ಬೆಂಗಳೂರು: “ಆರೈಕೆಯ ಅಂತರವನ್ನು ಮುಚ್ಚಿ” ಘೋಷವಾಕ್ಯದಡಿ 2024ರವರೆಗೆ ಕ್ಯಾನ್ಸರ್ ಜಾಗೃತಿ ಆಂದೋಲನ ಹಮ್ಮಿಕೊಳ್ಳಲು ಸರ್ಕಾರ ತೀರ್ಮಾನಿಸಿದೆ. 2022 ರ 24ರ ಕ್ಯಾನ್ಸರ್ ಜಾಗೃತಿ ಆಂದೋಲನದ ಸಾರಾಂಶವನ್ನು ಬಿಡುಗಡೆ ಮಾಡಲಾಗಿದೆ.
![world-cancer-awareness-day](https://etvbharatimages.akamaized.net/etvbharat/prod-images/kn-bng-02-world-cancer-day-script-7208077_03022022171011_0302f_1643888411_72.jpg)
ಈ ಬಾರಿಯ ಕ್ಯಾನ್ಸರ್ ದಿನವನ್ನು ವಿಶ್ವ ಕ್ಯಾನ್ಸರ್ ಜಾಗೃತಿ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ. ಇಂದು ವಿಶ್ವ ಕ್ಯಾನ್ಸರ್ ದಿನದ ಅಧಿಕೃತ ಬಣ್ಣವಾಗಿ ನೀಲಿ ಹಾಗೂ ಕಿತ್ತಳೆಯನ್ನು ಘೋಷಿಸಲಾಗಿದೆ. ಈ ಆಂದೋಲನದ ಘೋಷವ್ಯಾಖ್ಯೆಯನ್ನು ಸಾರ್ಥಕಗೊಳಿಸುವ ನಿಟ್ಟಿನಲ್ಲಿ ಕ್ಯಾನ್ಸರ್ ಆರೈಕೆಗೆ ಸಂಬಂಧಪಟ್ಟಂತೆ ಇರುವ ಕೊರತೆಗಳನ್ನು ನೀಗುವುದು ಮುಖ್ಯ ಉದ್ದೇಶವಾಗಿರುತ್ತದೆ.
ಈ ನಿಟ್ಟಿನಲ್ಲಿ ಸರ್ಕಾರಗಳು ಮತ್ತು ಸಂಬಂಧಪಟ್ಟ ಎಲ್ಲರೂ ತಮ್ಮ ಪ್ರಯತ್ನಗಳನ್ನು ಒಗ್ಗೂಡಿಸಿ ಮುಂದುವರೆಯಲು ಕಟಿ ಬದ್ಧರಾಗಿವೆ. ಸಮಸ್ಯೆಯ ಪ್ರಮಾಣ ಜಾಗತಿಕ ಮಟ್ಟದಲ್ಲಿ 10 ಮಿಲಿಯನ್ ಜನರು ಕ್ಯಾನ್ಸರ್ ರೋಗದಿಂದ ಮರಣವನ್ನು ಅಪ್ಪುತ್ತಿದ್ದಾರೆ. ಈ ಪ್ರಮಾಣವು ಹೆಚ್.ಐ.ವಿ/ಏಡ್ಸ್ ಮತ್ತು ಮಲೇರಿಯಾದಿಂದ ಸಂಭವಿಸಬಹುದಾದ ಸಾವುಗಳಿಗಿಂತ ಹೆಚ್ಚಿರುತ್ತದೆ.
