ಬೆಂಗಳೂರು: ಜನರ ಜೀವನ ಶೈಲಿ ಬದಲಾಗುತ್ತಿದ್ದ ಹಾಗೇ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಜೊತೆಗೆ ಹೊರಗಿನ ಕಲುಷಿತ ವಾತಾವರಣ, ಜನರ ಬೇಡದ ಹವ್ಯಾಸಗಳು ಶ್ವಾಸಕ್ಕೆ ತೊಂದರೆಯುಂಟು ಮಾಡಿದೆ. ಹೀಗಾಗಿ, ಈ ಕುರಿತು ಅರಿವು ಮೂಡಿಸಲು ಪ್ರತಿ ವರ್ಷ ಸೆಪ್ಟೆಂಬರ್ 25 ರಂದು ವಿಶ್ವ ಶ್ವಾಸಕೋಶ ದಿನವನ್ನಾಗಿ (ಡಬ್ಲ್ಯುಎಲ್‍ಡಿ) ಆಚರಣೆ ಮಾಡಲಾಗುತ್ತೆ. ಶ್ವಾಸಕೋಶದ ಆರೋಗ್ಯ ಕಾಳಜಿ ವಹಿಸುವ ಮತ್ತು ಪೋಷಣೆಯ ದಿನವಾಗಿದೆ.
ಉಸಿರಾಟದ ಸೋಂಕಿನ ಬಗ್ಗೆ ಇರಲಿ ಎಚ್ಚರ; ಇಂದು ವಿಶ್ವ ಶ್ವಾಸಕೋಶ ದಿನ
ಪ್ರತಿ ವರ್ಷ 10 ದಶ ಲಕ್ಷ ಹೊಸ ಕ್ಷಯರೋಗ (ಟಿಬಿ) ಪ್ರಕರಣಗಳು ಮತ್ತು ಇದರಿಂದ 1.5 ಮಿಲಿಯನ್ ಸಾವುಗಳು ಸಂಭವಿಸುತ್ತಿವೆ. ಕ್ಷಯರೋಗದಿಂದ ಸಾವುಗಳು ಹೆಚ್ಚಾಗಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಮತ್ತು 20- 35 ವರ್ಷ ವಯಸ್ಸಿನ ವಯಸ್ಕರಲ್ಲಿ ಸಂಭವಿಸುತ್ತಿದೆ. ಶೇ.95 ರಷ್ಟು ಟಿಬಿ ಸಾವುಗಳು ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಲ್ಲಿ ಸಂಭವಿಸುತ್ತಿವೆ.
ಇಂದು ವಿಶ್ವ ಶ್ವಾಸಕೋಶ ದಿನ
ಬೆಂಗಳೂರು: ಜನರ ಜೀವನ ಶೈಲಿ ಬದಲಾಗುತ್ತಿದ್ದ ಹಾಗೇ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಜೊತೆಗೆ ಹೊರಗಿನ ಕಲುಷಿತ ವಾತಾವರಣ, ಜನರ ಬೇಡದ ಹವ್ಯಾಸಗಳು ಶ್ವಾಸಕ್ಕೆ ತೊಂದರೆಯುಂಟು ಮಾಡಿದೆ. ಹೀಗಾಗಿ, ಈ ಕುರಿತು ಅರಿವು ಮೂಡಿಸಲು ಪ್ರತಿ ವರ್ಷ ಸೆಪ್ಟೆಂಬರ್ 25 ರಂದು ವಿಶ್ವ ಶ್ವಾಸಕೋಶ ದಿನವನ್ನಾಗಿ (ಡಬ್ಲ್ಯುಎಲ್‍ಡಿ) ಆಚರಣೆ ಮಾಡಲಾಗುತ್ತೆ. ಶ್ವಾಸಕೋಶದ ಆರೋಗ್ಯ ಕಾಳಜಿ ವಹಿಸುವ ಮತ್ತು ಪೋಷಣೆಯ ದಿನವಾಗಿದೆ.
