ETV Bharat / state

6 ಗ್ರಾಂ ಚಿನ್ನಕ್ಕಾಗಿ ನಡೆದಿತ್ತು ಕೊಲೆ... ಮಕ್ಕಳಿಗೆ ಕನ್ನಡದ 'ದೃಶ್ಯಂ' ಸಿನಿಮಾ ಕಥೆ ಹೇಳಿಕೊಟ್ಟಿದ್ದ ಕೊಲೆಗಡುಕರು

ಬೆಂಗಳೂರಿನಲ್ಲಿ ಒಂಟಿ ಮಹಿಳೆ ಕತ್ತು ಕೊಯ್ದು ಕೊಲೆ ಮಾಡಿರುವ ಪ್ರಕರಣ ಭೇದಿಸುವಲ್ಲಿ ಪಶ್ಚಿಮ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.

women murder in jnanabharathi
women murder in jnanabharathi
author img

By

Published : Jul 13, 2021, 2:18 AM IST

ಬೆಂಗಳೂರು: ಜ್ಞಾನಭಾರತಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಒಂಟಿ ಮಹಿಳೆ ಕೊಲೆಗೈದು ಪರಾರಿಯಾಗಿದ್ದ ಆರೋಪದ ಮೇಲೆ ಮಹಿಳೆ ಸೇರಿದಂತೆ ಇಬ್ಬರ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಆರೋಪಿಗಳು ಮಕ್ಕಳಿಗೆ ಕನ್ನಡದ ‘ದೃಶ್ಯಂ’ ಸಿನಿಮಾ ರೀತಿಯ ಕಥೆ ಹೇಳಿಕೊಟ್ಟಿದ್ದರು ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಜ್ಞಾನಜ್ಯೋತಿ ನಗರದ ರಾಜಶೇಖರ್(41) ಮತ್ತು ಆಕೆಯ ಸ್ನೇಹಿತೆ ಇಂದಿರಾ(37) ಬಂಧಿತರು. ಕೇವಲ 6 ಗ್ರಾಂ ಚಿನ್ನಕ್ಕಾಗಿ ಅವರಿಬ್ಬರು ಸೇರಿ ರಂಜಿತಾ ಎಂಬ ಮಹಿಳೆಯನ್ನ ಕೊಲೆ ಮಾಡಿದ್ದರು. ಬಂಧಿತರಿಂದ ಈಗಾಗಲೇ ಅಡಮಾನವಿಟ್ಟಿದ್ದ ಚಿನ್ನವನ್ನ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಜುಲೈ 10ರಂದು ಸಂಜೆ ಆರು ಗಂಟೆ ಸುಮಾರಿಗೆ ಓಂಕಾರ್ ಎಂಬವರ ಪತ್ನಿ ರಂಜಿತಾ(26) ಎಂಬಾಕೆಯ ಕತ್ತು ಕೊಯ್ದು ಕೊಲೆಗೈದು, ಮೃತಳ ಕೈಯಲ್ಲಿ ಚಾಕು ಇಟ್ಟು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಗಳಿಬ್ಬರು ಸಿನಿಮಾ, ಧಾರವಾಹಿಗಳ ಶೂಟಿಂಗ್‌ನಲ್ಲಿ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದರು. ಈ ಪೈಕಿ ಇಂದಿರಾ ಪತಿಯಿಂದ, ರಾಜಶೇಖರ್ ಕೂಡ ಪತ್ನಿಯಿಂದ ದೂರವಾಗಿದ್ದನು. ಹೀಗಾಗಿ ಇಬ್ಬರ ನಡುವೆ ಅಕ್ರಮ ಸಂಬಂಧವಿತ್ತು.

ಮೃತ ರಂಜಿತಾ ವಾಸವಿದ್ದ ಕಟ್ಟಡದ ಮೊದಲನೇ ಮಹಡಿಯ ಬಾಡಿಗೆ ಮನೆಯಲ್ಲಿ ರಾಜಶೇಖರ್ ಮತ್ತು ಇಂದಿರಾ ಹಾಗೂ ಆಕೆಯ ಇಬ್ಬರು ಮಕ್ಕಳು ವಾಸವಿದ್ದರು. ಕಳೆದ ನಾಲ್ಕು ತಿಂಗಳಿಂದ ಆರೋಪಿಗಳು ಬಾಡಿಗೆ ಕೊಟ್ಟಿರಲಿಲ್ಲ. ಜೊತೆಗೆ ರಾಜಶೇಖರ್​​ ಎರಡು ಲಕ್ಷ ರೂ. ಸಾಲ ಮಾಡಿಕೊಂಡಿದ್ದನು.

