ETV Bharat / state

World day against child labour: ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ: ಮಕ್ಕಳನ್ನು ಶಾಲೆಗೆ ಕಳುಹಿಸಿ, ಕೆಲಸಕ್ಕಲ್ಲ: ಸಿ.ಆರ್. ವೈ

ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ನಿಮಿತ್ತ ಸಿಆರ್​ವೈ ಸಂಸ್ಥೆ ಹಲವು ವಿಚಾರಗಳನ್ನು ವ್ಯಕ್ತಪಡಿಸಿದೆ. ಅಲ್ಲದೇ ಬಾಲ ಕಾರ್ಮಿಕ ಪದ್ಧತಿ ಕೊನೆಗಾಣಿಸಲು ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ಸಹ ತಿಳಿಸಿದೆ.

World day against child labour
World day against child labour
author img

By

Published : Jun 12, 2023, 4:10 PM IST

ಬೆಂಗಳೂರು: ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಅಂಗವಾಗಿ ಮಕ್ಕಳ ಹಕ್ಕುಗಳು ಮತ್ತು ನೀವು (CRY- Child Rights and You) ಎಂಬ ಸಂಸ್ಥೆಯು ತನ್ನ ಪಾಲುದಾರ ಸಂಸ್ಥೆಗಳೊಂದಿಗೆ ಜನ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಂಡಿದೆ. ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ (ILO) ಘೋಷಣೆ ಮಾಡಿದಂತೆ, ಸಮಾಜದಲ್ಲಿ ಅಡಗಿರುವ ಬಾಲ ಕಾರ್ಮಿಕ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಹಾಗೂ ಜೂನ್ 12 ರಂದು ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಅವಶ್ಯಕ ಕ್ರಮಗಳನ್ನು ಕೈಗೊಳ್ಳುವಂತೆ ಸಿಆರ್​ವೈ (CRY) ಸಂಸ್ಥೆ ಹೇಳಿದೆ.

ಕರ್ನಾಟಕದ ಐದು ಜಿಲ್ಲೆಗಳಾದ ರಾಯಚೂರು, ಕಲಬುರಗಿ, ಬೆಳಗಾವಿ, ಕೋಲಾರ ಮತ್ತು ಬೆಂಗಳೂರು ಸೇರಿದಂತೆ, ಬಾಲಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಿ.ಆರ್.ವೈ (CRY) ಸಂಸ್ಥೆ ಹಾಗೂ ಅವರ ಸಹ ಪಾಲುದಾರ ಸಂಸ್ಥೆಗಳು ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. 'ಎಲ್ಲರಿಗೂ ಸಾಮಾಜಿಕ ನ್ಯಾಯ. ಬಾಲಕಾರ್ಮಿಕ ಪದ್ಧತಿಯನ್ನು ಕೊನೆಗಾಣಿಸಿ!' ಎಂಬ ಘೋಷಣೆಯೊಂದಿಗೆ 2023ರ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದೆ. ರಾಜ್ಯದ ಪ್ರತಿಯೊಂದು ಮಗು ಸುರಕ್ಷಿತವಾಗಿರುವಂತೆ ಮತ್ತು ಮಕ್ಕಳ ಪೂರಕ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಒಗ್ಗಟ್ಟಾಗಿ ಕೆಲಸ ಮಾಡಬೇಕು. ಎಲ್ಲ ಕಚೇರಿಗಳಲ್ಲಿ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಅಧಿಕಾರಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಬೇಕು. ಅನುಷ್ಠಾನ ತರುವಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ಮನವಿ ಮಾಡಿಕೊಂಡಿದೆ.

