ETV Bharat / state

ಮಹಿಳಾ ದಿನಾಚರಣೆ: ಮಹಿಳಾ ಪ್ರಯಾಣಿಕರಿಗೆ ಬಿಎಂಟಿಸಿಯಲ್ಲಿ ನಾಳೆ ಉಚಿತ ಪ್ರಯಾಣ - Free travel for women passengers

ವಿಶ್ವದೆಲ್ಲೆಡೆ ಮಹಿಳಾ ದಿನಾಚರಣೆ ವಿಶೇಷವಾಗಿ ಆಚರಿಸಲಾಗುತ್ತಿದ್ದು, ಮಹಿಳೆಯರಿಗಾಗಿ ವಿಶೇಷವಾಗಿ ಉಚಿತ ಕೊಡುಗೆಯನ್ನು ಬಿಎಂಟಿಸಿ ನೀಡುತ್ತಿದೆ.

womens-day-free-travel-for-women-passengers-on-bmtc-tomorrow
ಮಹಿಳಾ ದಿನಾಚರಣೆ: ಮಹಿಳಾ ಪ್ರಯಾಣಿಕರಿಗೆ ಬಿಎಂಟಿಸಿಯಲ್ಲಿ ನಾಳೆ ಉಚಿತ ಪ್ರಯಾಣ
author img

By

Published : Mar 7, 2023, 7:42 PM IST

ಬೆಂಗಳೂರು: ಮಹಿಳಾ ಪ್ರಯಾಣಿಕರಿಗೆ ಬಿಎಂಟಿಸಿ ಸಿಹಿ ಸುದ್ದಿ ನೀಡಿದೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳೆಯರಿಗೆ ಸಂಸ್ಥೆಯ ಎಲ್ಲ ಬಸ್​​​ಗಳಲ್ಲಿ ಉಚಿತ ಪ್ರಯಾಣ ಕಲ್ಪಿಸಿದೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಮಾರ್ಚ್​ 8 ರಂದು ಬೆಂ.ಮ.ಸಾ.ಸಂಸ್ಥೆಯು ಎಲ್ಲಾ ಸಾರಿಗೆ ಸೇವೆಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಒಂದು ದಿನ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲು ಸರ್ಕಾರದ ಅನುಮೋದನೆ ನೀಡಿದೆ.

ಬಿಎಂಟಿಸಿಯ ಎಲ್ಲ ಮಾದರಿಯ ಬಸ್‌ಗಳಲ್ಲಿ ಬುಧವಾರ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಬಹುದಾಗಿದೆ. ಎಸಿ, ವೋಲ್ವೊ ವಜ್ರ, ವಾಯುವಜ್ರ ಬಸ್‌ಗಳಲ್ಲಿಯೂ ಹಣ ನೀಡದೇ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ಗಳಲ್ಲಿ ನಿತ್ಯ ಸರಾಸರಿ 8-9 ಲಕ್ಷ ಮಹಿಳಾ ಪ್ರಯಾಣಿಕರು ಸಂಚಾರ ಮಾಡುತ್ತಾರೆ. ಮಂಗಳವಾರ ಮಧ್ಯರಾತ್ರಿ 12 ಗಂಟೆಯಿಂದ ಬುಧವಾರ ಮಧ್ಯರಾತ್ರಿ 12 ಗಂಟೆಯವರೆಗೂ ಬಿಎಂಟಿಸಿ ಬಸ್‌ಗಳಲ್ಲಿ ಸಂಪೂರ್ಣ ಉಚಿತವಾಗಿ ಪ್ರಯಾಣಿಸಬಹುದಾಗಿದೆ.

ಈಗಾಗಲೇ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ ಸೇರಿದ ಹೋಟೆಲ್​ಗಳಲ್ಲಿ ಕೊಠಡಿ ಬುಕ್ಕಿಂಗ್ ಮೇಲೆ ಮಹಿಳೆಯರಿಗೆ ಶೇ 50ರಷ್ಟು ರಿಯಾಯಿತಿ ನೀಡಿ ಆದೇಶಿಸಿದೆ. ‌ಮಾರ್ಚ್ 8 ರಂದು ಆಚರಿಸಲಾಗುತ್ತಿರುವ 48ನೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳಾ ಪ್ರವಾಸಿಗರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವತಿಯಿಂದ ರಾಜ್ಯಾದ್ಯಂತ ನಿರ್ವಹಣೆ ಮಾಡುತ್ತಿರುವ ಮಯೂರ ಗ್ರೂಪ್ ಹೋಟೆಲ್​​​​​ಗಳಲ್ಲಿ ಈ ರಿಯಾಯಿತಿ ನೀಡಲಾಗಿದೆ. ಕೊಠಡಿ ಬುಕ್ಕಿಂಗ್ ಮೇಲೆ ಶೇ 50ರಷ್ಟು ಹಾಗೂ ಊಟೋಪಹಾರದ ಮೇಲೆ ಶೇ 20ರಷ್ಟು ರಿಯಾಯಿತಿ ನೀಡಿ ವಿಶೇಷ ಕೊಡುಗೆ ನೀಡಲಾಗಿದೆ.