ಮಕ್ಕಳಲ್ಲಿ ಮತ್ತು ವೃದ್ಧರಲ್ಲಿ ಸಾವಿಗೆ ನ್ಯುಮೋನಿಯಾ ಪ್ರಮುಖ ಕಾರಣವಾಗಿದೆ. ಸುಮಾರು 80 ಪ್ರತಿಶತ ಸಾವುಗಳು 2 ವರ್ಷದೊಳಗಿನ ಮಕ್ಕಳಲ್ಲಿ ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟ ವೃದ್ದರಲ್ಲಿ ಆಗುತ್ತಿದೆ. ಬಹುತೇಕ ಎಲ್ಲ ಸಾವುಗಳು ಕಡಿಮೆ ಮತ್ತು ಮಧ್ಯಮ ಆದಾಯ ಹೊಂದಿರುವ ದೇಶಗಳಲ್ಲಿ ಸಂಭವಿಸುತ್ತಿದೆ. ಪ್ರತಿ ವರ್ಷ 10 ದಶಲಕ್ಷ ಹೊಸ ಕ್ಷಯರೋಗ (ಟಿಬಿ) ಪ್ರಕರಣಗಳು ಮತ್ತು ಇದರಿಂದ 1.5 ಮಿಲಿಯನ್ ಸಾವುಗಳು ಸಂಭವಿಸುತ್ತಿವೆ. ಕ್ಷಯರೋಗದಿಂದ ಸಾವುಗಳು ಹೆಚ್ಚಾಗಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಮತ್ತು 20 - 35 ವರ್ಷ ವಯಸ್ಸಿನ ವಯಸ್ಕರಲ್ಲಿ ಸಂಭವಿಸುತ್ತಿದೆ. ಶೇಕಡಾ 95 ರಷ್ಟು ಟಿಬಿ ಸಾವುಗಳು ಕಡಿಮೆ ಮತ್ತು ಮಧ್ಯಮ - ಆದಾಯದ ದೇಶಗಳಲ್ಲಿ ಸಂಭವಿಸುತ್ತವೆ ಎನ್ನವುದು ಆತಂಕಕಾರಿ ಸಂಗತಿ.
ಕೋವಿಡ್-19 ಅಂತಹ ಒಂದು ವೈರಲ್ ಉಸಿರಾಟದ ಸೋಂಕು ಇಂದು ದೊಡ್ಡ ಮಟ್ಟದಲ್ಲಿ ಜಾಗತಿಕವಾಗಿ ಸುದ್ದಿಯಲ್ಲಿದೆ. ಇದು ವಿಶ್ವಾದ್ಯಂತ 25 ದಶಲಕ್ಷಕ್ಕೂ ಹೆಚ್ಚು ಜನರನ್ನು ಬಾಧಿಸಿದೆ ಮತ್ತು ಸುಮಾರು 2020 ರ ಸೆಪ್ಟೆಂಬರ್ ಆರಂಭದ ವೇಳೆಗೆ ಸುಮಾರು 8,60,000 ಜನರು ಸಾವನ್ನಪ್ಪಿದ್ದಾರೆ. ಮುಂದಿನ ದಿನಗಳಲ್ಲಿ ಈ ಹೊರೆ ಘಾತೀಯವಾಗಿ ಹೆಚ್ಚಾಗುವ ಸಾಧ್ಯತೆಯಿದೆ. ಆರಂಭಿಕ ಕಾಯಿಲೆ ಮತ್ತು ಮರಣದ ಹೊರತಾಗಿ, ಇತ್ತೀಚೆಗೆ ದೀರ್ಘಾವಧಿಯ ಪರಿಣಾಮಗಳನ್ನು ಸಹ ಹೆಚ್ಚು ಗುರುತಿಸಲಾಗುತ್ತಿದೆ. ಕೋವಿಡ್ -19 ಸೋಂಕಿನ ದೀರ್ಘಕಾಲೀನ ಉಸಿರಾಟದ ತೊಡಕುಗಳ ವ್ಯಾಪ್ತಿ ಮತ್ತು ತೀವ್ರತೆಯನ್ನು ನೋಡಬೇಕಾಗಿದೆ.
ಆದರೆ ಇತ್ತೀಚೆಗೆ ಹೆಚ್ಚಾಗುತ್ತಿರುವ ಅಂಕಿಅಂಶವು ಅನೇಕ ರೋಗಿಗಳು ತಮ್ಮ ಆರಂಭಿಕ ಅನಾರೋಗ್ಯದ ತಿಂಗಳ ನಂತರ ನಿರಂತರ ಉಸಿರಾಟದ ಸಮಸ್ಯೆಯ ಲಕ್ಷಣಗಳನ್ನು ಅನುಭವಿಸುತ್ತಾರೆ ಎಂದು ತಿಳಿಸುತ್ತಿದೆ. ಇತ್ತೀಚಿನ ಅಧ್ಯಯನದ ಪ್ರಕಾರ, ರೋಗ ಮುಕ್ತರಾದ 3 ತಿಂಗಳ ನಂತರ, ಶ್ವಾಸಕೋಶದ ಕ್ರಿಯೆಯ ಉಳಿದಿರುವ ಅಸಹಜತೆಗಳು ಶೇ. 25.45ರಷ್ಟು ಸಮೂಹದಲ್ಲಿ ಕಂಡುಬರುತ್ತವೆ, ಹೆಚ್ಚಾಗಿ ಡಿಎಲ್‍ಸಿಒದಲ್ಲಿ ಪ್ರಸರಣ ಕಡಿತವನ್ನು ಕಾಣಬಹುದಾಗಿದೆ.
