ETV Bharat / state

ನಗರಗಳ ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡಲು ತಂತ್ರಜ್ಞಾನ ಬಳಕೆಗೆ ಆದ್ಯತೆ: ಸಚಿವ ಎಂಟಿಬಿ ನಾಗರಾಜು

ನಗರಗಳ ಸ್ವಚ್ಛತೆ ಮತ್ತು ನೈರ್ಮಲ್ಯದ ಕಡೆಗೆ ಹೆಚ್ಚಿನ ಆದ್ಯತೆಯನ್ನು ನೀಡುವುದು ಅನಿವಾರ್ಯವಾಗಿದೆ ಎಂದು ಪೌರಾಡಳಿತ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಎಂಟಿಬಿ ನಾಗರಾಜು ತಿಳಿಸಿದ್ದಾರೆ.

minister mtb nagaraj
ಪೌರಾಡಳಿತ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಎಂಟಿಬಿ ನಾಗರಾಜು
author img

By

Published : Nov 20, 2022, 5:34 PM IST

ಬೆಂಗಳೂರು: ಜನಸಂಖ್ಯೆ ನಗರಗಳತ್ತ ಮುಖ ಮಾಡುತ್ತಿರುವುದು ಹೆಚ್ಚಾಗಿರುವುದರಿಂದ, ನಗರಗಳಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯವನ್ನು ಕಾಪಾಡುವುದು ಅತ್ಯವಶ್ಯಕವಾಗಿದೆ. ನಗರಾಭಿವೃದ್ದಿಗೆ ಹೆಚ್ಚು ಒತ್ತು ನೀಡಿ ತ್ಯಾಜ್ಯ ನೀರು ಸಂಸ್ಕರಣೆ, ಘನತ್ಯಾಜ್ಯ ವಿಲೇವಾರಿ ಹಾಗೂ ಸ್ವಚ್ಛತೆ ಕಡೆಗೆ ಹೆಚ್ಚಿನ ಆದ್ಯತೆ ನೀಡುವುದು ಅನಿವಾರ್ಯವಾಗಿದೆ ಎಂದು ಪೌರಾಡಳಿತ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಎಂಟಿಬಿ ನಾಗರಾಜು ಹೇಳಿದ್ದಾರೆ.

ನಗರದಲ್ಲಿ ಪೌರಾಡಳಿತ ಇಲಾಖೆ ಏರ್ಪಡಿಸಿದ್ದ 'ವಿಶ್ವ ಶೌಚಾಲಯ ದಿನ' ಕಾರ್ಯಕ್ರಮ ಮತ್ತು ರಾಷ್ಟ್ರೀಯ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶಾದ್ಯಂತ ಚಾಲನೆ ನೀಡಿರುವ ಅಮೃತ-2 ಹಾಗೂ ಸ್ವಚ್ಛ ಭಾರತ್ ಅಭಿಯಾನದ ಅಡಿ ಪ್ರತಿ ಮನೆಗೆ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಕಲ್ಪಿಸುವುದು, ಘನತ್ಯಾಜ್ಯ ಸಂಸ್ಕರಣೆ ಹಾಗೂ ಇತ್ಯಾದಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನಮ್ಮ ದೇಶವನ್ನು ಬಯಲು ಶೌಚ ಮುಕ್ತವಾಗಿಸುವ ನಿಟ್ಟಿನಲ್ಲಿ ಸ್ವಚ್ಛ ಭಾರತ ಮಿಷನ್ ನೆರವಾಗಲಿದ್ದು, ನಮ್ಮ ರಾಜ್ಯದ ನಗರ ಪ್ರದೇಶಗಳಲ್ಲಿ ಈವರೆಗೂ 3.2 ಲಕ್ಷ ವೈಯಕ್ತಿಕ ಶೌಚಾಲಯಗಳು, 16,640 (ಸೀಟ್ಸ್) ಸಮುದಾಯ ಶೌಚಾಲಯಗಳು ಹಾಗೂ 5407 (ಸೀಟ್) ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ರಾಜ್ಯದ 80 ನಗರ ಸ್ಥಳೀಯ ಸಂಸ್ಥೆಗಳು ಯುಜಿಡಿ ವ್ಯವಸ್ಥೆ ಹೊಂದಿದ್ದು, 1929 ಎಂಎಲ್‍ಡಿ ಕೊಳಚೆ ನೀರನ್ನು ಸಂಸ್ಕರಿಸಲಾಗುತ್ತಿದೆ. ಯುಜಿಡಿ ಇಲ್ಲದ ನಗರಗಳಲ್ಲಿ ಎಫ್‍ಎಸ್‍ಟಿಪಿ ಮುಖಾಂತರ 45 ನಗರಗಳಲ್ಲಿ 165 ಕೆಎಲ್‍ಡಿ ಸಾಮರ್ಥ್ಯದ ಮಲ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ನಿರ್ಮಿಸಲು ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದರು.

ವಿಶ್ವಸಂಸ್ಥೆಯು ನವೆಂಬರ್ 19ನ್ನು 'ವಿಶ್ವ ಶೌಚಾಲಯ ದಿನವೆಂದು' ಘೋಷಿಸಿರುವ ಹಿನ್ನೆಲೆ, ಸ್ವಚ್ಛತೆಯ ಮಹತ್ವವನ್ನು ಎಲ್ಲೆಡೆ ಸಾರುತ್ತ ರಾಜ್ಯ, ದೇಶ ಹಾಗೂ ವಿಶ್ವವನ್ನು ಬಯಲು ಶೌಚ ಮುಕ್ತ ಪ್ರದೇಶವಾಗಿಸಲು ಸತತ ಪ್ರಯತ್ನವನ್ನು ಮಾಡುತ್ತ, ಹಲವು ರೀತಿಯ ತ್ಯಾಜ್ಯಗಳನ್ನು ವಿನೂತನ ತಂತ್ರಜ್ಞಾನದ ಮುಖಾಂತರ ಸಂಸ್ಕರಿಸುವ ಶಪಥ ಮಾಡಿ, ಸುಸ್ಥಿರ, ಸುಂದರ ಹಾಗೂ ಸ್ವಚ್ಛ ನಗರಗಳನ್ನು ಕಟ್ಟೋಣ ಎಂದು ಕರೆ ನೀಡಿದರು.

ಇದನ್ನೂ ಓದಿ: ವಿಶ್ವ ಶೌಚಾಲಯ ದಿನ.. 2030ರ ಹೊತ್ತಿಗೆ ಎಲ್ಲರಿಗೂ ಸುರಕ್ಷಿತ ಶೌಚಾಲಯದ ಗುರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.