ಬೆಂಗಳೂರು: ನಗರದಲ್ಲಿ ವಿದ್ಯತ್ ಅನಾಹುತಗಳು ಪದೇ ಪದೇ ಸಂಭವಿಸುತ್ತಿದ್ದು, ವಿದ್ಯುತ್ ತಂತಿ ಸ್ಪರ್ಶಿಸಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಇಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಬನ್ನೇರುಘಟ್ಟ ರಸ್ತೆಯ ಬೋವಿ ಕಾಲೋನಿ ಸುದ್ದಗುಂಟೆ ಪಾಳ್ಯದಲ್ಲಿ 19ನೇ ತಾರೀಕಿನಂದು ರಮೇಶ್ ಎಂಬ ಯುವಕ ಮನೆಯ ಮೇಲೆ ಹಾಕಿದ್ದ ಬೆಡ್ ಶೀಟ್ ತೆಗೆಯುವಾಗ ವಿದ್ಯುತ್ ತಂತಿ ಸ್ಪರ್ಶಿಸಿ ಶೇಕಡ 70% ಸುಟ್ಟು ಗಾಯಗೊಂಡಿದ್ದನು. ತಕ್ಷಣ ಈತನನ್ನು ಆಸ್ಪತ್ರಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಈ ಸಂಬಂಧ ಸುದ್ಗುಂಟ್ಟೆ ಪಾಳ್ಯ ಪೊಲೀಸ್ ಠಾಣೆಯಲ್ಲಿ ರಮೇಶ್ನ ತಂದೆ ಸಿಬಿಎಂ ನಿರ್ಲಕ್ಷ್ಯದಿಂದಲೇ ಈ ಅವಘಡ ಸಂಭವಿಸಿದೆ ಎಂದು ದೂರು ನೀಡಿದ್ದಾರೆ.