ಬೆಂಗಳೂರು: ಸಿಲಿಕಾನ್ ಸಿಟಿಯ ಆರ್‌ಟಿಒ ಅಧಿಕಾರಿಗಳು ಯಲಹಂಕದಲ್ಲಿ ಬಸ್ಗಳ ಮೇಲೆ ದಾಳಿ ಮಾಡಿದ್ದು, ನಗರದಲ್ಲಿ ಖಾಕಿ ಕಣ್ಣು ತಪ್ಪಿಸಿ ಸಂಚರಿಸುತ್ತಿದ್ದ ನಾಲ್ಕು ಬಸ್ಗಳನ್ನು ವಶಕ್ಕೆ ಪಡೆದಿದ್ದಾರೆ.
ನೇಪಾಳದ ಗಡಿಯ ಕಡೆಗೆ 60 ರಿಂದ 70 ಜನರನ್ನು ತುಂಬಿಕೊಂಡು ಹೊರಟಿದ್ದ ಒಂದು ಬಸ್ ಸೇರಿದಂತೆ ನಗರದ ಬೀದಿಗಳಲ್ಲಿ ನಿಯಮ ಮೀರಿ ಓಡಾಡುತ್ತಿದ್ದ ಒಟ್ಟು ನಾಲ್ಕು ಬಸ್ಗಳನ್ನು ವಶಪಡಿಸಿಕೊಂಡಿದ್ದಾರೆ. ಒಂದೇ ಹೆಸರಿನಲ್ಲಿ 34 ಬಸ್ ಸಂಚಾರ ನೆಡೆಸುತ್ತಿರುವುದು ಕೂಡಾ ಇದೇ ವೇಳೆ ಬೆಳಕಿಗೆ ಬಂದಿದೆ.
ಆರ್‌ಟಿಒ ಅಧಿಕಾರಿಗಳು ವಶಕ್ಕೆ ಪಡೆದಿರುವ ಬಸ್ಗಳನ್ನು ಯಲಹಂಕ ಪೊಲೀಸರಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: ಉದ್ಯೋಗ ಕಳ್ಕೊಂಡು ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡಿ: ಸಿಎಂಗೆ ಸಿದ್ದರಾಮಯ್ಯ ಪತ್ರ