![world-cancer-awareness-day](https://etvbharatimages.akamaized.net/etvbharat/prod-images/kn-bng-02-world-cancer-day-script-7208077_03022022171011_0302f_1643888411_739.jpg)
ತಜ್ಞರ ಅಭಿಪ್ರಾಯದಂತೆ ಅಗತ್ಯ ಕ್ರಮಗಳನ್ನು ಸಕಾಲದಲ್ಲಿ ಕೈಗೊಳ್ಳದಿದ್ದರೆ 2030 ನೇ ವರ್ಷದ ಸಂದರ್ಭಕ್ಕೆ ಸಾವಿನ ಪ್ರಮಾಣವು 13 ಮಿಲಿಯನ್ ಗೂ ಹೆಚ್ಚಾಗುವ ಸಂಭವವಿರುತ್ತದೆ. ಕ್ಯಾನ್ಸರ್ ಜಾಗತಿಕ ಮಟ್ಟದಲ್ಲಿ ಸಾವಿನ ಎರಡನೇ ಪ್ರಮುಖ ಕಾರಣವಾಗಿರುತ್ತದೆ.
2020ರಲ್ಲಿ ದೇಶದಲ್ಲಿ ಕ್ಯಾನ್ಸರ್ ಪ್ರಕರಣಗಳು ರಾಷ್ಟ್ರ ಮಟ್ಟದಲ್ಲಿ 13.9 ಲಕ್ಷದಷ್ಟಿದ್ದವು ಮತ್ತು ಪ್ರಸ್ತುತ ಪ್ರವೃತ್ತಿಗಳ ಆಧಾರದ ಮೇಲೆ 2025 ರ ವೇಳೆಗೆ 15.7 ಲಕ್ಷಕ್ಕೆ ಹೆಚ್ಚಾಗುವ ಸಾಧ್ಯತೆಯಿದೆ ಎಂಬ ಮಾಹಿತಿ ಐಸಿಎಂಆರ್ನಿಂದ ಲಭಿಸಿದೆ. ಶೇ.70ರಷ್ಟು ಕ್ಯಾನ್ಸರ್ ಸಾವುಗಳು ಕಡಿಮೆ-ಮಧ್ಯಮ ಆದಾಯದ ದೇಶಗಳಲ್ಲಿ ಸಂಭವಿಸುತ್ತವೆ.
![world-cancer-awareness-day](https://etvbharatimages.akamaized.net/etvbharat/prod-images/kn-bng-02-world-cancer-day-script-7208077_03022022171011_0302f_1643888411_59.jpg)
ಕರ್ನಾಟಕ ವಿವರ.. ಕರ್ನಾಟಕದಲ್ಲಿ, ಪ್ರತಿ ವರ್ಷ 78,381 ಹೊಸ ಕ್ಯಾನ್ಸರ್ ಪ್ರಕರಣಗಳು (ಎಲ್ಲಾ ರೀತಿಯ) ರೋಗನಿರ್ಣಯ ಮಾಡಲಾಗುತ್ತಿದೆ (ಜನಸಂಖ್ಯೆ ಆಧಾರಿತ ಕ್ಯಾನ್ಸರ್ ದಾಖಲಾತಿಗಳ ಪ್ರಕಾರ), ಪುರುಷ: 34,742, ಮಹಿಳೆ : 43,639 (ಮೂಲ: ಕಿದ್ವಾಯಿ ವೆಬೈಟ್), 2020 ರಲ್ಲಿ ಕ್ಯಾನ್ಸರ್ ಹರಡುವಿಕೆಯು 2,11,630 ಆಗಿದೆ (ಎಲ್ಲಾ ರೀತಿಯ). ಅವುಗಳಲ್ಲಿ, ಪುರುಷರಲ್ಲಿ ಕ್ಯಾನ್ಸರ್ ಪ್ರಮುಖ ತಾಣಗಳಂದರ ಶ್ವಾಸಕೋಶ (10.10%), ಜಠರ ಮತ್ತು ಅನ್ನನಾಳ (6.9%) ಮತ್ತು ಪ್ರಾಸ್ಟೇಟ್ (6.4%), ಮಹಿಳೆಯರಲ್ಲಿ, ಸ್ತನ (27,9%), ಗರ್ಭಕಂಠ (12%) ಮತ್ತು ಅಂಡಾಶಯ (6.4%), ಅಧಿಕ ರಕ್ತದೊತ್ತಡ, ಮಧುಮೇಹ, ಮತ್ತಿತರ ದೀರ್ಘಾವಧಿ ರೋಗಗಳು, ಕ್ಯಾನ್ಸರ್ ಗೆ ಹೆಚ್ಚಿನ ಅಪಾಯವನ್ನುಂಟು ಮಾಡುತ್ತವೆ.