World day against child labour
ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ

ಬಾಲ ಕಾರ್ಮಿಕ ಪದ್ಧತಿ ವಿರೋಧಿ ಜಾಥಾ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಈ ದಿನದ ಅಂಗವಾಗಿ ಪೂರ್ವಭಾವಿಯಾಗಿ ಶಾಲಾ-ಕಾಲೇಜುಗಳ ಮಕ್ಕಳಿಗೆ ಬಾಲ ಕಾರ್ಮಿಕ ಪದ್ಧತಿ ವಿರೋಧಿ ಕುರಿತಂತೆ ಚಿತ್ರಕಲಾ, ಪ್ರಬಂದ ಹಾಗೂ ಭಾಷಣ ಸ್ಪರ್ಧೆ ಹಮ್ಮಿಕೊಳ್ಳಬೇಕು. ಸ್ಥಳೀಯ ಮತ್ತು ಜಿಲ್ಲಾ ಮಟ್ಟದ ಸರ್ಕಾರಿ ಆಡಳಿತದ ಸಹಯೋಗದೊಂದಿಗೆ ಪ್ರತಿಯೊಂದು ಮಗು ಶಾಲೆಗೆ ಹೋಗುವ ಬಗ್ಗೆ ತಿಳಿ ಹೇಳುವ ಕೆಲಸ ಮಾಡಬೇಕು. ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣಗಳಲ್ಲಿ ಅರಿವು ಮೂಡಿಸಬೇಕು. ಎಲ್ಲ ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು, ಕಾರ್ಮಿಕ ಸಂಘಟನೆಯವರು, ಬಾಲ ಕಾರ್ಮಿಕ ಮಕ್ಕಳು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸಿಆರ್​ವೈ (CRY) ಸಂಸ್ಥೆ ತನ್ನ ಪಾಲುದಾರ ಸಂಸ್ಥೆಗಳಿಗೆ ಮನವಿ ಮಾಡಿಕೊಂಡಿದೆ.

ಆತಂಕದ ಸನ್ನಿವೇಶ: ಬಾಲಕಾರ್ಮಿಕ ಪದ್ಧತಿ ಜಗತ್ತಿನ ಪಿಡುಗು. ಇಂದು ಎಲ್ಲೆಡೆ ಹಬ್ಬಿದೆ. ಇದನ್ನು ಕೊನೆಗಾಣಿಸಬೇಕು. ಅದಕ್ಕಾಗಿ ಎಲ್ಲರೂ ಕೈಜೋಡಿಸಬೇಕು. 2020ರ ಪ್ರಕಾರ ಯುನಿಸೆಫ್ ಮತ್ತು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ (ILO) ಉಲ್ಲೇಖ ಮಾಡಿದ ವರದಿಯಂತೆ ಜಾಗತಿಕ ಮಟ್ಟದಲ್ಲಿ ಅಂದಾಜು 16 ಕೋಟಿ ಮಕ್ಕಳು (5 ರಿಂದ 17 ವರ್ಷದೊಳಗಿನವರು) ಬಾಲ ಕಾರ್ಮಿಕರಾಗಿದ್ದರು. ಅದರಲ್ಲಿ 6.3 ಕೋಟಿ ಹುಡುಗಿಯರು ಮತ್ತು 9.7 ಕೋಟಿ ಹುಡುಗರು ಬಾಲ ಕಾರ್ಮಿಕರಾಗಿ ಉಳಿದಿದ್ದಾರೆ. ಜಗತ್ತಿನಾದ್ಯಂತ ಬಹುತೇಕ 10 ಮಕ್ಕಳಲ್ಲಿ 1 ಮಗು (1 In 10) ಈ ಸಮಸ್ಯೆಗೆ ಒಳಗಾಗುತ್ತದೆ ಎಂದು ಅಂದಾಜಿಸಲಾಗಿದೆ. ಶೇ. 50 ರಷ್ಟು ಮಕ್ಕಳು ಆರೋಗ್ಯ ದೃಷ್ಟಿಯಿಂದ, ಸುರಕ್ಷತೆ ಮತ್ತು ನೈತಿಕ ಅಭಿವೃದ್ಧಿಗೆ ನೇರವಾಗಿ ಅಪಾಯವನ್ನುಂಟು ಮಾಡುವ ಅಪಾಯಕಾರಿ ಕೆಲಸದಲ್ಲಿ ತೊಡಗಿಸಿಕೊಂಡಿರುತ್ತಾರೆ ಎಂಬ ಮಾತುಗಳನ್ನು ಸಹ ವರದಿಯಲ್ಲಿ ಉಲ್ಲೇಖ ಮಾಡಿದೆ.

