ETV Bharat / state

48 ರಿಂದ 72 ಗಂಟೆಯೊಳಗೆ ಯಡಿಯೂರಪ್ಪ ಸಿಎಂ ಆಗ್ತಾರೆ : ಜನಾರ್ದನ ರೆಡ್ಡಿ ಭವಿಷ್ಯ - undefined

48 ರಿಂದ‌ 72 ಗಂಟೆಯೊಳಗೆ ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದು ಖಚಿತವಾಗಿದೆ.‌ ಇದನ್ನು ತಡೆಯಲು ಯಾರಿಂದಲೂ‌ ಸಾಧ್ಯವಿಲ್ಲ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಭವಿಷ್ಯ ನುಡಿದಿದ್ದಾರೆ.

ಜನಾರ್ದನ ರೆಡ್ಡಿ ಭವಿಷ್ಯ
author img

By

Published : Jul 21, 2019, 11:40 PM IST

ಬೆಂಗಳೂರು: 48 ರಿಂದ‌ 72 ಗಂಟೆಯೊಳಗೆ ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದು ಖಚಿತವಾಗಿದೆ.‌ ಇದನ್ನು ತಡೆಯಲು ಯಾರಿಂದಲೂ‌ ಸಾಧ್ಯವಿಲ್ಲ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಭವಿಷ್ಯ ನುಡಿದಿದ್ದಾರೆ.

ಅರಮನೆ ಮೈದಾನದಲ್ಲಿರುವ ಗಾಯಿತ್ರಿ ವಿಹಾರ ಸಭಾಂಗಣದಲ್ಲಿ ವೀರಶೈವ ಲಿಂಗಾಯತ ಯುವ ವೇದಿಕೆ ವತಿಯಿಂದ ಆಯೋಜಿಸಿದ್ದ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಶ್ರೀಮದ್‍ರಂಭಾಪುರಿ ವೀರ ಸಿಂಹಸನಾಧೀಶ್ವರ 1008 ಜಗದ್ಗುರು ಪ್ರಸನ್ನ ರೇಣುಕಾ, ಡಾ. ಸೋಮೇಶ್ವರ ರಾಜಾ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಬೆಳ್ಳಿ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಧರ್ಮಜಾಗೃತಿ ಸಮ್ಮೇಳನ ಸಮಾರಂಭದಲ್ಲಿ ಜನಾರ್ದನ ರೆಡ್ಡಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಶ್ರೀಗಳಿಂದ ಆಶೀರ್ವಾದ ಪಡೆದು ಮಾತನಾಡಿದ ಜನಾರ್ದನ ರೆಡ್ಡಿ, 2018 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿಯೇ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿ ಆಗಬೇಕಿತ್ತು. ಆದರೆ 8-10 ಸ್ಥಾನಗಳ ಕೊರತೆಯಿಂದಾಗಿ‌ ಅದು ತಪ್ಪಿತ್ತು. ಆದರೆ ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

yadiyurappa-will-be-cm-in-next-48-72-hours-janardhan-reddy-
ಜನಾರ್ದನ ರೆಡ್ಡಿ ಭವಿಷ್ಯ

ಧರ್ಮ ವಿಭಜನೆ ಮಾಡಿದವರನ್ನು ಶಿವ 3ನೇ ಕಣ್ಣು ಬಿಟ್ಟು ಭಸ್ಮ ಮಾಡುತ್ತಾನೆ ಎಂದಿದ್ದೆ. ಅದರಂತೆಯೇ ‌ಹಿಂದಿನ‌ ಸರ್ಕಾರ‌ ಭಸ್ಮ ಆಗಿದೆ. ಅಲ್ಪಸ್ವಲ್ಪ ಉಳಿದ ಸರ್ಕಾರ ನಾಳೆ ನಾಡಿದ್ದರಲ್ಲಿ ಭಸ್ಮ ಆಗಲಿದೆ. ಬಿಜೆಪಿ‌ ಸರ್ಕಾರ‌ ಅಧಿಕಾರಕ್ಕೆ‌ ಬಂದಲ್ಲಿ ರಾಜ್ಯದ ಯಾವುದಾದರೂ ಒಂದು ಕಡೆ 500 ಎಕರೆ ಜಾಗದಲ್ಲಿ ಜಗದ್ಗುರು ಪಂಚಾಚಾರ್ಯರು ಮತ್ತು ಆದಿ ಜಗದ್ಗುರು ರೇಣುಕಾಚಾರ್ಯರ ತಲಾ 100 ಅಡಿ ಎತ್ತರದ ಪ್ರತಿಮೆ ನಿರ್ಮಿಸಿ ಆ ಸ್ಥಳವನ್ನು ಪ್ರವಾಸಿ ತಾಣವನ್ನಾಗಿ ಮಾಡುವುದಾಗಿ ಭರವಸೆ ನೀಡಿದರು.