ಕರ್ನಾಟಕದಲ್ಲಿ 4 ವಯಸ್ಕರಲ್ಲಿ ಒಬ್ಬರು ಅಧಿಕ ರಕ್ತದೊತ್ತಡ (26%) ಮತ್ತು 7 ಮಂದಿ ವಯಸ್ಕರಲ್ಲಿ ಒಬ್ಬರು ಅಧಿಕ ರಕ್ತದ ಸಕ್ಕರೆ (15%) ಹೊಂದಿರುತ್ತಾರೆ. ಕರ್ನಾಟಕದಲ್ಲಿ 2020 ರಲ್ಲಿ, ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಒಟ್ಟು ಹೊರ 27.9% ಇರುತ್ತದೆ.
ಇದು ಕರ್ನಾಟಕದ ಎಲ್ಲಾ ಕ್ಯಾನ್ಸರ್ಗಳಲ್ಲಿ ಅತಿ ಹೆಚ್ಚು. ರಾಜ್ಯದಲ್ಲಿ ರಾಷ್ಟ್ರೀಯ ಕಾರ್ಯಕ್ರಮವಾದ ಕ್ಯಾನ್ಸರ್, ಮಧುಮೇಹ, ಹೃದಯರೋಗಗಳು ಮತ್ತು ಪಾರ್ಶ್ವವಾಯು ನಿಯಂತ್ರಣ ಕಾರ್ಯಕ್ರಮದ ಮೂಲಕ ಇದುವರೆಗೆ 2271 ಬಾಯಿ ಮತ್ತು ಗಂಟಲು ಕ್ಯಾನ್ಸರ್, 1815 ಸ್ತನ ಕ್ಯಾನ್ಸರ್, 1207 ಗರ್ಭಕಂಠದ ಕ್ಯಾನ್ಸರ್ ಹಾಗೂ 6654 ಇತರೇ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರು ನಗರದಲ್ಲಿ ಪ್ರತಿ 1 ಲಕ್ಷ ಜನರಲ್ಲಿ 126 ಮಂದಿಗೆ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿವೆ.
(ಜನಸಂಖ್ಯೆ ಆಧಾರಿತ ಕ್ಯಾನ್ಸರ್ ನೋಂದಣಿ)
ನಮ್ಮ ಪ್ರಯತ್ನದಿಂದ 1/3 ರಷ್ಟು ಕ್ಯಾನ್ಸರ್ಗಳನ್ನು ಸಂಭವಿಸದಂತೆಯೇ ತಡೆಯಬಹುದಾಗಿದೆ. ಉಳಿದ 1/3 ರಷ್ಟು ಶೀಘ್ರ ಪತ್ತೆಯ ಮೂಲಕ ಗುಣಪಡಿಸಬಹುದಾಗಿದೆ.
