ಬೆಂಗಳೂರು: ಯಶವಂತಪುರ- ದೆಹಲಿಯ ಹಜರತ್ ನಿಜಾಮುದ್ದೀನ್ - ಯಶವಂತಪುರ ಸಂಪರ್ಕ ಕ್ರಾಂತಿ ವಿಶೇಷ ಎಕ್ಸ್‌ಪ್ರೆಸ್ ಹಾಗೂ ಯಶವಂತಪುರ - ಹಜರತ್ ನಿಜಾಮುದ್ದೀನ್ - ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್‌ಗಳಿಗೆ ಸಾಂಪ್ರದಾಯಿಕ ರೇಕ್ಗಳ ಬದಲಾಗಿ ಎಲ್ಎಚ್ಬಿ (ಲಿಂಕ್ ಹಾಫ್ ಮನ್ ಬುಷ್) ರ‍್ಯಾಕ್ ಗಳನ್ನು ಅಳವಡಿಸಲಾಗುವುದು ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಸಾಂಪ್ರದಾಯಿಕ ಬೋಗಿಗಳಿಗೆ ಹೋಲಿಸಿದ್ದಲ್ಲಿ ಎಲ್ಎಚ್ಬಿ ಬೋಗಿಗಳು ಪ್ರಯಾಣಿಕರಿಗೆ ಸೌಕರ್ಯ, ಸುರಕ್ಷತೆ, ವೇಗ, ತುಕ್ಕು ಹಿಡಿಯುವಿಕೆ, ನಿರ್ವಹಣೆ ಹಾಗೂ ವಿನ್ಯಾಸದ ಅಂದಗಳಲ್ಲಿ ಹೆಚ್ಚು ಉತ್ಕೃಷ್ಟವಾಗಿರುವವು. ಇದರ ಜೊತೆಗೆ ಈ ಬೋಗಿಗಳು ವಿನ್ಯಾಸದಲ್ಲಿ ಸಾಂಪ್ರದಾಯಿಕ ಬೋಗಿಗಳಿಗಿಂತ ಉದ್ದವಾಗಿದ್ದು, ಹೆಚ್ಚಿನ ಪ್ರಯಾಣಿಕ ಸಾರಿಗೆಯ ಸಾಮರ್ಥ್ಯವನ್ನು ಹೊಂದಿವೆ.
ರೈಲು ಸಂ. 06249/06250 ಯಶವಂತಪುರ - ಹಜರತ್ ನಿಜಾಮುದ್ದೀನ್ - ಯಶವಂತಪುರ ಸಂಪರ್ಕ ಕ್ರಾಂತಿ ವಿಶೇಷ ಎಕ್ಸ್‌ಪ್ರೆಸ್ ಸೇವೆಯನ್ನು ಮುಂದಿನ ಸೂಚನೆಯವರೆಗೂ ಅನ್ವಯವಾಗುವಂತೆ ವಿಸ್ತರಿಸಲಾಗಿದೆ. ಈ ರೈಲುಗಳಿಗೆ ಅ. 27ಕ್ಕೆ ಜಾರಿಗೆ ಬರುವಂತೆ ಯಶವಂತಪುರದಿಂದ ಮತ್ತು ಅ. 30ರಿಂದ ಜಾರಿಗೆ ಬರುವಂತೆ ಹಜರತ್ ಜಾಮುದ್ದೀನ್‌ನಿಂದ ಸಾಂಪ್ರದಾಯಿಕ ಕೋಚ್‌ಗಳಿಗೆ ಬದಲಾಗಿ ಎಲ್ಎಚ್ಬಿ ಕೋಚ್‌ಗಳನ್ನು ಅಳವಡಿಸಲಾಗುವುದು ಎಂದು ಮಾಹಿತಿ ನೀಡಿದೆ.
ರೈಲು ಸಂ.02629/02630 ಯಶವಂತಪುರ- ಹಜರತ್ ನಿಜಾಮುದ್ದೀನ್ - ಯಶವಂತಪುರ ಎಕ್ಸ್‌ಪ್ರೆಸ್ ವಿಶೇಷ ರೈಲಿಗಳಿಗೆ ಅ.27 ರಿಂದ ಜಾರಿಗೆ ಬರುವಂತೆ ಯಶವಂತಪುರದಿಂದ ಮತ್ತು ಅ.29ರಿಂದ ಜಾರಿಗೆ ಬರುವಂತೆ ಹ.ನಿಜಾಮುದ್ದೀನ್‌ನಿಂದ ಸಾಂಪ್ರದಾಯಿಕ ಕೋಚ್‌ಗಳಿಗೆ ಬದಲಾಗಿ ಎಲ್ಎಚ್ಬಿ ಕೋಚ್‌ಗಳನ್ನು ಅಳವಡಿಸಲಾಗುವುದು ಎಂದಿದೆ.
ಈ ಮೇಲೆ ತಿಳಿಸಿದ ರೈಲುಗಳು ಎಲ್ಎಚ್ಬಿ ಬೋಗಿಗಳ ಪರಿಷ್ಕೃತ ಸಂಯೋಜನೆಯೊಂದಿಗೆ ಅಂದರೆ ಎರಡು ಏ.ಸಿ 2 ಟೈರ್, ಏ.ಸಿ 3 ಟೈರ್, 6 ಸ್ಲೀಪರ್ ದರ್ಜೆ, 2 ಸಾಮಾನ್ಯ 2 ದರ್ಜೆಯ ಬೋಗಿಗಳು, 2 ಜನರೇಟರ್ ನೊಂದಿಗಿನ ಲಗೇಜ್ ಕಮ್ ಬ್ರೇಕ್ ವ್ಯಾನ್ಗಳು ಮತ್ತು 2 ಅಧಿಕ ಸಾಮರ್ಥ್ಯದ ಪಾರ್ಸಲ್ ವ್ಯಾನ್ಗಳು ಮತ್ತು 1 ಪ್ಯಾಂಟ್ರಿ ಕಾರ್ ಒಳಗೊಂದು ಸೇವೆ ಸಲ್ಲಿಸುವುವು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.