ETV Bharat / state

'ವರ್ಕ್​​​ ಫ್ರಂ ಹೋಂ': ಪತಿ ಜೊತೆ ಕಿರಿಕ್, ಕೋವಿಡ್​ ನಾಟಕವಾಡಿ ಪ್ರಿಯಕರನ ಜೊತೆ​ ಮಹಿಳೆ ಎಸ್ಕೇಪ್​!

author img

By

Published : Oct 12, 2020, 2:06 PM IST

ಪತಿಯೊಂದಿಗೆ ಗಲಾಟೆ ಮಾಡಿದ್ದ ಮಹಿಳೆವೋರ್ವಳು ತನ್ನ ಪ್ರಿಯಕರನೊಂದಿಗೆ ಸಿನಿಮಿಯ ಶೈಲಿಯಲ್ಲಿ ಪರಾರಿಯಾಗಿದ್ಧಾಳೆ. ಪ್ರಿಯಕರನೊಂದಿಗೆ ಸೇರಿ ಕೋವಿಡ್ ನಾಟಕವಾಡಿದ ಚಾಲಾಕಿ ಆ್ಯಂಬುಲೆನ್ಸ್​ನಲ್ಲಿ ಪರಾರಿ ಆಗಿದ್ದಾಳೆ. ಈಕೆ ಮತ್ತು ಪ್ರಿಯಕರನ ಕೊರೊನಾ ನಾಟಕ ಸಿಸಿಟಿಯಲ್ಲಿ ಸೆರೆಯಾಗಿದೆ.

women-escape-in-an-ambulance-with-his-lover-in-bangalore
ವರ್ಕ್​​​ ಫ್ರಂ ಹೋಂ ಕಿರಿಕ್​​​​: ಕೋವಿಡ್​ ನಾಟಕವಾಡಿ ಪ್ರಿಯಕರನೊಂದಿಗೆ ಆ್ಯಂಬುಲೆನ್ಸ್​ನಲ್ಲಿ ಪತ್ನಿ ಎಸ್ಕೇಪ್

ಬೆಂಗಳೂರು: ಕೋವಿಡ್ ನೆಪದಲ್ಲಿ ಆ್ಯಂಬುಲೆನ್ಸ್​ನಲ್ಲಿಯೇ ಪ್ರಿಯಕರನ ಜತೆ ಮಹಿಳೆ ಸಿನಿಮಿಯ ರೀತಿ ಪರಾರಿ ಆಗಿರುವ ಘಟನೆ ನಗರದ ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

ಉತ್ತರ ಭಾರತ ಮೂಲದ ದಂಪತಿ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್​​​ಗಳಾಗಿದ್ದು, ವರ್ಕ್​ ಫ್ರಂ ಹೋಂನಿಂದಾಗಿ ಪತಿ-ಪತ್ನಿ ಇಬ್ಬರು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದರು. ಹೀಗಾಗಿ ಮನೆಯಲ್ಲಿ ಸಣ್ಣ-ಪುಟ್ಟ ವಿಷಯಗಳಿಗೂ ಗಲಾಟೆ ನಡೆಯುತ್ತಿತ್ತು. ಇದರಿಂದ ನೊಂದಿದ್ದ ಮಹಿಳೆ ತನ್ನ ಗೆಳೆಯನೊಂದಿಗೆ ಪರಾರಿಯಾಗಿದ್ದಾಳೆ.

ಪ್ರಿಯಕರ ತಂದಿದ್ದ ಆ್ಯಂಬುಲೆನ್ಸ್​ನಲ್ಲಿ ಮಹಿಳೆ ಪರಾರಿ

ಸಿನಿಮಿಯ ಶೈಲಿಯಲ್ಲಿ ಎಸ್ಕೇಪ್:

ಪತಿಯೊಂದಿಗಿನ ಗಲಾಟೆಯಿಂದ ಬೇಸತ್ತಿದ್ದ ಪತ್ನಿ ರುಚಿಕುಮಾರಿ ಗೆಳೆಯನೊಂದಿಗೆ ಪರಾರಿಯಾಗಲು ಖತರ್ನಾಕ್​ ಸ್ಕೆಚ್​ ಹಾಕಿದ್ದಳು. ಇದಕ್ಕಾಗಿ ಕೊರೊನಾ ನಾಟಕವಾಡಲು ಪ್ಲಾನ್ ಸಹ ಮಾಡಿದ್ದಳು. ಕೊರೊನಾ ಟೆಸ್ಟ್ ಮಾಡಿಸಲು ಗೆಳೆಯ ಮಹಮ್ಮದ್​​​​ಗೆ ಕರೆ ಮಾಡಿದ್ದಳು. ಆತ ಬಿಬಿಎಂಪಿ ಸಿಬ್ಬಂದಿ ಎಂದು ಪಿಪಿಇ ಕಿಟ್ ಧರಿಸಿ ಬಂದು ಟೆಸ್ಟ್ ಮನೆಗೆ ಬಂದಿದ್ದ.

ಇದಾಗಿ ಮೂರು ದಿನದ ಬಳಿಕ ರುಚಿಕು ಮಾರಿಗೆ ಪಾಸಿಟಿವ್ ಎಂದು ತಿಳಿಸಿ ಆಸ್ಪತ್ರೆಗೆ ದಾಖಲಾಗುವಂತೆ ತಿಳಿಸಿದ್ದಾನೆ. ಅಲ್ಲದೆ ಆಕೆಯ ಪತಿಗೆ ಹೋಂ ಕ್ವಾರಂಟೈನ್ ಆಗುವಂತೆ ಸೂಚಿಸಿದ್ದಾನೆ. ಬಳಿಕ ತಾನೇ ತಂದಿದ್ದ ಆ್ಯಂಬುಲೆನ್ಸ್​ನಲ್ಲಿ ರುಚಿಕುಮಾರಿಯನ್ನು ಕೂರಿಸಿಕೊಂಡು ಆಸ್ಪತ್ರೆಗೆ ಕರೆದೊಯ್ಯುವುದಾಗಿ ತಿಳಿಸಿ ಅಲ್ಲಿಂದ ತೆರಳಿದ್ದಾನೆ.

ಮೂರು ದಿನ ಕಳೆದರೂ ಪತ್ನಿ ಫೋನ್ ಮಾಡದೆ ಇದ್ದಾಗ ಪತಿಯೇ ಕರೆ ಮಾಡಿದಾಗ ಹೆಂಡತಿಯ ಫೋನ್ ಸ್ವಿಚ್​ ಆಫ್​​ ಆಗಿತ್ತು. ಬಳಿಕ ಅನುಮಾನಗೊಂಡು ಆಸ್ಪತ್ರೆಯಲ್ಲಿ ವಿಚಾರಿಸಿದಾಗ ಯಾರು ಆ ರೀತಿಯ ರೋಗಿ ಬಂದಿಲ್ಲವೆಂದು ಹೇಳಿದ್ದಾರೆ.

ಕೂಡಲೇ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪತಿ ದೂರು ನೀಡಿದ್ದಾರೆ. ಕೂಡಲೇ ಕಿಡ್ನಾಪ್ ಕೇಸ್ ದಾಖಲಿಸಿಕೊಂಡ ಪೊಲೀಸರು ರುಚಿ ಕುಮಾರಿ ಮೊಬೈಲ್ ಮತ್ತು ಮೊಹಮ್ಮದ್ ಮೊಬೈಲ್ ಟ್ರ್ಯಾಪ್​​​ ಮಾಡಿದಾಗ ಅವರಿಬ್ಬರು ದೆಹಲಿಯಲ್ಲಿರುವ ವಿಚಾರ ತಿಳಿದುಬಂದಿದೆ.

ದೆಹಲಿಯಿಂದ ಪೊಲೀಸರಿಗೆ ಕರೆ ಮಾಡಿದ ರುಚಿಕುಮಾರಿ ನಾನು ಕಿಡ್ನಾಪ್ ಆಗಿಲ್ಲ, ಸ್ವಯಿಚ್ಛೆಯಿಂದ ಬಂದ್ದಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾಳೆ. ಘಟನೆ ಸಂಬಂಧ ಕೋವಿಡ್-19 ನಿಯಮ ದುರ್ಬಳಕೆ, ವಂಚನೆ ಕೇಸ್ ಅಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.