ETV Bharat / state

ವರ್ಕ್‌ಫ್ರಮ್ ಹೋಮ್ ಎಂಬ ಪರಿಹಾರವೇ ಈಗ ಸಮಸ್ಯೆ ಆಗ್ಬಿಡ್ತು.. ಅದಕ್ಕೂ ಮದ್ದುಂಟು

ಸ್ನೇಹಿತರು ಹಾಗೂ ಹಿತೈಷಿಗಳ ಜೊತೆ ಒಡನಾಟ ಈಗ ನಿಂತಿದೆ. ಈಗ ಎಲ್ಲರೂ ಮನೆಯಲ್ಲಿ ಬಂಧಿತರಾಗಿದ್ದಾರೆ. ಹೀಗಾಗಿ, ಮನೆಯಲ್ಲಿ ಭಿನ್ನಾಭಿಪ್ರಾಯಕ್ಕೆ ಹೆಚ್ಚಿನ ಅವಕಾಶ ಆಗುತ್ತಿದೆ. ಮನಸಿಗೆ ಬಹಳ ಒತ್ತಡ ಎನ್ನಿಸಿದರೆ ತಜ್ಞರ ಸಹಾಯ ಪಡೆಯಬೇಕು..

work-from-home-
ವರ್ಕ್ ಫ್ರಮ್ ಹೋಮ್
author img

By

Published : Sep 11, 2020, 4:55 PM IST

Updated : Sep 11, 2020, 7:11 PM IST

ಬೆಂಗಳೂರು: ಕೋವಿಡ್-19 ತಂದ ಫಜೀತಿಯಿಂದ ಐಟಿಬಿಟಿ ನೌಕರರಿಗೆ ವರ್ಕ್ ಫ್ರಮ್ ಹೋಮ್ (ಮನೆಯಿಂದಲೇ ಕೆಲಸ) ಎಂಬ ಹೆಸರಿನಲ್ಲಿ ಘೋಷಿಸಿದ ಪರ್ಯಾಯ ವ್ಯವಸ್ಥೆ ಈಗ ಸರಣಿ ಸಮಸ್ಯೆಗಳ ಪಟ್ಟಿ ಬೆಳೆದು ಕೆಲ ನೌಕರರ ಕುಟುಂಬ ಒಡೆಯುವ ಹಂತಕ್ಕೆ ಬಂದಿದೆ.

ಮಾರ್ಚ್ ತಿಂಗಳಲ್ಲಿ ಘೋಷಣೆಯಾದ ಮನೆಯಿಂದ ಕೆಲಸದ ವ್ಯವಸ್ಥೆ, ಪ್ರಾಥಮಿಕ ಹಂತದಲ್ಲಿ ಎಲ್ಲಾ ಟೆಕ್ಕಿಗಳಿಗೆ ಎಂದು ಕಾಣದ ಸಂತಸದ ದಿನಗಳಾಗಿದ್ದವು. ಆದರೆ, ಮೇ ತಿಂಗಳಿಂದ ಹಲವಾರು ಸಮಸ್ಯೆಗಳು ಕಂಡು ಬಂದವು. ಈಟಿವಿ ಭಾರತ ಒಟ್ಟು 9 ಮಧ್ಯ ವಯಸ್ಸಿನ ಟೆಕ್ಕಿಗಳೊಂದಿಗೆ ವರ್ಕ್ ಫ್ರಮ್ ಹೋಮ್ ಬಗ್ಗೆ ಚರ್ಚೆ ನಡೆಸಿದಾಗ, 6 ಮಂದಿ ಮತ್ತೆ ಕಚೇರಿಯಿಂದ ಕೆಲಸ ಮಾಡಲು ಹಂಬಲ ವ್ಯಕ್ತಪಡಿಸಿದರು.

