ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕು ಹೆಚ್ಚಳಗೊಂಡ ಹಿನ್ನೆಲೆ ಇಂದು ಕೆ ಸಿ ಜನರಲ್ ಆಸ್ಪತ್ರೆಗೆ ಡಿಸಿಎಂ ಅಶ್ವತ್ಥ್ ನಾರಾಯಣ್ ಹಾಗೂ ಸಂಸದ ಪಿ ಸಿ ಮೋಹನ್ ಭೇಟಿ ನೀಡಿ ಪರಿಶೀಲಿಸಿದರು. ಇತ್ತ ಪರಿಶೀಲನೆ ನಡೆಸಿ ಹೊರಗೆ ಬರುವ ವೇಳೆಗೆ ಮಹಿಳೆವೋರ್ವಳು ಡಿಸಿಎಂಗೆ ತರಾಟೆಗೆ ತೆಗೆದುಕೊಂಡರು.
108 ಆ್ಯಂಬುಲೆನ್ಸ್ ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಹಿಳೆ, ಸಮಯಕ್ಕೆ ಸರಿಯಾದ ಬಾರದ ಕಾರಣಕ್ಕೆ ವಾಹನದಲ್ಲೇ ತಮ್ಮ ಕುಟುಂಬದ ಸದಸ್ಯರೊಬ್ಬರು ಸಾವನ್ನಪ್ಪಿದ್ದಾರೆ. ಇದರಿಂದ ನೊಂದ ಮಹಿಳೆ ಶವ ತೋರಿಸಿ ಆಕ್ರೋಶ ಹೊರಹಾಕಿದರು. ನಿಮ್ಮ ಮನೆಯಲ್ಲೂ ಇದೇ ರೀತಿ ಆದ್ರೆ ಹೇಗಿರುತ್ತೆ ಅಂತ ಪ್ರಶ್ನಿಸಿದರು. ವಾಹನಗಳು ಬರಲು ರಸ್ತೆಯೂ ಸರಿ ಇಲ್ಲ ಅಂತ ದೂರು ನೀಡಿದರು.
ಇದೇ ವೇಳೆ ಆ್ಯಂಬುಲೆನ್ಸ್ ಕೊರತೆ ವಿಚಾರವಾಗಿ ಮಾತನಾಡಿದ ಡಿಸಿಎಂ ಅವರು, ಸಮಸ್ಯೆ ಇದ್ದಾಗ ಲಾಭ ಪಡೆಯೋ ಜನರಿದ್ದಾರೆ. ಖಾಸಗಿ ಆ್ಯಂಬುಲೆನ್ಸ್ ನವರು ಹಣ ಪೀಕುತ್ತಿದ್ದಾರೆ. 108 ಸಮಸ್ಯೆ ಕೂಡ ಇದೆ. ಅದನ್ನೂ ಸರಿಪಡಿಸೋ ಕೆಲಸ ಆಗಲಿದೆ ಅಂದರು. ಕೆ ಸಿ ಜನರಲ್ ಆಸ್ಪತ್ರೆಯಲ್ಲಿ 450 ಬೆಡ್ಗಳು ಇವೆ. ಇನ್ನೂ ಉತ್ತಮವಾಗಿ ಮಾಡಲು, ಅವಶ್ಯಕತೆ ಇರೋರಿಗೆ ಬೆಡ್ ನೀಡಲು ನಿರ್ಧಾರ ಮಾಡಲಾಗಿದೆ. ಯಾರಿಗೆ ಅವಶ್ಯಕತೆ ಇಲ್ಲವೋ ಅವರಿಗೆ ಆಸ್ಪತ್ರೆ ಬೇಡ. ಬದಲಿಗೆ ಮನೆಯಲ್ಲೇ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಲಾಗಿದೆ ಎಂದರು.
