ಬೆಂಗಳೂರು: ಈಶ್ವರಪ್ಪ ರಾಜೀನಾಮೆಗೆ ಪಟ್ಟುಹಿಡಿದು ಉಭಯ ಸದನಗಳಲ್ಲಿ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಅಹೋರಾತ್ರಿ ಧರಣಿ ಕೈಬಿಡುವಂತೆ ಮನವೊಲಿಸುವ ಪ್ರಯತ್ನ ಸಫಲವಾಗಲಿಲ್ಲ. ನಾಳೆ ಮತ್ತೆ ಕಾಂಗ್ರೆಸ್ ನಾಯಕರೊಂದಿಗೆ ಸಭೆ ನಡೆಸಲಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಅಶೋಕ್ ಸೇರಿದಂತೆ ನಾವೆಲ್ಲಾ ಎರಡು ಗಂಟೆ ಕಾಲ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ,ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಮುಖಂಡರನ್ನು ವಿನಂತಿ ಮಾಡಿಕೊಂಡೆವು.
ಸದನದಲ್ಲಿ ರಾತ್ರಿ ಸತ್ಯಾಗ್ರಹ ನಡೆಸುವುದು ಬೇಡ, ಅಂತಹ ವಿಶೇಷ ಘಟನೆ ನಡೆದಿಲ್ಲ, ನಾಳೆ ಬೆಳಗ್ಗೆ ಸದನದಲ್ಲಿ ಹೋರಾಟ ನಡೆಸಿ ಎಂದು ಮನವೊಲಿಸುವ ಪ್ರಯತ್ನ ಮಾಡಿದೆವು ಆದರೆ ಅವರು ರಾತ್ರಿಯಡಿ ಇರುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಸ್ಪೀಕರ್ ಕೂಡ ಮಾತುಕತೆ ನಡೆಸಿದರು. ಅವರ ಮನವಿಗೂ ಒಪ್ಪಿಲ್ಲ, ನಮ್ಮ ಪ್ರಯತ್ನವನ್ನು ನಾವು ಪ್ರಾಮಾಣಿಕವಾಗಿ ಮಾಡಿದ್ದೇವೆ. ಸ್ಪಂದಿಸಿಲ್ಲ, ನಾಳೆ ಮತ್ತೆ ಮಾತುಕತೆ ನಡೆಸಲಾಗುತ್ತದೆ ಎಂದರು.
ಇದನ್ನೂ ಓದಿ: ಧರಣಿ ನಿರತ ಡಿಕೆಶಿ ಭೇಟಿಯಾದ ಸ್ಪೀಕರ್ ಕಾಗೇರಿ.. ಹಳೆ ಘಟನೆ ಮೆಲಕು ಹಾಕಿದ ನಾಯಕರು