ಹಾಗಾದರೆ ಮಧ್ಯವಯಸ್ಸಿನ ಟೆಕ್ಕಿಗಳಿಗೆ ಆಗುತ್ತಿರುವ ಸಮಸ್ಯೆಗಳೇನು?: ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿರುವ 32ರಿಂದ ಮೇಲ್ಪಟ್ಟ ಹೆಂಗಸರಿಗೆ ಅತ್ತೆ ಮಾವನ ಜೊತೆ ಇರುವವರಿಗೆ, ಮನೆಯಲ್ಲಿ ಶಾಂತಿ ಕಳೆದಿರುವ ವಾತಾವರಣ ನಿರ್ಮಾಣವಾಗಿದೆ ಎಂದು ಅಭಿಪ್ರಾಯ.

ಕೇಸ್ ಸ್ಟಡಿ: ಸ್ವಾತಿ 37 ವರ್ಷದ (ಹೆಸರು ಬದಲು) ಹಾಗೂ ಶರತ್ 38 ವರ್ಷದ( ಹೆಸರು ಬದಲು) 10 ವರ್ಷದ ದಾಂಪತ್ಯ ಬದುಕು. ದಂಪತಿಗಳಿಬ್ಬರು ಅಮೆರಿಕಾ ಮೂಲದ ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಸುತ್ತಿದ್ದಾರೆ. ಸ್ವಾತಿ ಹೇಳುವ ಪ್ರಕಾರ, ವರ್ಕ್ ಫ್ರಮ್ ಹೋಮ್ ನಮಗೆ ಹೊಸದಲ್ಲ. ವಾರದಲ್ಲಿ 1 ಅಥವಾ 2 ದಿನ ಮನೆಯಿಂದ ಕೆಲಸ ಮಾಡುವುದಕ್ಕೆ ಸಂಸ್ಥೆ ಅವಕಾಶ ನೀಡಿತ್ತು. ಆದರೆ, ವರ್ಷವಿಡೀ ಕೆಲಸ ಮಾಡುತ್ತಿರುವುದು ನಮಗೆ ದಶಕ ಕಳೆದಂತೆ ಅನುಭುವ ಆಗುತ್ತಿದೆ.

ವರ್ಕ್‌ಫ್ರಮ್‌ ಹೋಮ್‌ನಿಂದಾಗುವ ಸಮಸ್ಯೆಗಳಿಗೆ ಮನೋವೈದ್ಯರ ಪರಿಹಾರ

ವರ್ಕ್ ಫ್ರಮ್ ಹೋಮ್ ಘೋಷಣೆಯಾದ ಮೊದಲೆರಡು ತಿಂಗಳು (ಮಾರ್ಚ್ ಹಾಗೂ ಏಪ್ರಿಲ್) ನಮ್ಮ ಮಗು ಜೊತೆ ಜೀವನದ ಅತ್ಯಮೂಲ್ಯ ಕ್ಷಣಗಳನ್ನು ಕಳೆದಿದ್ದೇವೆ. ಹೊಸ ಅಡುಗೆ, ಮನೆ ಕೆಲಸ ಹಾಗೂ ಸ್ನೇಹಿತರು ಸಂಬಂಧಿಕರ ಜೊತೆ ವಿಡಿಯೋ ಕರೆಗಳು ಬಹುಶಃ ನಾವು ಮರೆಯಲಾಗದ ಸಂಗತಿ.