ಕ್ಯಾನ್ಸರ್ಗೆ ಅಪಾಯಕಾರಿ ಅಂಶಗಳು.. ಕ್ಯಾನ್ಸರ್ನಿಂದ ಸುಮಾರು ಮೂರನೇ ಒಂದು ಭಾಗದಷ್ಟು ಸಾವುಗಳು 5 ಪ್ರಮುಖ ನಡವಳಿಕೆ ಮತ್ತು ಆಹಾರದ ಅಪಾಯಗಳಿಂದಾಗಿ ಸಂಭವಿಸುತ್ತವೆ. ಹೆಚ್ಚಿನ ದೇಹದ ದ್ರವ್ಯರಾಶಿ ಸೂಚಿ, ಕಡಿಮೆ ಹಣ್ಣು ಮತ್ತು ತರಕಾರಿ ಸೇವನೆ, ದೈಹಿಕ ಚಟುವಟಿಕೆಯ ಕೊರತೆ, ತಂಬಾಕು ಬಳಕೆ ಮತ್ತು ಮದ್ಯದ ಬಳಕೆ, ಕ್ಯಾನ್ಸರ್ ಉಂಟು ಮಾಡುವ ಪ್ರಮುಖ ಕಾರಣಗಳ ಬಗ್ಗೆ ಗಮನಿಸಿದರೆ, ಶೇಕಡಾ 3ನೇ ಒಂದರಷ್ಟು ಕ್ಯಾನ್ಸರ್ ಗಳಿಗೆ ಜೀವನಶೈಲಿ ಮತ್ತು ಆಹಾರ ಪದ್ಧತಿಗೆ ಸಂಬಂಧಿಸಿದ ಈ ಕಳಗಿನ 5 ಅಂಶಗಳು ಕಾರಣವಾಗಿದೆ.
1. ಹೆಚ್ಚಿನ ದೇಹ ವಿನ್ಯಾಸ
2. ಕಡಿಮೆ ಪ್ರಮಾಣದಲ್ಲಿ ಹಣ್ಣು ಮತ್ತು ತರಕಾರಿಗಳ ಸೇವನೆ
3. ಕಡಿಮೆ ದೈಹಿಕ ಚಟುವಟಿಕೆ
4. ತಂಬಾಕು ಸೇವನೆ ಮತ್ತು
5. ಮದ್ಯಪಾನ
ತಂಬಾಕು ಸೇವನೆಯೊಂದರಿಂದಲೇ ಶೇ. 22 ರಷ್ಟು ಕ್ಯಾನ್ಸರ್ ಸಂಬಂಧಿ ಸಾವುಗಳು ಜಗತ್ತಿನಾದ್ಯಂತ ಜರುಗುತ್ತಿದೆ. ಮಧ್ಯಮ ಮತ್ತು ಕೆಳ ಆದಾಯದ ರಾಷ್ಟ್ರಗಳಲ್ಲಿ ಶೇ.25 ರಷ್ಟು ಕ್ಯಾನ್ಸರ್ಗಳು ಹೆಪಟೈಟಿಸ್ ಮತ್ತು ಹೆಚ್.ಪಿ.ವಿ ವೈರಸ್ನಿಂದಲೇ ಸಂಭವಿಸುತ್ತಿವೆ.
ಇತರೇ ಮುಖ್ಯ ಕಾರಣಗಳೆಂದರೆ: ವಿಕಿರಣಗಳು, ಅಲ್ಪಾವಯಲೆಟ್ ಕಿರಣಗಳು, ನಗರಗಳಲ್ಲಿ ವಾಯುಮಾಲಿನ್ಯ ಮತ್ತು ಗೃಹಮಟ್ಟದಲ್ಲಿ ಅಡುಗೆಗೆ ಕಟ್ಟಿಗೆ ಮತ್ತು ಬೆರಣಿ ಬಳಸುವುದು ಕಾರಣವಾಗಿದೆ. ಕ್ಯಾನ್ಸರ್ ತಡೆಯುವ ಬಗ್ಗೆ ಇರುವ ಉಲ್ಲೇಖಗಳನ್ನು ಗಮನಿಸಿದರೆ, ಮೇಲೆ ಉಲ್ಲೇಖಿಸಿದ ಕ್ಯಾನ್ಸರ್ ಕಾರಕಗಳನ್ನು ತಡೆಯುವುದು. ಹೆಚ್.ಪಿ.ಎ ಮತ್ತು ಹೆಪಟೈಟಿಸ್ ಬಿ ಗಳಿಗೆ ಲಸಿಕ ಲಭ್ಯವಿದ್ದು, ಇದರ ಪ್ರಯೋಜನ ಪಡೆಯುವುದು. ಕೆಲಸದ ಸ್ಥಳದಲ್ಲಿ ಮತ್ತು ವಿಕಿರಣಗಳ ಸಂಪರ್ಕವನ್ನು ಆದಷ್ಟೂ ಪಡೆಯುವುದು. ವೈದ್ಯಕೀಯ ಕ್ಷೇತ್ರದಲ್ಲಿ ಕ್ಷ-ಕಿರಣಗಳಿಂದ ಹಾನಿಹಾಗದಂತೆ ಕ್ರಮ ವಹಿಸುವುದು.