2011ರ ಜನಗಣತಿಯ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ 5 ರಿಂದ 13 ವರ್ಷಗಳ ವಯಸ್ಸಿನ 75 ಲಕ್ಷ ಬಾಲ ಕಾರ್ಮಿಕರು (76,79,035) ಇದ್ದಾರೆ. ಅದರಲ್ಲಿ 42,06,708 ಬಾಲಕರು ಮತ್ತು 34,72,327 ಬಾಲಕಿಯರು ಸೇರಿದ್ದಾರೆ. ಅದರಂತೆ, 1,61,00,448 ಹದಿಹರೆಯದವರು (14 ರಿಂದ 17 ವರ್ಷಗಳ ವಯಸ್ಸಿನಲ್ಲಿ) ಕೆಲಸದಲ್ಲಿ ತೊಡಗಿದ್ದರು. ಅವುಗಳಲ್ಲಿ 1,01,40,659 ಹುಡುಗರು ಮತ್ತು 59,59,789 ಹುಡುಗಿಯರಾಗಿದ್ದರು.

2011ರ ಜನಗಣತಿಯ ಅಂಕಿ ಅಂಶಗಳ ಪ್ರಕಾರ ಕರ್ನಾಟಕದಲ್ಲಿ 3,04,493 ಬಾಲ (5 ರಿಂದ 13 ವರ್ಷ ವಯಸ್ಸಿನವರು) ಕಾರ್ಮಿಕರಿದ್ದರು. ಅದರಲ್ಲಿ 1,63,697 ಬಾಲಕರು ಮತ್ತು 1,40,796 ಬಾಲಕಿಯರು ಸೇರಿದ್ದಾರೆ. ಕರ್ನಾಟಕದಲ್ಲಿ ಕೆಲಸ ಮಾಡುವ ಹದಿಹರೆಯದವರ ಸಂಖ್ಯೆ 8,53,380 (14 ರಿಂದ 17 ವರ್ಷಗಳ ವಯಸ್ಸಿನವರು). ಅದರಲ್ಲಿ 5,33,671 ಹುಡುಗರು ಮತ್ತು 3,19,709 ಹುಡುಗಿಯರು ಇದ್ದರು.

2011ರ ಅಂಕಿ ಅಂಶ ತೀರಾ ಹಳೆಯದು. ಭಾರತದಾದ್ಯಂತ ಮಕ್ಕಳ ಕಾರ್ಮಿಕ ಸ್ಥಿತಿ-ಗತಿಯ ಬಗ್ಗೆ ಇತ್ತೀಚಿನ ಅಧಿಕೃತ ಅಂಕಿಅಂಶಗಳು ಲಭ್ಯವಿಲ್ಲ. ಈ ಅಂಕಿ-ಸಂಖ್ಯೆಗೆ ಹೋಲಿಕೆ ಮಾಡಿದರೆ ಇತ್ತೀಚೆಗೆ ಈ ಪ್ರಮಾಣ ಹೆಚ್ಚಾಗಿರಬಹುದು ಎಂದು ಅಂದಾಜು ಮಾಡಲಾಗಿದೆ. ಅದಕ್ಕೆ ಕಾರಣ ಕೊರೊನಾ! ಈ ಕಾಲಘಟ್ಟಲ್ಲಿ ಬಲವಂತ ಮತ್ತು ಕಾರ್ಮಿಕರಾಗಿ ತಳ್ಳಲ್ಪಟ್ಟ ಮಕ್ಕಳ ಸಂಖ್ಯೆಯು ಗಣನೀಯವಾಗಿ ಹೆಚ್ಚಾಗಿರಬಹುದು. ಹಾಗಾಗಿ ಅವರ ಜೀವನೋಪಾಯಕ್ಕಾಗಿ ಅವಕಾಶಗಳನ್ನು ಸೃಷ್ಟಿಸುವುದು ಬಹಳ ಮುಖ್ಯವಾಗಿದೆ. ಇದರಿಂದಾಗಿ ಮಕ್ಕಳು ಯಾವುದೇ ಕೆಲಸದ ಒತ್ತಡದಲ್ಲಿ ಸಿಲುಕುವ ಅವಶ್ಯಕತೆ ಇರುವುದಿಲ್ಲ. ಆದರೆ, ಸದ್ಯದ ಬಾಲ ಕಾರ್ಮಿಕ ಪ್ರಮಾಣ ಎಷ್ಟಿದೆ ಎಂಬುದರ ಬಗ್ಗೆ ನಮಗೆ ಗೊತ್ತಿರದ ಹೊರತು, ಅಂತಿಮ ಹಂತದ ಯೋಜನೆ ತರುವುದು ಕಷ್ಟ. ಪ್ರಸಕ್ತ ಬಾಲಕಾರ್ಮಿಕರ ಅಧಿಕೃತ ಮಾಹಿತಿಗಾಗಿ ಹಾಗೂ ಈ ಸಮಸ್ಯೆಯನ್ನು ಹೊಗಲಾಡಿಸಲು ಬೇಕಾದ ಪರಿಹಾರಗಳನ್ನು ಕಂಡುಕೊಳ್ಳಲು ಇನ್ನು ಕೆಲವು ದಿನಗಳವರೆಗೆ ನಾವು ಕಾಯಬೇಕು ಎಂದು ಸಿಆರ್​ವೈ (CRY) ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಜಾನ್ ರಾಬರ್ಟ್ಸ್ ಹೇಳಿದ್ದಾರೆ.

