ETV Bharat / state

ಕನಸು ನಿಮ್ಮದೇ.. ತಾಕತ್ತು ಪ್ರದರ್ಶನ ಮೋದಿ ಅವರದ್ದು: ಮಹಿಳಾ ಮೀಸಲು ಕ್ರೆಡಿಟ್ ವಾರ್ ನಡೆಸುತ್ತಿರುವ ಕಾಂಗ್ರೆಸ್​​ಗೆ ಭಾರತಿ ಶೆಟ್ಟಿ ತಿರುಗೇಟು - ಸ್ಥಳೀಯ ಸಂಸ್ಥೆಗಳಲ್ಲಿ ಶೇ 50ಕ್ಕೆ ಮಹಿಳಾ ಮೀಸಲು

ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿ ಮುಂಭಾಗದಲ್ಲಿ ಮಹಿಳಾ ಮೋರ್ಚಾವೂ ಮಹಿಳಾ ಮೀಸಲಾತಿ ಬಿಲ್ ಮಂಡನೆ ಬೆಂಬಲಿಸಿ ಸಂಭ್ರಮಾಚರಣೆ ನಡೆಸಿತು. ಮಹಿಳಾ ಕಾರ್ಯಕರ್ತರು ಮೋದಿ ಪರ ಜಯಘೋಷ ಮೊಳಗಿಸಿ ವಿಜಯೋತ್ಸವ ಆಚರಿಸಿದರು.

BJP Mahila Morcha celebration
ಮಹಿಳಾ ಮೀಸಲಾತಿ ಬಿಲ್ ಮಂಡನೆ ಬೆಂಬಲಿಸಿ ಮಹಿಳಾ ಮೋರ್ಚಾ ಸಂಭ್ರಮಾಚರಣೆ
author img

By ETV Bharat Karnataka Team

Published : Sep 20, 2023, 6:54 PM IST

ಬೆಂಗಳೂರು: ಮಹಿಳಾ ಮೀಸಲಾತಿ ನಮ್ಮ ಕನಸು, ರಾಜೀವ್ ಗಾಂಧಿ ತಂದಿದ್ದು ಎನ್ನುವುದನ್ನು ನಿಲ್ಲಿಸಿ, ನಿಮ್ಮ ಪ್ರಯತ್ನ ಒಪ್ಪುತ್ತೇನೆ. ಆದರೆ ತಾಕತ್ತು ಪ್ರದರ್ಶನ ಮಾಡಿ ಇದನ್ನು ಜಾರಿ ಮಾಡಿದ ಶ್ರೇಯಸ್ಸು ಪ್ರಧಾನಮಂತ್ರಿ ಮೋದಿಗೆ ಸಲ್ಲಲಿದೆ. ನೀವು ಈವರೆಗೆ ತಂದಿರುವ ಎಲ್ಲ ಯೋಜನೆ ಶಾಶ್ವತವಲ್ಲ. ಆದರೆ ಮಹಿಳಾ ಮೀಸಲಾತಿ ದೇಶ ಇರುವವರೆಗೂ ಪ್ರಜಾಪ್ರಭುತ್ವ ಇರುವವರೆಗೂ ಶಾಶ್ವತವಾಗಿರಲಿದೆ ಎಂದು ಕ್ರೆಡಿಟ್ ವಾರ್​​ನಲ್ಲಿ ತೊಡಗಿರುವ ಕಾಂಗ್ರೆಸ್​​ಗೆ ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ತಿರುಗೇಟು ನೀಡಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಮುಂಭಾಗದಲ್ಲಿ ಮಹಿಳಾ ಮೋರ್ಚಾವೂ ಮಹಿಳಾ ಮೀಸಲಾತಿ ಬಿಲ್ ಮಂಡನೆ ಬೆಂಬಲಿಸಿ ಸಂಭ್ರಮಾಚರಣೆ ನಡೆಸಿತು. ಮಹಿಳಾ ಕಾರ್ಯಕರ್ತರು ಮೋದಿ ಪರ ಜಯಘೋಷ ಮೊಳಗಿಸಿ ವಿಜಯೋತ್ಸವ ಆಚರಿಸಿದರು. ಈ ವೇಳೆ ಸಹಿ ಹಂಚಿ ಸಂಭ್ರಮಿಸಿದರು.