ಈ ಆಸ್ಪತ್ರೆಯಲ್ಲಿ ವೈದ್ಯರ ಸಂಖ್ಯೆ ಹೆಚ್ಚಿದ್ದು, ಆಸ್ಪತ್ರೆಯಲ್ಲಿ ಹಾಗೂ ಹೋಮ್ ಐಸೋಲೇಷನ್ ಇರೋರಿಗೆ ಕೂಡ ವೈದ್ಯರ ಅವಶ್ಯಕತೆ ಇದೆ. ಹೀಗಾಗಿ ಓಪಿಡಿ ತೆರೆಯಲು ಹೊಸ ವ್ಯವಸ್ಥೆ ಮಾಡಲಾಗ್ತಿದೆ. ಇನ್ಫೆಕ್ಷನ್ ಡಿಸೀಸ್ ಆಗಿ, ಸೂಕ್ತ ಚಿಕಿತ್ಸೆ ನೀಡಿ ಪ್ರಾಣ ಉಳಿಸಬೇಕಿದೆ. ಏನೇ ಸಹಕಾರ ಬೇಕಿದ್ರು ವ್ಯವಸ್ಥೆ ಕಲ್ಪಿಸಲಾಗಿದೆ. ಡಿಸಿಎಂ, ಲೋಕಸಭಾ ಸದಸ್ಯರಾಗಿ ನಾವು ಬಂದಿಲ್ಲ. ವೈದ್ಯರ ಸ್ನೇಹಿತರಾಗಿ ಬಂದಿದ್ದೇವೆ. ನಾನೂರು ಜನರಿಗೆ ಬದಲಾಗಿ, ಎರಡು ಸಾವಿರ ಜನರಿಗೆ ಸಹಾಯವಾಗಬೇಕಿದೆ ಅವರು ಹೇಳಿದ್ರು.
ಡೇ ಲಾಕ್ ಡೌನ್ ಶುರುವಾಗುತ್ತಾ?
ಇತ್ತ ದೆಹಲಿಯಲ್ಲಿ ಲಾಕ್ಡೌನ್ ಮುಂದುವರಿಕೆಯಾಗಿದ್ದು, ರಾಜ್ಯದಲ್ಲಿ ನಾಳೆಯಿಂದ ಡೇ ಕರ್ಫ್ಯೂ ಜಾರಿಯಾಗುತ್ತಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಈ ಬಗ್ಗೆ ನಾಳಿನ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಜನತಾ ಕರ್ಫ್ಯೂ ಬಗ್ಗೆ ಕೂಡ ಚಿಂತನೆ ಮಾಡಲಾಗುವುದು. ಕ್ಯಾಬಿನೆಟ್‌ನಲ್ಲಿ ಚರ್ಚೆ ನಡೆದ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುವುದು. ಜನರಿಗೆ ಹೊರ ಬಾರದಂತೆ ಮನವಿ ಮಾಡುತ್ತೇವೆ. ಜನತಾ ಕರ್ಫ್ಯೂ ಉತ್ತಮವಾದ ಸಲಹೆ ಅಂದರು. ರೆಮ್ಡಿಸಿವಿರ್ ಕೊರತೆ ಇನ್ನು ಮುಂದೆ ಬರೋದಿಲ್ಲ. ಯಾರಿಗೆಲ್ಲ ಬೇಕೋ ಅವರಿಗೆಲ್ಲ, ಶೀಘ್ರವೇ ಲಭ್ಯವಾಗಲಿದೆ. ಖಾಸಗಿ ಆಸ್ಪತ್ರೆಗಳು ಆನ್ಲೈನ್ ಮೂಲಕ ಬುಕ್ ಮಾಡಬೇಕಿದೆ ಎಂದರು.
ಬಳಿಕ ಸಂಸದ ಪಿ. ಸಿ ಮೋಹನ್ ಮಾತನಾಡಿ, ಕೆ ಸಿ ಜನರಲ್ ಆಸ್ಪತ್ರೆಗೆ ಡಿಸಿಎಂ ಜೊತೆ ಬಂದು ಇನ್ಸ್‌ಪೆಕ್ಷನ್ ಮಾಡಲಾಗಿದೆ. ವೈದ್ಯರ ಜೊತೆ ಮಾತನಾಡಲಾಗಿದ್ದು, ಕೇಂದ್ರ ಸರ್ಕಾರ 1.20ಲಕ್ಷ ರೆಮ್ಡಿಸಿವಿರ್ ಚುಚ್ಚುಪೂರೈಕೆ ಮಾಡ್ತಿದೆ. ಕೋವಿಡ್ ಬಂದ ತಕ್ಷಣ ರೆಮ್ಡಿಸಿವಿರ್ ತೆಗೆದುಕೊಳ್ಳಬೇಕು ಅಂತ ತಲೆಗೆ ತುಂಬಿದ್ದಾರೆ. ಮುಂಬರುವ ದಿನಗಳಲ್ಲಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ತಿಳಿಸಿದರು.
ಓದಿ: 'ಟೀಕಾ ಉತ್ಸವ್ ಬಾಯಿ ಬಡಾಯಿ ಬಿಟ್ಟಾಕಿ, ಮೊದಲು ಎಲ್ಲರಿಗೂ ಉಚಿತ ಲಸಿಕೆ ನೀಡಿ'