ETV Bharat / state

18 ಲಕ್ಷ ಮೌಲ್ಯದ ನಿಷೇಧಿತ ಯಾಬಾ ಮಾತ್ರೆಗಳು ಪೊಲೀಸ್ ವಶ...!

18 ಲಕ್ಷ ಮೌಲ್ಯದ ನಿಷೇಧಿತ ಯಾಬಾ ಮಾತ್ರೆಗಳು ಪೊಲೀಸ್ ವಶಕ್ಕೆ ಪಡೆದು ಆರೋಪಿಯೊಬ್ಬನನ್ನು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Yaba tablets seized by Bengaluru police, Bengaluru drugs case, Bengaluru crime news, ಯಾಬಾ ಮಾತ್ರೆಗಳು ಪೊಲೀಸ್ ವಶ, ಬೆಂಗಳೂರಿನಲ್ಲಿ ಯಾಬಾ ಮಾತ್ರೆಗಳು ಪೊಲೀಸ್ ವಶ, ಬೆಂಗಳೂರು ಅಪರಾಧ ಸುದ್ದಿ, ಬೆಂಗಳೂರು ಡ್ರಗ್ಸ್​ ಪ್ರಕರಣ,
ಯಾಬಾ ಮಾತ್ರೆಗಳು
author img

By

Published : Feb 16, 2022, 5:25 AM IST

ಬೆಂಗಳೂರು: ಅಸ್ಸೋಂನಿಂದ ನಗರಕ್ಕೆ ಮಾದಕ ವಸ್ತು ತಂದು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಕೇಂದ್ರ ವಿಭಾಗದ ವಿಲ್ಸನ್ ಗಾರ್ಡನ್‌ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಸುಮಾರು 18 ಲಕ್ಷ ರೂಪಾಯಿ ಮೌಲ್ಯದ ನಿಷೇಧಿತ ಯಾಬಾ ಮಾತ್ರೆಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Yaba tablets seized by Bengaluru police, Bengaluru drugs case, Bengaluru crime news, ಯಾಬಾ ಮಾತ್ರೆಗಳು ಪೊಲೀಸ್ ವಶ, ಬೆಂಗಳೂರಿನಲ್ಲಿ ಯಾಬಾ ಮಾತ್ರೆಗಳು ಪೊಲೀಸ್ ವಶ, ಬೆಂಗಳೂರು ಅಪರಾಧ ಸುದ್ದಿ, ಬೆಂಗಳೂರು ಡ್ರಗ್ಸ್​ ಪ್ರಕರಣ,
ಆರೋಪಿ ದಿದರುಲ್ಲಾ ಇಸ್ಲಾಂ ಮುಸ್ತಫಾ

ನಗರದ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಅಸ್ಸೋಂ ಮೂಲದ ದಿದರುಲ್ಲಾ ಇಸ್ಲಾಂ ಮುಸ್ತಫಾ (30) ತನ್ನ ದುಂದು ವೆಚ್ಚಕ್ಕಾಗಿ ಹಣ ಸಂಪಾದಿಸಬೇಕೆಂದು ಕಳ್ಳ ಮಾರ್ಗ ಹಿಡಿದಿದ್ದಾನೆ. ಹೀಗಾಗಿ ಅಸ್ಸೋಂನ ಭರದ್​ಪುರ ಸ್ಟೇಷನ್ ರಸ್ತೆಯಲ್ಲಿರುವ ಪರಿಚಯಸ್ತನಿಂದ 1,503 ನಿಷೇಧಿತ ಯಾಬಾ ಮಾತ್ರೆಗಳನ್ನು ಖರೀದಿಸಿ ತಂದು ನಗರದ ವಿಲ್ಸನ್ ಗಾರ್ಡನ್‌ನ ಆನೆ ಪಾರ್ಕ್ ಬಳಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂಬಂಧ ಖಚಿತ ಮಾಹಿತಿ ಆಧರಿಸಿ ಹಲಸೂರು ಗೇಟ್‌ನ ಉಪವಿಭಾಗದ ಎಸಿಪಿ ನಾರಾಯಣಸ್ವಾಮಿ ನೇತೃತ್ವದಲ್ಲಿ ವಿಲ್ಸನ್ ಗಾರ್ಡನ್ ಠಾಣೆಯ ಇನ್ಸ್‌ಪೆಕ್ಟರ್.ಬಿ. ಶಂಕರಾಚಾರ್‌, ಪಿಎಸ್​ಐಗಳಾದ ಮಗದುಮ್ , ಪ್ರಿಯದರ್ಶಿನಿ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ ಸುಮಾರು 18 ಲಕ್ಷ ಮೌಲ್ಯದ ನಿಷೇಧಿತ ಮಾದಕ ಯಾಬಾ ಮಾತ್ರೆಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.