ಧರ್ಮಜಾಗೃತಿ ಸಮ್ಮೇಳನದ ಅಧ್ಯಕ್ಷತೆಯನ್ನು ಮೇಯರ್ ಗಂಗಾಂಬಿಕೆ ವಹಿಸಿದ್ದರು. ಜಗದ್ಗುರು ಶ್ರೀ ಪ್ರಸನ್ನ ರೇಣುಕಾ, ಡಾ. ಸೋಮೇಶ್ವರ ರಾಜ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೀರಶೈವ ಮುಖಂಡ ಪರಮಶಿವಯ್ಯ ಸೇರಿದಂತೆ ನೂರಾರು ಮಠಾಧಿಪತಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Intro:

ಬೆಂಗಳೂರು: 48 ರಿಂದ‌ 72 ಗಂಟೆಯ ಒಳಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದು ಖಚಿತವಾಗಿದ್ದು‌ ಇದನ್ನು ತಡೆಯಯಾರಿಂದಲೂ‌ ಸಾಧ್ಯವಿಲ್ಲ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಭವಿಷ್ಯ ನುಡಿದಿದ್ದಾರೆ.

ಅರಮನೆ ಮೈದಾನದಲಿರುವ ಗಾಯಿತ್ರಿ ವಿಹಾರ ಸಭಾಂಗಣದಲ್ಲಿ ವೀರಶೈವ ಲಿಂಗಾಯಿತ ಯುವ ವೇದಿಕೆ ವತಿಯಿಂದ ಆಯೋಜಿಸಿದ್ದ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಶ್ರೀಮದ್‍ರಂಭಾಪುರಿ ವೀರ ಸಿಂಹಸನಾಧೀಶ್ವರ 1008 ಜಗದ್ಗುರು ಪ್ರಸನ್ನ ರೇಣುಕಾ, ಡಾ. ಸೋಮೇಶ್ವರ ರಾಜಾ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಬೆಳ್ಳಿ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಧರ್ಮಜಾಗೃತಿ ಸಮ್ಮೇಳನ ಸಮಾರಂಭದಲ್ಲಿ ಜನಾರ್ದನರೆಡ್ಡಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ನಂತರ ಶ್ರೀಗಳಿಂದ ಆಶೀರ್ವಾದ ಪಡೆದು ಮಾತನಾಡಿ ಜನಾರ್ದನ ರೆಡ್ಡಿ, 2018 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿಯೇ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿ ಆಗಬೇಕಿತ್ತು ಆದರೆ 8-10 ಸ್ಥಾನಗಳ ಕೊರತೆಯಿಂದಾಗಿ‌ ಅದು ತಪ್ಪಿತು ಆದರೆ ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಧರ್ಮ ವಿಭಜನೆ ಮಾಡಿದವರನ್ನು ಶಿವ ಮೂರನೇ ಕಣ್ಣು ಬಿಟ್ಟು ಭಸ್ಮ ಮಾಡುತ್ತಾನೆ ಎಂದಿದ್ದೆ ಅದರಂತೆಯೇ ‌ಹಿಂದಿನ‌ ಸರ್ಕಾರ‌ ಭಸ್ಮ ಆಗಿದೆ ಎಂದು‌ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರುದ್ಧ ಪರೋಕ್ಷೆ ಟೀಕೆ ಮಾಡಿದ ಜನಾರ್ದನ ರೆಡ್ಡಿ ಅಲ್ಪಸ್ವಲ್ಪ ಉಳಿದ ಸರ್ಕಾರ ನಾಳೆ ನಾಡಿದ್ದರಲ್ಲಿ ಭಸ್ಮ ಆಗಲಿದೆ ‌ಎಂದರು.

ಬಿಜೆಪಿ‌ ಸರ್ಕಾರ‌ ಅಧಿಕಾರಕ್ಕೆ‌ ಬಂದಲ್ಲಿ ರಾಜ್ಯದ ಯಾವುದಾದರೂ ಒಂದು ಕಡೆ 500 ಎಕರೆ ಜಾಗದಲ್ಲಿ ಜಗದ್ಗುರು ಪಂಚಾಚಾರ್ಯರು ಮತ್ತು ಆದಿ ಜಗದ್ಗುರು ರೇಣುಕಾಚಾರ್ಯರ ತಲಾ 100 ಅಡಿ ಪ್ರತಿಮೆ ನಿರ್ಮಿಸಿ ಆ ಸ್ಥಳವನ್ನು ಪ್ರವಾಸಿ ತಾಣವನ್ನಾಗಿ ಮಾಡುವ ಭರವಸೆ ನೀಡಿದರು.

ಧರ್ಮಜಾಗೃತಿ ಸಮ್ಮೇಳನದ ಅಧ್ಯಕ್ಷತೆಯನ್ನು ಮೇಯರ್ ಗಂಗಾಂಬಿಕೆ ವಹಿಸಿದ್ದರು. ಜಗದ್ಗುರು ಶ್ರೀ ಪ್ರಸನ್ನ ರೇಣುಕಾ, ಡಾ. ಸೋಮೇಶ್ವರ ರಾಜ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ವೀರಶೈವ ಮುಖಂಡ ಪರಮಶಿವಯ್ಯ ಸೇರಿದಂತೆ ನೂರಾರು ಮಠಾಧಿಪತಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Body:-ಪ್ರಶಾಂತ್ ಕುಮಾರ್Conclusion:null

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.