ಕ್ರಾಸ್ ಇನ್ಫೆಕ್ಷನ್ ಆಗದೇ ಇರುವ ಹಾಗೇ ನೋಡಿಕೊಳ್ಳಬೇಕು; ಡಾ ಅರ್ಜುನ್ ಸತ್ಪುತೆ - ಕೊರೊನಾದ ಪಿಡುಗಿನ ಸಮಯದಲ್ಲಿ ಶ್ವಾಸಕೋಶಕ್ಕೆ ಸೋಂಕು ತಗುಲದಂತೆ ನೋಡಿಕೊಳ್ಳಬೇಕಿದೆ.. ಕ್ರಾಸ್ ಇನ್ಫೆಕ್ಷನ್ ಆಗದಂತೆ ನೋಡಿಕೊಳ್ಳುವ ಕೆಲಸ ಆಗಬೇಕು ಅಂತಾರೆ ಸಕ್ರಾ ವರ್ಲ್ಡ್ ಆಸ್ಪತ್ರೆಯ ಡಾ ಅರ್ಜುನ್ ಸತ್ಪುತೆ. ಕೋವಿಡ್ ನಿಂದ ಬಳಲುತ್ತಿರುವವರು, ಗುಣಮುಖರಾಗಿರುವವರಿಗೆ ಶ್ವಾಸಕೋಶ ಆರೈಕೆ ಬಹಳ ಮುಖ್ಯ.. ಅವರಿಗೆ ಲಂಗ್ಸ್ ಫೈಬ್ರೋಸಿಸ್ ಆಗಲಿದ್ದು ಇಂತಹವರು ಉಸಿರಾಟದ ತೊಂದರೆಯನ್ನ ಅನುಭವಿಸಬೇಕಾಗುತ್ತೆ ಅಂತ ತಿಳಿಸಿದ್ದಾರೆ.
ಶ್ವಾಸಕೋಶಕ್ಕಾಗಿ ಪುನರ್ವಸತಿ ಚಿಕಿತ್ಸೆ; ಡಾ ಮಹೇಶ್ವರಪ್ಪ ಬಿ.ಎಂ. ಸದ್ಯ ಕೋವಿಡ್ 19 ಅಷ್ಟೇಲ್ಲದೇ ಹಲವು ಕಾಯಿಲೆಗಳು ಶ್ವಾಸಕೋಶಕ್ಕೆ ಬರುತ್ತೆ.. ಕಾಯಿಲೆಗಳು ಉಲ್ಬಣಗೊಂಡು ಶ್ವಾಸಕೋಶಕ್ಕೆ ಹಾನಿ ಮಾಡಿ ರೋಗಿಗಳಿಗೆ ಕೃತಕ ಆಮ್ಲಜನಕದ ಮೇಲೆ ಅವಲಂಬಿಸಬೇಕಾದ ಅನಿರ್ವಾಯತೆ ಬಂದು ಬಿಡುತ್ತೆ.. ಹೀಗಾಗಿ, ಸಕ್ರಾ ವರ್ಲ್ಡ್ ಆಸ್ಪತ್ರೆಯಲ್ಲಿ ಶ್ವಾಸಕೋಶ ಪುರ್ನವಸತಿ ಚಿಕಿತ್ಸೆ ಕಾರ್ಯಕ್ರಮ ನಡೆಯುತ್ತಿದೆ ಅಂತ ತಿಳಿಸಿದರು. ಇದಕ್ಕಾಗಿ ಒಂದು ತಂಡ ರಚನೆಯಾಗಿದ್ದು ತಜ್ಞರು ಸೇರಿಕೊಂಡು ರೋಗಿಯ ಉನ್ನತಿಗಾಗಿ ಕೆಲಸ ಮಾಡುತ್ತಾರೆ ಅಂತ ವಿವರಿಸಿದರು..