ETV Bharat / state

ಯಡಿಯೂರಪ್ಪನವರಿಗೆ ವಯಸ್ಸಾಗಿದೆ, ಅರಳು-ಮರಳು : ಉಗ್ರಪ್ಪ ವ್ಯಂಗ್ಯ - Karnataka by-elections 2020

ಅಧಿಕಾರವನ್ನು ನೀಡುತ್ತೇವೆ ಎನ್ನುವ ಮೂಲಕ ಮತದಾರರನ್ನು ಬೇರೆಡೆ ಸೆಳೆಯುವ ಕಾರ್ಯ ಮಾಡಿದ್ದಾರೆ. ಇದು ಭಾರತೀಯ ದಂಡ ಸಂಹಿತಿ ಹಾಗೂ ಜನತಾ ಪ್ರಾತಿನಿಧ್ಯ ಕಾಯ್ದೆ ವಿವಿಧ ಅಪರಾಧ ಆಗಲಿದೆ. ಚುನಾವಣಾ ಆಯೋಗ ಜೀವಂತವಾಗಿದ್ದರೆ ಇದನ್ನು ಸುಮೋಟೊ ಪ್ರಕರಣ ದಾಖಲಿಸಿಕೊಂಡು, ಕೇಸು ದಾಖಲಿಸಿಕೊಂಡು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಪಕ್ಷ ಆಗ್ರಹಿಸಿದೆ..

Yeddyurappa has forgotten the rules and regulations; VS Ugrappa
ಮಾಜಿ ಸಂಸದ ವಿಎಸ್ ಉಗ್ರಪ್ಪ
author img

By

Published : Oct 31, 2020, 6:57 PM IST

ಬೆಂಗಳೂರು : ಸಂವಿಧಾನ ಎತ್ತಿಹಿಡಿಯುವ ವಾಗ್ದಾನ ಮಾಡಿ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿರುವ ಬಿ ಎಸ್ ಯಡಿಯೂರಪ್ಪ ಮತದಾರರನ್ನು ಸೆಳೆಯುವ ದೃಷ್ಟಿಯಿಂದ ಇಲ್ಲಸಲ್ಲದ ಆಮಿಷವೊಡ್ಡುವುದು ತಪ್ಪು ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜರಾಜೇಶ್ವರಿನಗರ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಮುನಿರತ್ನ ಅವರಿಗೆ ಮತ ನೀಡಿ ಗೆಲ್ಲಿಸಿದರೆ ಅವರನ್ನು ಸಚಿವರನ್ನಾಗಿಸುತ್ತೇನೆ ಎಂಬ ಆಮಿಷದ ಮಾತನಾಡಿದ್ದಾರೆ. ಸಂವಿಧಾನ ಬದ್ಧವಾಗಿ ಪ್ರಮಾಣವಚನ ಸ್ವೀಕರಿಸಿರುವ ಅವರು ಮಾತು ಮರೆತಿದ್ದಾರೆ. ಅವರಿಗೆ ವಯಸ್ಸಾಗಿದೆ. ಅರಳು-ಮರಳು ಅಂತಾ ಕಾಣುತ್ತಿದೆ.

ಶಾಸಕರಾಗಿ ಹಾಗೂ ಮುಖ್ಯಮಂತ್ರಿಯಾಗಿ ಅವರು ಪ್ರಮಾಣವಚನ ಸ್ವೀಕರಿಸಿದ ಸಂದರ್ಭ ಸಂವಿಧಾನಬದ್ಧವಾಗಿ ನಡೆದುಕೊಳ್ಳುತ್ತೇವೆ ಹಾಗೂ ಸಂವಿಧಾನವನ್ನು ಎತ್ತಿ ಹಿಡಿಯುತ್ತೇವೆಂದು ವಾಗ್ದಾನವನ್ನು ಮಾಡಿದ್ದಾರೆ. ಆದರೆ, ಮತವನ್ನು ಗಳಿಸುವ ದೃಷ್ಟಿಯಿಂದ, ಮತದಾರರನ್ನು ಆಕರ್ಷಿಸುವ ದೃಷ್ಟಿಯಿಂದ ನೀವು ಮತ ನೀಡಿ ಗೆಲ್ಲಿಸಿದರೆ ಮುನಿರತ್ನರನ್ನ ಸಚಿವರನ್ನಾಗಿ ಮಾಡುತ್ತೇನೆ ಎಂದಿರುವುದು ಮತದಾರರ ಮೇಲೆ ಪ್ರಭಾವ ಬೀರುವ ಹಾಗೂ ಅಮಿಷ ಒಡ್ಡುವ ಕಾರ್ಯವಾಗಿದೆ ಎಂದಿದ್ದಾರೆ.

ಗೋಕಾಕ್ ಉಪಚುನಾವಣೆಯಲ್ಲಿ ಇದೇ ರೀತಿಯ ಹೇಳಿಕೆ ನೀಡಿ ಒಂದು ಹಂತದಲ್ಲಿ ಕೆಳಹಂತದ ನ್ಯಾಯಾಲಯದಲ್ಲಿ ಕೇಸು ದಾಖಲಾಗಿತ್ತು. ಆದರೆ, ಹೈಕೋರ್ಟ್‌ ಹಂತದಲ್ಲಿ ಈ ರೀತಿ ಹೇಳಿಕೆ ಯಡಿಯೂರಪ್ಪನವರಿಗೆ ತಾವು ಸೋಲುತ್ತೇವೆ ಎನ್ನುವ ಮನವರಿಕೆಯಾಗಿದೆ. ಇದರಿಂದ ಮತದಾರರಿಗೆ ಆಮಿಷ ಒಡ್ಡುವ ಆಶ್ವಾಸನೆ ನೀಡಿದ್ದಾರೆ.