ಈ ವೇಳೆ ಮಾತನಾಡಿದ ಭಾರತಿ ಶೆಟ್ಟಿ, ದೇಶದಲ್ಲಿ ಶೇ.33 ರಷ್ಟು ಮಹಿಳಾ ಮೀಸಲಾತಿ ಬರಬೇಕು. ತ್ರಿವಳಿ ತಲಾಕ್ ರದ್ದಾಗಬೇಕು. ಸಮಾನ ನಾಗರಿಕ ಸಂಹಿತೆ ಬರಬೇಕು ಎಂದು ಎರಡು ಸಮಿತಿಗಳು ವರದಿ ನೀಡಿದ್ದವು. 1996ರಲ್ಲಿ ಪ್ರಧಾನಿ ಆಗಿದ್ದ ಹೆಚ್​ ಡಿ ದೇವೇಗೌಡರು ಈ ಮಸೂದೆಯನ್ನು ಲೋಕಸಭೆಯಲ್ಲಿ ತರುತ್ತಾರೆ. ಆದರೆ ತದನಂತರ ಬಂದ ಎಲ್ಲಾ ರಾಜಕೀಯ ಪಕ್ಷಗಳು ಇವತ್ತಿನವರೆಗೂ ಜಾರಿಗೊಳಿಸಲಿಲ್ಲ. ಮೂರು ಬಾರಿ ಮಸೂದೆ ಮಂಡನೆಯಾಗುತ್ತದೆ. ಆದರೆ ಅನುಮೋದನೆಯಾಗಲಿಲ್ಲ. ಮಸೂದೆ ಬಿದ್ದು ಹೋಗುತ್ತದೆ, ಇಲ್ಲವೇ ಸೆಲೆಕ್ಟ್ ಕಮಿಟಿಗೆ ಹೋಗಲಿದೆ. ಈ ರೀತಿ ಕಳ್ಳಾಟವನ್ನು ಎಲ್ಲರೂ ಮಾಡುವುದನ್ನು ನಾವು ನೋಡಿದ್ದೇವೆ ಎಂದರು.

ಮಹಿಳೆಯರ ಕನಸು ನನಸು ಮಾಡಿದ ಮೋದಿ: ವಾಜಪೇಯಿ ಪ್ರಧಾನಿಯಾದ ಸಂದರ್ಭದಲ್ಲಿ ಇದು ಜಾರಿಯಾಗಲಿದೆ ಎನ್ನುವ ಕಲ್ಪನೆ ಎಲ್ಲರಲ್ಲಿಯೂ ಇತ್ತು. ಅಂದು ಸೋನಿಯಾ ಗಾಂಧಿ ಮನಸ್ಸು ಮಾಡಿದ್ದರೆ ಆ ಮಸೂದೆ ಅಂದೇ ಜಾರಿಯಾಗುತ್ತಿತ್ತು. ಆದರೆ ಇಂದು ಎಲ್ಲಾ ಪರಿಹಾರವಾಗಿದೆ. ನರೇಂದ್ರ ಮೋದಿಯವರು ಎಲ್ಲ ಮಹಿಳೆಯರ ಕನಸನ್ನು ನನಸು ಮಾಡಿದ್ದಾರೆ, ಕನಸು ಕಾಣಲು ದುಡ್ಡು ಕೊಡಬೇಕಿಲ್ಲ ಕನಸು ಕಾಣಲು ಶ್ರಮ ಪಡಬೇಕಿಲ್ಲ. ಆದರೆ ಕನಸನ್ನು ನನಸು ಮಾಡುವ ಕೆಲಸ ಮಾಡಬೇಕು ಕನಸನ್ನು ನನಸು ಮಾಡುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ. ಹಾಗಾಗಿ ಇಂದು ಮಹಿಳೆಯರಿಗೆ ಶೇಕಡ 33 ರಷ್ಟು ಮೀಸಲಾತಿ ಸಿಗುವ ವ್ಯವಸ್ಥೆ ಆಗಿದೆ ಎಂದು ಹೇಳಿದರು.

