ಕೆ.ಆರ್.ಪುರ (ಬೆಂಗಳೂರು): ಸ್ಕೂಟಿಗೆ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಓರ್ವ ಯುವತಿ ಸಾವನ್ನಪ್ಪಿ,ಮ್ತತೋರ್ವ ಯುವಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೆ.ಆರ್ ಪುರಂನ ತೂಗುಸೇತುವೆ ಬಳಿ ನಡೆದಿದೆ. ಅಪಘಾತದಲ್ಲಿ ಕೋರಮಂಗಲ ನಿವಾಸಿ ಶಾಲಿನಿ(27) ಸಾವನ್ನಪ್ಪಿದ್ದು, ಆಕೆಯ ಸ್ನೇಹಿತ ಅಲೆನ್ ಸ್ಮಿತ್ ಗಂಭೀರ ಗಾಯಗೊಂಡಿದ್ದಾರೆ.
ಬುಧವಾರ ಬೆಳಗ್ಗೆ 6.30ರ ಸುಮಾರಿಗೆ ಟಿನ್ ಫ್ಯಾಕ್ಟರಿಯಿಂದ ಕೆ.ಆರ್.ಪುರ ಕಡೆ ಬರುತ್ತಿದ್ದ ಸ್ಕೂಟಿಗೆ ಕೆ.ಆರ್ ಪುರಂನ ತೂಗುಸೇತುವೆ ಮೇಲೆ ಟಾಟಾ ಏಸ್ ವಾಹನ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಈ ಸಂದರ್ಭ ಸ್ಕೂಟಿಯಲ್ಲಿದ್ದ ಶಾಲಿನಿ ಮತ್ತು ಸ್ನೇಹಿತ ಅಲೆನ್ ಸ್ಮಿತ್ ಕೆಳಗೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಶಾಲಿನಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತ ಶಾಲಿನಿ ಜೆ ಪಿ ನಗರದ ಸ್ಪಾ ಒಂದರಲ್ಲಿ ರಿಸಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಅಪಘಾತದ ಬಳಿಕ ಚಾಲಕ ಏಸ್ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಕೆ ಆರ್ ಪುರಂ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಡ್ರಾಪ್ ಕೊಡುವ ನೆಪದಲ್ಲಿ ಶಾಲಾ ಬಸ್ನಲ್ಲೇ ಅತ್ಯಾಚಾರ: ಆರೋಪಿ ಚಾಲಕ ಅರೆಸ್ಟ್