ದೇಶ ಸೇರಿದಂತೆ ಕರ್ನಾಟಕದಲ್ಲಿ ಬಾಲ ಕಾರ್ಮಿಕ ಪದ್ಧತಿ ಕೊನೆಗಾಣಿಸಲು ಕಳೆದ ಹಲವು ವರ್ಷಗಳಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆದರೆ, ಕೋವಿಡ್​ ಕಾರಣದಿಂದ ಅಂದುಕೊಂಡ ಪ್ರಮಾಣದಷ್ಟು ತಡೆಯಲಾಗಲಿಲ್ಲ.ಈ ವೇಳೆ ಸವಿರಾರು ಕುಟುಂಬಳು ಬಡತನಕ್ಕೆ ತಳ್ಳಲ್ಪಟ್ಟವು. ಹೆಚ್ಚಿನ ಸಂಖ್ಯೆಯ ಪೋಷಕರು ತಮ್ಮ ಮಕ್ಕಳನ್ನು ಬಲವಂತವಾಗಿ ಶಾಲೆಗೆ ಕಳಿಸುವುದನ್ನು ನಿಲ್ಲಿಸಿ ಕೆಲಸಕ್ಕೆ ಕಳಿಸಿದರು. ಇದು ಅಸಹಾಯಕದ ದಿನಮಾನಗಳು ಎಂದ ಜಾನ್ ರಾಬರ್ಟ್ಸ್, ಮಕ್ಕಳ ರಕ್ಷಣೆಗೆ ಎಲ್ಲರೂ ಮುಂದಾಗಬೇಕು, ಅವರ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಬೇಕು, ಅವರನ್ನು ಬಡತನದಿಂದ ಹೊರತರುವ ಯತ್ನ ಮಾಡಬೇಕು. ಅಂದಾಗ ಮಾತ್ರ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆಗೆ ಭವಿಷ್ಯದಲ್ಲಿ ಉತ್ತಮ ಬೆಲೆ ಬರುತ್ತದೆ. ಇದನ್ನು ಸಂಪೂರ್ಣವಾಗಿ ತೊಡೆದುಹಾಕುವ ನಿಟ್ಟಿನಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡು ಸೇರಿದಂತೆ ನಾಲ್ಕು ರಾಜ್ಯಗಳ 553 ಹಳ್ಳಿಗಳಲ್ಲಿ ನಮ್ಮ ಸಂಸ್ಥೆಯು ಕೆಲಸ ಮಾಡಲಿದೆ ಎಂದರು.

ಇದನ್ನೂ ಓದಿ: Electricity rate hike: ಕೈಗಾರಿಕೆಗಳ ವಿದ್ಯುತ್ ದರ ಇಳಿಸಿ - ಸರ್ಕಾರಕ್ಕೆ ಏಳು‌ ದಿನಗಳ‌ ಗಡುವು ಕೊಟ್ಟ ಬೆಳಗಾವಿ ಉದ್ಯಮಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.