ಈ ವಿಶೇಷ ಕೊಡುಗೆ ಮಾ.6 ರಿಂದ ಮಾ.10ರವರೆಗೆ ಅನ್ವಯಿಸಲಿದೆ. ನಿಗಮದ ಹೋಟೆಲ್​ಗಳಲ್ಲಿ ಕೊಠಡಿಗಳನ್ನು ಕಾಯ್ದಿರಿಸುವ ಒಬ್ಬ ಮಹಿಳೆ/ಕುಟುಂಬ/ಗುಂಪು ಮಹಿಳಾ ಪ್ರವಾಸ ಕೈಗೊಳ್ಳುವ ಮಹಿಳಾ ಪ್ರವಾಸಿಗರಿಗೆ ಶೇ 50ರಷ್ಟು ರಿಯಾಯಿತಿ ನೀಡಲಾಗುತ್ತದೆ.

8.17 ಕೋಟಿ ಖರ್ಚು: ಸಿಲಿಕಾನ್ ಸಿಟಿಯಲ್ಲಿ 40,86,580 ಮಹಿಳೆಯರಿದ್ದು, ಅದರಲ್ಲಿ ನಿತ್ಯ 10,21,645 ಮಂದಿ ಮಹಿಳೆಯರು ಬಿಎಂಟಿಸಿ ಬಸ್‌ಗಳಲ್ಲಿ ಸಂಚರಿಸುತ್ತಾರೆ ಎಂದು ಅಂದಾಜಿಸಲಾಗಿದೆ. ಮಹಿಳಾ ದಿನವಾದ ಮಾರ್ಚ್ 8 ರಂದು ಉಚಿತ ಬಸ್ ಪ್ರಯಾಣಕ್ಕೆ ಅನುವು ಮಾಡಿಕೊಟ್ಟರೆ ಅಂದಾಜು 20.44 ಲಕ್ಷ ಮಹಿಳೆಯರು ಪ್ರಯಾಣಿಸುವ ಸಾಧ್ಯತೆ ಇದೆ. ಇದರಿಂದ ಬಿಎಂಟಿಸಿಗೆ ಸುಮಾರು 8.17 ಕೋಟಿ ಖರ್ಚಾಗುವ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗಿದೆ.

ನಾರಿಯರಿಂದ ಬೃಹತ್​ ವಾಕಥಾನ್​: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಯಲಹಂಕದ ನವಚೇತನ ಆಸ್ಪತ್ರೆ ವತಿಯಿಂದ ಭಾನುವಾರ ಬೃಹತ್ ವಾಕಥಾನ್ ಆಯೋಜನೆ ಮಾಡಲಾಗಿತ್ತು. ಬೃಹತ್ ವಾಕಥಾನ್​ಗೆ ನಟಿ ಅನು ಪ್ರಭಾಕರ್ ಹಾಗೂ ಶಾಸಕ ಎಸ್ ಆರ್ ವಿಶ್ವನಾಥ್ ಚಾಲನೆ ನೀಡಿದ್ದರು. ನವಚೇತನ ಆಸ್ಪತ್ರೆಯಿಂದ ಯಲಹಂಕ ನಗರದಲ್ಲಿ 3 ಕಿಲೋ ಮೀಟರ್ ವರೆಗೂ ನಡೆದು ಮಹಿಳೆಯರು ಜನ ಜಾಗೃತಿ ಮೂಡಿಸಿದರು. ಎಲ್ಲೆಡೆ ಸಮಾನತೆ ತರುವ ದೃಷ್ಟಿಯಿಂದ ಈ ಬೃಹತ್ ವಾಕಥಾನ್ ಆಯೋಜನೆ ಮಾಡಲಾಗಿದೆ ಎಂದು ನವಚೇತನ ಮ್ಯಾನೇಜಿಂಗ್ ಡೈರೆಕ್ಟರ್ ತಿಳಿಸಿದರು.

ಇದನ್ನೂ ಓದಿ: ಸಂಚಾರಿ ಪೊಲೀಸರ ರಿಯಾಯಿತಿ ಆಫರ್; ದಂಡದ ಹೊರೆ ಇಳಿಸಿಕೊಂಡ ಬಿಎಂಟಿಸಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.