ಸ್ಥಳೀಯ ಸಂಸ್ಥೆಗಳಲ್ಲಿ ಶೇ 50ಕ್ಕೆ ಮಹಿಳಾ ಮೀಸಲಾತಿ ತಂದವರು ಬಿಎಸ್​ವೈ: ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ಅವರನ್ನು ಕೂಡ ನಾನು ನೆನಪು ಮಾಡಿಕೊಳ್ಳುತ್ತೇನೆ. ಸ್ಥಳೀಯ ಸಂಸ್ಥೆಗಳಲ್ಲಿ ಶೇ.33ರಷ್ಟು ಮೀಸಲಾತಿಯನ್ನು ತಂದವರು ಅವರು. ಅದೇ ರೀತಿ ಸ್ಥಳೀಯ ಸಂಸ್ಥೆಯಲ್ಲಿ ಶೇಕಡ 33 ರಷ್ಟು ಇದ್ದ ಮಹಿಳಾ ಮೀಸಲಾತಿಯನ್ನು ಶೇಕಡ 50ಕ್ಕೆ ತಂದವರು ಯಡಿಯೂರಪ್ಪನವರು. ಹಾಗಾಗಿ ಅವರನ್ನು ನಾನು ಸ್ಮರಿಸುತ್ತೇನೆ ಎಂದರು.

ಕಾಂಗ್ರೆಸ್​ನವರು ಮಹಿಳಾ ಮೀಸಲಾತಿ ಕ್ರೆಡಿಟ್​​ಗೆ ಮುಂದಾಗಿದ್ದಾರೆ. ಹಾಗಾಗಿ ರಾಜೀವ್ ಗಾಂಧಿ ಅವರ ಕನಸಿನ ಬಗ್ಗೆ ಒಂದು ಪ್ರಶ್ನೆ ಮಾಡುತ್ತೇನೆ. ನೀವು ಶೇ. 33 ರಷ್ಟು ಮೀಸಲಾತಿಯನ್ನು ಸ್ಥಳೀಯ ಸಂಸ್ಥೆಗಳಲ್ಲಿ ತಂದಾಗಲೇ ಈ ಮಸೂದೆಯನ್ನು ತರಬಹುದಾಗಿತ್ತು. ಆಗ ನಿಮ್ಮ ಬಳಿ 400 ಸಂಸದರಿದ್ದರು. ಆದರೆ ನೀವು ತರಲಿಲ್ಲ ಎಂದು ಕಾಂಗ್ರೆಸ್ ಗೆ ತಿರುಗೇಟು ನೀಡಿದರು.

ಶಕ್ತಿ ಯೋಜನೆ ಸೇರಿದಂತೆ ಈವರೆಗೂ ನೀವು ಕೊಟ್ಟಿರುವ ಎಲ್ಲ ಯೋಜನೆಗಳು ಶಾಶ್ವತ ಅಲ್ಲ. ಆದರೆ ಗೌರಿ ಗಣೇಶ ಹಬ್ಬದ ದಿನ ಶಾಶ್ವತವಾದ ಉಡುಗೊರೆಯನ್ನು ಮೋದಿ ಕೊಟ್ಟಿದ್ದಾರೆ. ಇದು ದೇಶ ಎಲ್ಲಿಯವರೆಗೂ ಇರಲಿದೆಯೋ, ದೇಶದಲ್ಲಿ ಪ್ರಜಾಪ್ರಭುತ್ವ ಎಲ್ಲಿಯವರೆಗೂ ಇರಲಿದೆಯೋ, ಕಾನೂನು ವ್ಯವಸ್ಥೆ ಎಲ್ಲಿಯವರೆಗೂ ಇರಲಿದೆಯೋ ಅಲ್ಲಿಯವರೆಗೂ ಶೇ.33 ರಷ್ಟು ಮಹಿಳಾ ಮೀಸಲಾತಿ ಇರುತ್ತದೆ. ಇದು ಶಾಶ್ವತ ವ್ಯವಸ್ಥೆ ವಿಧಾನಸಭೆ ಮತ್ತು ಲೋಕಸಭೆಯಲ್ಲಿ 33ರಷ್ಟು ಇರುವ ಪಾಲನ್ನು ಈ ಮಸೂದೆ ಹೊಂದಿರಲಿದೆ. ಹಾಗಾಗಿ ಈ ಮಸೂದೆಯನ್ನು ವಾಪಸ್ ಪಡೆಯಲು ಸಾಧ್ಯವಿಲ್ಲ. ಇದು ನಿರಂತರವಾಗಿ ಶಾಶ್ವತವಾಗಿ ಇರುವ ವ್ಯವಸ್ಥೆಯಾಗಲಿದೆ ಎಂದರು.

