ಬೆಂಗಳೂರು: ವಿಶ್ವ ಕ್ಷಯರೋಗ ಪ್ರಯುಕ್ತ ಇಂದು ಜನರಲ್ಲಿ ಜಾಗೃತಿ ಮೂಡಿಸಲು ಜಾಥಾ ನಡೆಸಲಾಯಿತು.ಕೆ ಆರ್ ಮಾರ್ಕೆಟ್ ಸುತ್ತಮುತ್ತ ಜಾಥಾ ನಡೆಸಿ, ಬೀದಿ ನಾಟಕಗಳ ಮೂಲಕ ಜನರನ್ನ ಆಕರ್ಷಿಸಿದರು.
ಸಾರ್ವಜನಿಕರಿಗೆ ಕ್ಷಯರೋಗದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಪ್ರತಿ ವರ್ಷ ಮಾರ್ಚ್ 24 ರಂದು ವಿಶ್ವ ಕ್ಷಯರೋಗ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಕ್ಷಯರೋಗವು ಒಂದು ಸೋಂಕು ರೋಗವಾಗಿದ್ದು, ಮೈಕೋಬ್ಯಾಕ್ಟೀರಿಯಂ ಟ್ಯೂಬರ್ ಕ್ಯೂಲೋಸಿಸ್ ಎಂಬ ರೋಗಾಣುವಿನಿಂದ ಬರುತ್ತದೆ.
ಭಾರತ ದೇಶದಲ್ಲಿ ಹಾಗೂ ಕರ್ನಾಟಕ ರಾಜ್ಯದಲ್ಲಿ ಕ್ಷಯರೋಗವು ಹೆಚ್ಚಾಗಿದೆ.ವಿಶ್ವ ಆರೋಗ್ಯ ಸಂಸ್ಥೆ 2018 ರ ಪ್ರಕಾರ ಭಾರತದಲ್ಲಿ 27 ಲಕ್ಷ ಕ್ಷಯರೋಗಿಗಳಿರುತ್ತಾರೆ. ಅಂದರೆ ಶೇ 40 ರಷ್ಟು ಜನಸಂಖ್ಯೆ ಕ್ಷಯರೋಗ ಸೋಂಕಿತರಾಗಿದ್ದಾರೆ.ಸಾಮಾನ್ಯವಾಗಿ 15 ರಿಂದ 45 ವರ್ಷದ ವಯಸ್ಕರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.
ಕ್ಷಯರೋಗದ ಲಕ್ಷಣಗಳೇನು?
- ಸತತವಾಗಿ ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ಕೆಮ್ಮಿನಲ್ಲಿ ಕಫ
- ಜ್ವರ
- ಕಫದಲ್ಲಿ ರಕ್ತ ಕಾಣಿಸಿಕೊಳ್ಳುವುದು
- ಹಸಿವಾಗದಿರುವುದು
- ತೂಕ ಕಳೆದುಕೊಳ್ಳುವಿಕೆ
- ಸುಸ್ತು, ನಿರಾಸಕ್ತಿ
ಇನ್ನು ಮೆಡಿಕಲ್ ಕಾಲೇಜಿನಲ್ಲಿ ಆರೋಗ್ಯ ಇಲಾಖೆಯಿಂದ ಕ್ಷಯರೋಗ ಸಂಬಂಧ ನಡೆಸಿದ ಕಾರ್ಯಕ್ರಮದಲ್ಲಿ ಕ್ಷಯರೋಗದಲ್ಲಿ ಉತ್ತಮಸೇವೆ ಸಲ್ಲಿಸಿದವರಿಗೆ ಸನ್ಮಾನ ಮಾಡಲಾಯಿತು.ಇದೇ ವೇಳೆ ಮಾತಾನಾಡಿದ ಎನ್ಟಿಐ ನ ನಿರ್ದೇಶಕ ಸೋಮಶೇಖರ್, ರೋಗ ಲಕ್ಷಣಗಳು ಕಾಣುತ್ತಿದ್ದರೆ ಹತ್ತಿರದ ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿ ಪರೀಕ್ಷಿಸಿಕೊಳ್ಳಿ.ರೋಗ ಧೃಡಪಟ್ಟರೆ ಗಾಬರಿ ಬೇಡ, ವೈದ್ಯರು ನೀಡುವ ಔಷಧಗಳನ್ನು ಅವರು ತಿಳಿಸಿದಂತೆ ಕ್ರಮವಾಗಿ ಸೇವಿಸಿ ಕ್ಷಯರೋಗದಿಂದ ಗುಣವಾಗಿಎಂದುತಿಳಿಸಿದರು.