ಇದನ್ನೂ ಓದಿರಿ: ಮಗಳು ಮೃತಪಟ್ಟ ಒಂದೇ ಗಂಟೆಯಲ್ಲಿ ತಂದೆ ಸಾವು... ಮುಗಿಲು ಮುಟ್ಟಿದ ಆಕ್ರಂದನ

ಈ ಮಧ್ಯೆ ಕಾರ್ಯಕ್ರಮವೊಂದಕ್ಕೆ ಹೋಗಲು ರಂಜಿತಾ ನಕ್ಲೆಸ್​, ಚಿನ್ನದ ಸರ ಹಾಕಿಕೊಂಡು ಹೋಗಿದ್ದಳು, ಸೆಲ್ಫಿ ಫೋಟೋವೊಂದನ್ನು ಕ್ಲಿಕ್ಕಿಸಿಕೊಂಡಿದ್ದಳು. ಆ ಫೋಟೋ ನೋಡಿದ್ದ ಇಂದಿರಾ, ನಕ್ಲೆಸ್​ ಬಗ್ಗೆ ೆ ವಿಚಾರಿಸಿ, ಅದನ್ನು ಕೊಟ್ಟರೆ, ಅದೇ ಮಾದರಿಯಲ್ಲಿ ಹೊಸ ನಕ್ಲೆಸ್ ಮಾಡಿಸಿಕೊಳ್ಳುತ್ತೇನೆಂದು ಕೇಳಿದ್ದಳು. ಆದರೆ,ರಂಜಿತಾ ಕೊಡಲು ನಿರಾಕರಿಸಿದ್ದಳು. ಇದರಿಂದ ಅಕ್ರೋಶಗೊಂಡಿದ್ದ ಆರೋಪಿಗಳು ರಂಜಿತಾ ಕೊಲೆಗೆ ಸಂಚು ರೂಪಿಸಿದ್ದರು.