ಕ್ಯಾನ್ಸರ್ ಮುಕ್ತಿಗೆ ಮೂರು ಮುಖ್ಯ ಮಂತ್ರಗಳೆಂದರೆ,
1. ಅರಿವು ಮೂಡಿಸುವುದು ಮತ್ತು ಆರೈಕೆಗೆ ಅವಕಾಶಗಳನ್ನು ಕಲ್ಪಿಸುವುದು
2. ಶೀಘ್ರ ಪತ್ತೆ ಮತ್ತು ಸಕಾಲದಲ್ಲಿ ಚಿಕಿತ್ಸೆ
3. ಎಲ್ಲರಿಗೂ ಚಿಕಿತ್ಸೆ ಲಭ್ಯವಾಗುವಂತೆ ಕ್ರಮ ವಹಿಸುವುದು
ಕಾರ್ಯಕ್ರಮ.. ರಾಷ್ಟ್ರೀಯ ಕ್ಯಾನ್ಸರ್, ಮಧುಮೇಹ, ಹೃದಯರೋಗ ಮತ್ತು ಪಾರ್ಶ್ವವಾಯು ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ 30 ವರ್ಷ ಮೇಲ್ಪಟ್ಟ ಎಲ್ಲಾ ವಯಸ್ಕರಿಗೂ ಪ್ರತಿ 5 ವರ್ಷಕ್ಕೆ ಒಂದು ಬಾರಿಯಂತ ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಮತ್ತು ಗರ್ಭಕಂಠದ ಕ್ಯಾನ್ಸರ್ ಗೆ ಪೂರ್ವಭಾವಿ ತಪಾಸಣೆ ಕೈಗೊಂಡು ರೋಗ ಪತ್ತೆ ಮತ್ತು ಚಿಕಿತ್ಸೆಗೆ ಒಳಪಡಿಸುವ ಅವಕಾಶವಿರುತ್ತದೆ.
ಈ ಮೂರು ಕ್ಯಾನ್ಸರ್ ಗಳನ್ನು ಸಮುದಾಯ ಮಟ್ಟದಲ್ಲಿ ಬೇಗ ಗುರುತಿಸಲು ಸಾಧ್ಯ ಮತ್ತು ಸಕಾಲದ ಚಿಕಿತ್ಸೆಯಿಂದ ಗುಣಪಡಿಸಲೂ ಸಾಧ್ಯ ಶೇ.34 ರಷ್ಟು ಕ್ಯಾನ್ಸರ್ ಗಳು ಈ ಮೂರು ರೀತಿಯ ಕ್ಯಾನ್ಸರ್ ಗಳಿಂದಲೇ ಸಂಭವಿಸುತ್ತಿರುವ ಕಾರ್ಯಕ್ರಮ ಈ ನಿಟ್ಟಿನಲ್ಲಿ ಕ್ರಮವಹಿಸಿದೆ.
