ದ ಸಚಿನ್​ ಕೈ ತೆಗೆದಿದ್ದಾರೆ. ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಈ ವೇಳೆ ವೈದ್ಯರು ತಪಾಸಣೆ ನಡೆಸಿ, ಕೋಮಾ ಹಂತದಲ್ಲಿದ್ದಾನೆ. ಬದಕೂಳಿದರು ಟ್ರೀಟ್​ಮೆಂಟ್ ಕೊಡೋಕೆ ಕಷ್ಟವಾಗುತ್ತೆ ಎಂದಿದ್ದರು. ಸದ್ಯ ಕೈ-ಕಾಲು ಕಟ್ ಆಗಿರುವ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ. ಇನ್ನು ಸಚಿನ್​ಗೆ ತಾಯಿ ಮಾತ್ರ ಇದ್ದು, ತಂದೆ ಇಲ್ಲ. ಹಾಸ್ಪಿಟಲ್ ಬಿಲ್ 30 ಸಾವಿರ ಆಗಿದೆ‌. ಸಚಿನ್​ಗೆ ಸಹಾಯ ಮಾಡುವವರು ಯಾರೂ ಇಲ್ಲದಂತಾಗಿ ಎಂದು ಪೊಲೀಸರು ಹಾಗೂ ಆಸ್ಪತ್ರೆ ವೈದ್ಯರ ಮುಂದೆ ತಾಯಿ ತೇಜಸ್ವಿನಿ ಅಳಲು ತೋಡಿಕೊಂಡಿದ್ದಾರೆ. ಸದ್ಯ ಬೇಗೂರು ಪೊಲೀಸ್ ಠಾಣೆಯಲ್ಲಿ ಬೆಸ್ಕಾಂ ವಿರುದ್ಧ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.