ಮಹಿಳೆಯರು ಸಮರ್ಥರು: ಗ್ರಾಮೀಣ ಭಾಗದಲ್ಲಿ ಮೀಸಲಾತಿಯಡಿ ಆಯ್ಕೆಯಾದ ಮಹಿಳೆಯರ ಪರ ಅವರ ಪತಿಯರು ಅಧಿಕಾರ ಚಲಾಯಿಸುತ್ತಾರೆ ಎನ್ನುವ ಮಾತಿದೆ. ಆದರೆ ಒಬ್ಬ ಮಹಿಳೆ ಮನೆಯನ್ನು, ಸಂಸಾರವನ್ನು ನಡೆಸುವ ತಾಕತ್ತು ಹೊಂದಿದ್ದಾಳೆಯೋ ಆ ಮಹಿಳೆಯರಿಗೆ ಈ ಸಮಾಜವನ್ನು ನಡೆಸುವ ತಾಕತ್ತು ಇದೆ. ಮಹಿಳೆಯರ ಆಡಳಿತದಲ್ಲಿ ಪುರುಷರು ಹಸ್ತಕ್ಷೇಪ ಮಾಡಿರಬಹುದು. ಆದರೆ ಪತಿಯರ ಪರವಾಗಿ ಕೆಲಸವನ್ನು ಅನೇಕ ಮಹಿಳೆಯರು ಮಾಡುತ್ತಿದ್ದಾರೆ ಎಂದು ಮಹಿಳಾ ಸಾಮರ್ಥ್ಯವನ್ನು ಸಮರ್ಥಿಸಿಕೊಂಡರು.

ಸ್ಥಳೀಯ ಸಂಸ್ಥೆಯ ಬಹಳ ಚಿಕ್ಕದು ಸಾವಿರ ಲೆಕ್ಕದ ಮತದಾರರು ಇರುತ್ತಾರೆ. ಆದರೆ ಈಗಿನ ಕಾರ್ಯಕ್ಷೇತ್ರ ಬಹಳ ವಿಶಾಲವಾಗಿದೆ. ಇದು ಎರಡುವರೆ ಲಕ್ಷ ಮತದಾರರ ಮಧ್ಯದಲ್ಲಿ ಒಬ್ಬ ಸಮರ್ಥ ಮಹಿಳೆ ಸಿಗಲು ಕಷ್ಟ ಆಗುವುದಿಲ್ಲ. ವ್ಯವಸ್ಥೆ ಬಹಳ ಚೆನ್ನಾಗಿ ನಡೆಯಲಿದೆ ಎಂದರು.

ಲಾಲು ಪ್ರಸಾದ್ ಯಾದವ್ ಅವರಿಗೆ ಮನವಿ ಮಾಡುತ್ತೇನೆ. ಈ ಬಿಲ್ಲನ್ನು ಹರಿದು ಹಾಕುವುದು ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡುವುದನ್ನ ನಿಲ್ಲಿಸಿದರೆ ಎಲ್ಲರಿಗೂ ಒಳ್ಳೆಯದಾಗಲಿದೆ. ನೀವು ಏನು ಬೇಕಾದರೂ ಮಾತನಾಡಿಕೊಳ್ಳಿ ಹಾರಾಟ ಮಾಡಿಕೊಳ್ಳಿ ದಂಡಿಗೆ ಎದುರಲಿಲ್ಲ, ದಾಳಿಗೆ ಎದುರಲಿಲ್ಲ, ಭಯೋತ್ಪಾದಕರಿಗೆ ಹೆದರಲಿಲ್ಲ. ಇನ್ನು ನಿಮಗೆ ಯಾಕೆ ನರೇಂದ್ರ ಮೋದಿ ಹೆದರುತ್ತಾರೆ. ಖಂಡಿತ ಈ ಬಿಲ್ಲನ್ನೂ ಮಂಡನೆ ಮಾಡಿದ್ದಾರೆ. ಇದು ಅಸ್ತಿತ್ವಕ್ಕೆ ಬರಲಿದೆ ಎನ್ನುವ ಆಶಯ ನಮಗಿದೆ ಎಂದರು.

ಇದನ್ನೂಓದಿ:ಮಹಿಳಾ ಮೀಸಲಾತಿಗೆ ಕಾಂಗ್ರೆಸ್​ ಬೆಂಬಲ, ತಡಮಾಡದೇ ಜಾರಿ ಮಾಡಿ: ಕೇಂದ್ರ ಸರ್ಕಾರಕ್ಕೆ ಸೋನಿಯಾ ಗಾಂಧಿ ಕಿವಿಮಾತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.