ಈ ಸೌಲಭ್ಯಗಳಿಗಾಗಿ ಆರೋಗ್ಯ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಬಹುದಾಗಿದೆ. ಈಗಾಗಲೇ ಕ್ಯಾನ್ಸರ್ ಪೀಡಿತರಾಗಿದ್ದು, ಉಲ್ಬಣಾವ್ಯಸ್ಥೆಯಲ್ಲಿದ್ದು, ವಾಸಿ ಮಾಡಲಾಗದ ಸ್ಥಿತಿಗೆ ತಲುಪಿದ್ದಲ್ಲಿ, ಉಪಶಾಮಕ ಆರೈಕೆಗೂ ರಾಷ್ಟ್ರೀಯ ಉಪಶಾಮಕ ಚಿಕಿತ್ಸಾ ಕಾರ್ಯಕ್ರಮದ ಅಡಿ ಆರೈಕೆ ಮತ್ತು ನೋವು ನಿವಾರಕ ಚಿಕಿತ್ಸೆಗೆ ಅವಕಾಶವಿದೆ.
ಈ ಸೌಲಭ್ಯಗಳು ಕಟ್ಟಕಡೆಯ ಮನುಷ್ಯನನ್ನು ಒಳಗೊಳ್ಳಬೇಕೆಂಬುದು ಕಾರ್ಯಕ್ರಮದ ಆಶಯವಾಗಿರುತ್ತದೆ. ಶೇ.80 ರಷ್ಟು ಕ್ಯಾನ್ಸರ್ ರೋಗಿಗಳಿಗೆ ನೋವು ನಿವಾರಕ ಚಿಕಿತ್ಸೆಯ ಅಗತ್ಯವಿದ್ದು, ಕಾರ್ಯಕ್ರಮ ಮೂಲಕ ನೋವು ನಿವಾರಕ ಅಗತ್ಯವಿರುವ ರೋಗಿಗಳ ಮಾರ್ಫಿನೆ ಮಾತ್ರೆಗಳು ಲಭ್ಯವಾಗುವಂತೆ ಕ್ರಮವಹಿಸುವುದು ಕಾರ್ಯಕ್ರಮದ ಭಾಗವಾಗಿರುತ್ತದೆ.
2022 ರ ಕ್ಯಾನ್ಸರ್ ಜಾಗೃತಿ ದಿನದಂದು “ಆರೈಕೆಯ ಅಂತರವನ್ನು ಮುಚ್ಚಿ" ಅನ್ನುವ ಘೋಷ ವಾಕ್ಯದೊಂದಿಗೆ ಸನ್ನದ್ಧರಾಗೋಣ, ಬದಲಾವಣೆ ನಮ್ಮಿಂದಲೇ ಶುರುವಾಗಲೆಂದು ಮೊದಲು ನಾವು, ನಮ್ಮ ಕುಟುಂಬ ಮತ್ತು ಆಪ್ತರು ಕ್ಯಾನ್ಸರ್ ತಡೆಯುವ ನಿಟ್ಟಿನಲ್ಲಿ ಪಣ ತೊಡೋಣ. 2022ನೇ ವರ್ಷವು ಕ್ಯಾನ್ಸರ್ ತಡೆಯುವ ಕುರಿತಂತೆ ಚರಿತ್ರಾರ್ಹ ವರ್ಷವಾಗಲೆಂದು ಪಣತೊಡೋಣ ಎಂದು ಸರ್ಕಾರ ಸಾರ್ವಜನಿಕರಿಗೆ ಕರೆಕೊಟ್ಟಿದೆ.
ರಾಜ್ಯ ಮಟ್ಟದಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಕ್ಯಾನ್ಸರ್ ಕುರಿತಾದ ಅರಿವು ಮೂಡಿಸುವ ಮತ್ತು ಕ್ಯಾನ್ಸರ್ ಶೀಘ್ರ ಪತ್ತೆ ಹಚ್ಚುವ ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಓದಿ: ಕಲಿಸುವ ಗುರುವು ಬೀದಿಯಲ್ಲಿ ನಿಂತಿದ್ದಾಗ ಭಾರತ ವಿಶ್ವಗುರು ಆಗಲು ಸಾಧ್ಯವೇ: ಹೆಚ್ಡಿಕೆ ಕಿಡಿ