ತೊಂದರೆ ಹಾಗೂ ಕಿರಿಕಿರಿ ಶುರುವಾಗಿದ್ದು, ಮೇ ತಿಂಗಳಿಂದ ಎಲ್ಲರಿಗೂ ತಿಳಿದಂತೆ ಕುಸಿಯುತ್ತಿರುವ ಆರ್ಥಿಕತೆಯಲ್ಲಿ ಸಂಸ್ಥೆಗಳು ನೌಕರರನ್ನು ಕೆಲಸದಿಂದ ಓಡಿಸಲು ಕಾಯುತ್ತಿರುತ್ತಾರೆ. ನಮ್ಮ ಫಲಿತಾಂಶ ಶೇ.100 ಇರಲೇಬೇಕು. ಅಂತಹ ಸಂದರ್ಭದಲ್ಲಿ ಮನೆಯ ಕೆಲಸಗಳಾದ ಅಡುಗೆ ಸ್ವಚ್ಛತೆ ನಮಗೆ ಒತ್ತಡ ಆಗುತ್ತಿದೆ. ಮನೆಯಲ್ಲಿರುವ ಅತ್ತೆ ಹಾಗೂ ಮಾವ ನಮ್ಮ ಒತ್ತಡ ಅರ್ಥಮಾಡಿಕೊಳ್ಳಬೇಕು. ಅದನ್ನು ಬಿಟ್ಟು ಮನೆ ಕೆಲಸ ಆಗಬೇಕು ಎಂದು ಕಿರಿಕಿರಿ ಮಾಡುತ್ತಿದ್ದಾರೆ. ಇಷ್ಟು ವರ್ಷಗಳಿಂದ ಮನೆಯವರ ಜೊತೆ ಒಟ್ಟಿಗೆ ಇರಬೇಕು ಎಂಬ ನನ್ನ ಯೋಚನೆ ಈಗ ಬದಲಾಗುತ್ತಿದೆ ಎಂದು ಕಣ್ಣೀರಿಟ್ಟರು.

ತಜ್ಞರ ಸಲಹೆ: ಈ ರೀತಿ ಸಮಸ್ಯೆ ಸಾಕಷ್ಟು ಮನೆಯವರಿಗೆ ಆಗುತ್ತಿದೆ. 3 ದಶಕಗಳಿಂದ ಮನೋರೋಗ ತಜ್ಞರಾಗಿ ಕಾರ್ಯನಿರ್ವಹಿಸುತ್ತಿರುವ ಡಾ ಜಗದೀಶ್ ಅವರನ್ನು ಈಟಿವಿ ಭಾರತ ಮಾತನಾಡಿಸಿದಾಗ, ಮನೆಯಿಂದ ಕೆಲಸ ಮಾಡುವ ಸೌಲಭ್ಯ ನೌಕರರಿಗೆ ಜೀವನ ಬದಲಿಸಿದೆ. ಪ್ರಾಥಮಿಕ ಹಂತದಲ್ಲಿ ವರ್ಕ್ ಫ್ರಮ್ ಹೋಮ್ ಆದೇಶ ನೌಕರರಿಗೆ ಆರಾಮಾಗಿ ಕೆಲಸ ಮಾಡಬಹುದು ಎಂದು ಭಾವಿಸಿದ್ದರು. ಆದರೆ, ತಿಂಗಳು ಕಳೆದಂತೆ ನಿಗದಿತ ಅವಧಿಯಲ್ಲಿ ಕೆಲಸ ಇಲ್ಲದ ಕಾರಣ (ಕಚೇರಿ ಸಮಯ) ಹೆಚ್ಚಿನ ಹೊತ್ತು ಟೆಕ್ಕಿಗಳು ಕೆಲಸ ಮಾಡುತ್ತಿದ್ದಾರೆ.

ಜೊತೆಗೆ ಸ್ನೇಹಿತರು ಹಾಗೂ ಹಿತೈಷಿಗಳ ಜೊತೆ ಒಡನಾಟ ಈಗ ನಿಂತಿದೆ. ಈಗ ಎಲ್ಲರೂ ಮನೆಯಲ್ಲಿ ಬಂಧಿತರಾಗಿದ್ದಾರೆ. ಹೀಗಾಗಿ, ಮನೆಯಲ್ಲಿ ಭಿನ್ನಾಭಿಪ್ರಾಯಕ್ಕೆ ಹೆಚ್ಚಿನ ಅವಕಾಶ ಆಗುತ್ತಿದೆ. ಮನಸಿಗೆ ಬಹಳ ಒತ್ತಡ ಎನ್ನಿಸಿದರೆ ತಜ್ಞರ ಸಹಾಯ ಪಡೆಯಬೇಕು. ಹೀಗೆ ಮಾಡುವುದರಿಂದ ಒಡೆಯುವ ಕುಟಂಬಗಳನ್ನು ಮತ್ತೆ ಒಂದು ಮಾಡಬಹುದು ಎಂದು ಸಲಹೆ ನೀಡಿದರು.

Last Updated : Sep 11, 2020, 7:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.