ಕಿವಿ, ಕತ್ತು ಕೊಯ್ದು ಕೊಲೆ: ಜುಲೈ 10ರ ಶನಿವಾರ ಬೆಳಗ್ಗೆ ರಂಜಿತಾ ಮನೆಗೆ ಇಂದಿರಾ ಬಂದಿದ್ದಾಳೆ. ಈ ವೇಳೆ ರಂಜಿತಾ ಸ್ನಾನಕ್ಕೆ ಹೋಗುತ್ತಿದ್ದಂತೆ ರಾಜಶೇಖರ್​ನನ್ನು ಸ್ಥಳಕ್ಕೆ ಕರೆಯಿಸಿಕೊಂಡಿದ್ದಾಳೆ. ಸ್ನಾನ ಕೊಣೆಯಿಂದ ರಂಜಿತಾ ಹೊರಗಡೆ ಬರುತ್ತಿದ್ದಂತೆ ಇಂದಿರಾ ಕೇಬಲ್‌ನಿಂದ ಆಕೆಯ ಕುತ್ತಿಗೆ ಬಿಗಿದಿದ್ದಾಳೆ. ರಾಜಶೇಖರ್​ ಕುತ್ತಿಗೆ ಕೊಯ್ದು ಕೊಲೆಗೈದಿದ್ದಾನೆ. ಇದಾದ ಬಳಿಕ ನಕ್ಲೆಸ್‌ಗಾಗಿ ಎಲ್ಲೆಡೆ ಹುಡುಕಾಡಿದ್ದಾರೆ. ಸಿಗದಿದ್ದಾಗ, ಎರಡು ಕಿವಿ ಕೊಯ್ದು ಓಲೆ,ಹಾಗೂ ತಾಳಿ ಸರದಲ್ಲಿದ್ದ ಆರು ಗ್ರಾಂ ಚಿನ್ನ ತೆಗೆದುಕೊಂಡು ಪರಾರಿಯಾಗಿದ್ದಾರೆ. ಆದರೆ, ಓಲೆಗಳು ನಕಲಿ ಎಂಬುದು ಗೊತ್ತಾಗುತ್ತಿದ್ದಂತೆ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಡಮಾನ ಇಟ್ಟು ಸಿಕ್ಕಿಬಿದ್ದರು: ಕೊಲೆಯಾದ ಸ್ಥಳ ಪರಿಶೀಲನೆ ನಡೆಸಿದಾಗ ಚಿನ್ನಾಭರಣ ಕಳ್ಳತನವಾಗಿರುವ ಮಾಹಿತಿ ಸಿಕ್ಕಿಲ್ಲ. ಆದರೆ, ಮೃತದೇಹ ತೆಗೆದುಕೊಂಡು ಹೋಗುತ್ತಿದ್ದಾಗ ಮಾಂಗಲ್ಯದಲ್ಲಿನ ಗುಂಡು ಕಳ್ಳತನವಾಗಿರುವ ಬಗ್ಗೆ ಮಾಹಿತಿ ನೀಡಿದ್ದರು. ಅನಂತರ ಸಮೀಪದ ಚಿನ್ನಾಭರಣ ಮಳಿಗೆಯಲ್ಲಿ ವಿಚಾರಣೆ ನಡೆಸಿದಾಗ ಆರೋಪಿಗಳು ಗುಂಡು ಅಡಮಾನ ಇಟ್ಟಿರುವ ಮಾಹಿತಿ ಸಿಕ್ಕಿತ್ತು.ಜೊತೆಗೆ ಸಿಸಿ ಕ್ಯಾಮರಾ/ಸಿಡಿಆರ್ ಮಾಹಿತಿ ಸಂಗ್ರಹಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಮಕ್ಕಳಿಗೆ ದೃಶ್ಯಂ ಪಾಠ: ಮತ್ತೊಂದೆಡೆ ಆರೋಪಿಗಳ ವಿಚಾರಣೆ ನಡೆಸಿದಾಗ ಗೊಂದಲದ ಹೇಳಿಕೆ ನೀಡಿದರು. ವಿಚಾರಣೆ ಸಂದರ್ಭದಲ್ಲಿ ಇಂದಿರಾಳ ಇಬ್ಬರು ಮಕ್ಕಳು, ಘಟನೆ ದಿನ ಅಮ್ಮ ಶೂಟಿಂಗ್ ಕೆಲಸಕ್ಕೆ ಹೋಗಿದ್ದಳು. ನಾವು ಕೂಡ ಮನೆಯಲ್ಲಿ ಇರಿಲಿಲ್ಲ. ರಾತ್ರಿ ಎಲ್ಲರೂ ಒಟ್ಟಿಗೆ ಬಂದಿದ್ದೇವೆ ಎಂದು ತಾಯಿ ಇಂದಿರಾ ಹೇಳಿಕೊಟ್ಟಿದ್ದ ಕಥೆಯನ್ನು ಇಂಚಿಂಚೂ ಬಾಯಿಬಿಟ್ಟಿದ್ದರು. ಅಷ್ಟರಲ್ಲಿ ಪೊಲೀಸರು ಆರೋಪಿಗಳ ವಿರುದ್ಧ ಸಂಪೂರ್ಣ ಸಾಕ್ಷ್ಯ ಸಂಗ್ರಹಿಸಿದ್ದರು. ಇದನ್ನು ಕಂಡ ಆರೋಪಿಗಳು ತಬ್ಬಿಬ್ಬಾಗಿದ್ದಾರೆ.

ನಕ್ಲೆಸ್ ರಂಜಿತಾಳದಲ್ಲ: ಅಸಲಿಗೆ ಫೋಟೋದಲ್ಲಿದ್ದ 40 ಗ್ರಾಂ ತೂಕದ ನಕ್ಲೆಸ್ ಮೃತ ರಂಜಿತಾಳದಲ್ಲ. ಕಾರ್ಯಕ್ರಮಕ್ಕೆ ಹೋಗುವ ಸಲುವಾಗಿ ಪರಿಚಯಸ್ಥರ ಬಳಿ ಪಡೆದು ಫೋಟೋ ತೆಗೆಸಿಕೊಂಡಿದ್ದಳು.ಆ ಫೋಟೋ ನೋಡಿ ಇಂದಿರಾ ನಕ್ಲೆಸ್ ಕೇಳಿದ್ದಳು. ಆದರೆ, ನಕ್ಲೆಸ್‌ ಅಸಲಿ ಕಥೆಯನ್ನು ರಂಜಿತಾ ಮರೆ ಮಾಚಿದ್ದಳು. ಹತ್ಯೆ ಬಳಿಕ ಚಿನ್ನದ ನಕ್ಲೆಸ್ ಸಿಗಲಿಲ್ಲ. ಆಕೆಯ ಕೊರಳಿನಲ್ಲಿದ್ದ ಆರು ಗ್ರಾಂ ತಾಳಿ ಗುಂಡುಗಳು ಮಾತ್ರ ಸಿಕ್ಕಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.