ಅಧಿಕಾರವನ್ನು ನೀಡುತ್ತೇವೆ ಎನ್ನುವ ಮೂಲಕ ಮತದಾರರನ್ನು ಬೇರೆಡೆ ಸೆಳೆಯುವ ಕಾರ್ಯ ಮಾಡಿದ್ದಾರೆ. ಇದು ಭಾರತೀಯ ದಂಡ ಸಂಹಿತಿ ಹಾಗೂ ಜನತಾ ಪ್ರಾತಿನಿಧ್ಯ ಕಾಯ್ದೆ ವಿವಿಧ ಅಪರಾಧ ಆಗಲಿದೆ. ಚುನಾವಣಾ ಆಯೋಗ ಜೀವಂತವಾಗಿದ್ದರೆ ಇದನ್ನು ಸುಮೋಟೊ ಪ್ರಕರಣ ದಾಖಲಿಸಿಕೊಂಡು, ಕೇಸು ದಾಖಲಿಸಿಕೊಂಡು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಪಕ್ಷ ಆಗ್ರಹಿಸುತ್ತದೆ ಎಂದರು.

ಚುನಾವಣಾ ಆಯೋಗದಿಂದ ಭರವಸೆ :

ಮಾತು ಮುಂದುವರಿಸಿದ ವಿ ಎಸ್ ಉಗ್ರಪ್ಪ, ರಾಜರಾಜೇಶ್ವರಿನಗರ ವಿಧಾನಸಭೆ ಚುನಾವಣೆ ಸಂದರ್ಭ ಬಿಜೆಪಿ ಅಭ್ಯರ್ಥಿ ಮುನಿರತ್ನ ಮತದಾರರಿಗೆ ಸೆಟ್ ಆಫ್ ಬಾಕ್ಸ್ ವಿತರಿಸುವ ಮೂಲಕ ಆಮಿಷ ಒಡ್ಡಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆ ಮಾಡಿದ್ದೆವು. ಸುಮಾರು 50 ಸಾವಿರ ಸೆಟ್ ಆಫ್ ಬಾಕ್ಸ್​ಗಳನ್ನು ಉಚಿತವಾಗಿ ಮತದಾರರಿಗೆ ಹಂಚಿ ಉಚಿತ ಸಂಪರ್ಕ ಕಲ್ಪಿಸಿರುವ ಬಗ್ಗೆ ವಿವರಿಸಿ ಕಾನೂನು ರೀತ್ಯ ಇದು ಅಪರಾಧ ಎಂದು ವಿವರಿಸಿದೆವು.

ಅ. 26ರಂದು ನಾವು ನೀಡಿದ ದೂರನ್ನು ಸ್ವೀಕರಿಸಿದ ಚುನಾವಣಾ ಆಯೋಗ, ಆದೇಶ ಹೊರಡಿಸಿದ್ದು ಸತ್ಯಾಸತ್ಯತೆಯ ತನಿಖೆಗೆ ಅಧಿಕಾರಿಗಳ ತಂಡ ರಚಿಸಿದೆ. ತನಿಖೆ ನಡೆಯುತ್ತಿದೆ, ನಾನು ಕೂಡ ಸಮಿತಿಯ ಮುಂದೆ ಎರಡು ದಿನ ಆಗಮಿಸಿ ವಿವರ ನೀಡಿದ್ದೇನೆ.

ಮಾಜಿ ಸಂಸದ ವಿಎಸ್ ಉಗ್ರಪ್ಪ

ಬಹುಶಃ ಚುನಾವಣಾ ಆಯೋಗ ಈ ವಿಚಾರವನ್ನು ಕೂಡ ಗಂಭೀರವಾಗಿ ಪರಿಗಣಿಸಿ ಕಾನೂನು ಬಾಹಿರ ಅಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂಬ ವಿಶ್ವಾಸ ಇದೆ. ಭಾರತೀಯ ಜನತಾ ಪಕ್ಷದವರು ಸಿದ್ಧಾಂತದ ಮೇಲಾಗಲಿ ಅಥವಾ ಕಾರ್ಯಕ್ರಮದ ಮೇಲಾಗಲಿ ಚುನಾವಣೆ ನಡೆಸುವ ಪ್ರಯತ್ನ ಮಾಡಿಲ್ಲ.

ಜನರನ್ನ ಆಮಿಷವೊಡ್ಡಿ ತಪ್ಪು ಹಾದಿಗೆ ಹೇಳಿದ್ದು ಮತ ಗಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಸಂದರ್ಭ ಮತದಾರರು ಕೂಡ ಇದನ್ನೆಲ್ಲ ಅರಿತು ಕಾಂಗ್ರೆಸ್​ಗೆ ಮತ ನೀಡಬೇಕು ಎಂದು ಕೋರಿಕೊಳ್ಳುತ್ತೇನೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.