ETV Bharat / state

ಹೃದಯ ರೋಗಗಳನ್ನು ತಡೆಯಲು 'ಹೃದಯವಂತರಾಗಿರಿ' ವಿಶ್ವ ಹೃದಯ ದಿನದ ಈ ಸಲದ ಘೋಷಣೆ... - ಆರೋಗ್ಯ ಇಲಾಖೆ

ನಾಳೆ ವಿಶ್ವ ಹೃದಯ ದಿನಾಚರಣೆ ಹಿನ್ನಲೆ ಆರೋಗ್ಯ ಇಲಾಖೆ ಹೃದಯ ರೋಗಗಳನ್ನು ತಡೆಯುವ ಮತ್ತು ನಿಯಂತ್ರಿಸುವ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಸಮುದಾಯ ಹಾಗೂ ಆರೋಗ್ಯ ಸಂಸ್ಥೆಗಳ ಮಟ್ಟದಲ್ಲಿ ಹಮ್ಮಿಕೊಂಡಿದೆ.

World Heart Day
ವಿಶ್ವ ಹೃದಯ ದಿನ
author img

By

Published : Sep 28, 2020, 9:11 PM IST

ಬೆಂಗಳೂರು: ಜೀವನ ಶೈಲಿ ಬದಲಾದಂತೆ ತೀವ್ರಕಾಲದ ರೋಗಗಳು ಬಾದಿಸೋಕ್ಕೆ ಶುರುವಾಗಿವೆ. ಅದರಲ್ಲೂ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿದ್ದು, ಇದನ್ನ ನಿಯಂತ್ರಿಸುವ ನಿಟ್ಟಿನಲ್ಲಿ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ 29 ರಂದು ವಿಶ್ವ ಹೃದಯ ದಿನವನ್ನ ಆಚರಿಸಲಾಗಿತ್ತೆ.

ಈ ಸಂದರ್ಭವನ್ನು ಉಪಯೋಗಿಸಿಕೊಂಡು ಹೃದಯ ರೋಗಗಳನ್ನು ತಡೆಯುವ ಮತ್ತು ನಿಯಂತ್ರಿಸುವ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಸಮುದಾಯ ಮಟ್ಟದಲ್ಲಿ, ಆರೋಗ್ಯ ಸಂಸ್ಥೆಗಳ ಮಟ್ಟದಲ್ಲಿ ಹಮ್ಮಿಕೊಳ್ಳಲಾಗುತ್ತದೆ.

ಅಸಾಂಕ್ರಾಮಿಕ ರೋಗಗಳಿಂದ ಸಂಭವಿಸುತ್ತಿರುವ ಶೇ.63ರಷ್ಟು ಸಾವುಗಳಲ್ಲಿ ಹೃದ್ರೋಗ ಪಾಲು ಶೇ.26ರಷ್ಟು ಇದೆ. ಹೃದಯ ರೋಗಗಳನ್ನು ತಡೆಯಲು ಮತ್ತು ನಿಯಂತ್ರಿಸಲು ಸಾಧ್ಯವಿಲ್ಲ. ಅಂದಹಾಗೇ ಈ ವರ್ಷ ಹೃದಯ ರೋಗಗಳನ್ನು ತಡೆಯಲು ಹೃದಯವಂತರಾಗಿರಿ ಎನ್ನುವ ಘೋಷಣೆ ಹೊರಡಿಸಿದೆ. ರಾಷ್ಟ್ರೀಯ ಕ್ಯಾನ್ಸರ್, ಮಧುಮೇಹ, ಹೃದಯ ರಕ್ತನಾಳಗಳ ರೋಗ ಪಾರ್ಶ್ವವಾಯು ತಡೆ ನಿಯಂತ್ರಣ ಕಾರ್ಯಕ್ರಮ (NPCDCS) ಹಮ್ಮಿಕೊಂಡಿದೆ.

ಆರೋಗ್ಯ ಶಿಕ್ಷಣ ಮತ್ತು ಜೀವನ ಶೈಲಿ ಬದಲಾವಣೆ ಮೂಲಕ ಅಸಾಂಕ್ರಾಮಿಕ ರೋಗಗಳನ್ನು ತಡೆಯುವುದು ಮತ್ತು ಚಿಕಿತ್ಸೆಯ ಮೂಲಕ ರೋಗ ನಿಯಂತ್ರಣ ಮಾಡುವುದರಿಂದ ಉತ್ತಮ ಆರೋಗ್ಯವನ್ನು ಕಾಯ್ದುಕೊಂಡು ಸಕ್ರಿಯ ಜೀವನ ಸಾಗಿಸಲು ಅವಕಾಶ ಮಾಡಿಕೊಡುವ ಉದ್ದೇಶ ಆರೋಗ್ಯ ಇಲಾಖೆ ಹೊಂದಿದೆ.

Progress report
ಪ್ರಗತಿ ವಿವರ
ಆರೋಗ್ಯ ಇಲಾಖೆಯ ಗುರಿ
  • ಚಿಕ್ಕಮಗಳೂರು ಮತ್ತು ರಾಯಚೂರು ಜಿಲ್ಲೆಗಳಲ್ಲಿ IHCI ಯೋಜನೆಯನ್ನು ಪ್ರಸಕ್ತ ವರ್ಷದಲ್ಲಿ ಅನುಷ್ಠಾನಕ್ಕೆ ತರುವುದು.
  • IHCI ಅನುಷ್ಠಾನದ ಅತಿಮುಖ್ಯ ಅಂಶವಾದ ಚಿಕಿತ್ಸಾ ಕ್ರಮವನ್ನು ರಾಜ್ಯದಾದ್ಯಂತ ಅನುಷ್ಠಾನಕ್ಕೆ ತರುವುದು.
  • ಪ್ರಸಕ್ತ ವರ್ಷದಲ್ಲಿ STEMI ಯೋಜನೆಯನ್ನು ಅನುಷ್ಠಾನಕ್ಕೆ ತರುವುದು.
  • ಪ್ರಸಕ್ತ ವರ್ಷದಲ್ಲಿ ಮಧುಮೇಹ ಚಿಕಿತ್ಸಾ ಕ್ರಮವನ್ನು ರಾಜ್ಯಾದ್ಯಂತ ಅನುಷ್ಠಾನಕ್ಕೆ ತರುವುದು.
  • ಪ್ರಸಕ್ತ ವರ್ಷದಲ್ಲಿ Stroke ಯೋಜನೆಗೆ ಪ್ರಸ್ತಾವನೆಯನ್ನು ಅನುಮೋದಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.