ETV Bharat / state

ಡ್ರಮ್ ನಲ್ಲೇ ಮತ್ತೊಂದು ಶವ ಪತ್ತೆ ಪ್ರಕರಣ.. ಆರೋಪಿಗಳ ಸುಳಿವು ಸಿಕ್ಕಿದೆ ಎಂದ ರೈಲ್ವೆ ಎಸ್ಪಿ

ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ಅಪರಿಚಿತ ಯುವತಿ ಶವ ಪತ್ತೆ ಪ್ರಕರಣ - ಕಳೆದ ಮೂರು ತಿಂಗಳಲ್ಲಿ ಮೂರು ಮಹಿಳೆಯರ ಶವ ಪತ್ತೆ - ತನಿಖೆ ಚುರುಕುಗೊಳಿಸಿದ ಪೊಲೀಸರು

author img

By

Published : Mar 14, 2023, 7:06 PM IST

women-dead-body-found-in-bengaluru-three-murders-in-three-months
ಡ್ರಮ್ ನಲ್ಲಿ ಮಹಿಳೆ ಶವ ಪತ್ತೆ ಪ್ರಕರಣ: ಆರೋಪಿಗಳ ಸುಳಿವು ಸಿಕ್ಕಿದೆ ಎಂದ ರೈಲ್ವೇ ಎಸ್ಪಿ
ಡ್ರಮ್ ನಲ್ಲಿ ಮಹಿಳೆ ಶವ ಪತ್ತೆ ಪ್ರಕರಣ: ಆರೋಪಿಗಳ ಸುಳಿವು ಸಿಕ್ಕಿದೆ ಎಂದ ರೈಲ್ವೆ ಎಸ್ಪಿ

ಬೆಂಗಳೂರು : ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ಅಪರಿಚಿತ ಯುವತಿ ಶವ ಪತ್ತೆ ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ರೈಲ್ವೆ ಪೊಲೀಸರು ಆರೋಪಿಗಳ ಪತ್ತೆಗಾಗಿ ಮೂರು ತಂಡವನ್ನು ರಚಿಸಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಕಂಟೋನ್ಮೆಂಟ್ ರೈಲ್ವೆ ಠಾಣೆಯ ಇನ್ಸ್​​​​​ಪೆಕ್ಟರ್​​ ಪ್ರಭಾಕರ್ ಅವರನ್ನು ಪ್ರಕರಣದ ತನಿಖಾಧಿಕಾರಿಯನ್ನಾಗಿ ನೇಮಿಸಿದ್ದಾರೆ. ಪ್ರಕರಣದ ತನಿಖೆ ನಡೆಸಲು ಮೈಸೂರು ಹಾಗೂ ದಾವಣಗೆರೆ ರೈಲ್ವೆ ಇನ್ಸ್​ಪೆಕ್ಟರ್​​ ಒಳಗೊಂಡ ಮೂರು ವಿಶೇಷ ತಂಡವನ್ನು ರಚಿಸಲಾಗಿದೆ. ಹಂತಕರ ಸುಳಿವು ದೊರಕಿದ್ದು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ರೈಲ್ವೆ ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ‌.

ಹಂತಕರ ಪತ್ತೆಗೆ ಮೂರು ವಿಶೇಷ ತಂಡ ರಚನೆ : ಅಪರಿಚಿತ ಮಹಿಳೆ ಶವ ಪತ್ತೆ ಸಂಬಂಧ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡಿರುವ ಪೊಲೀಸರು ಬೈಯ್ಯಪ್ಪನಹಳ್ಳಿ, ಮೈಸೂರು ಹಾಗೂ ದಾವಣಗೆರೆ ರೈಲ್ವೆ ಇನ್ಸ್​ಪೆಕ್ಟರ್​​ ಒಳಗೊಂಡ ತಂಡ ರಚಿಸಲಾಗಿದ್ದು ಆರೋಪಿಗಳ ಶೋಧಕಾರ್ಯದಲ್ಲಿ ಕಾರ್ಯಮಗ್ನರಾಗಿದ್ದಾರೆ‌‌. ಮೂವರಿಂದ ನಾಲ್ಕು ಮಂದಿ ಆರೋಪಿಗಳು ಆಟೋದಲ್ಲಿ ಬಂದು ರೈಲು ನಿಲ್ದಾಣದ ಪ್ರವೇಶದ್ವಾರದಲ್ಲಿ ಡ್ರಮ್ ನಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಶವವಿಟ್ಟು ಪರಾರಿಯಾಗಿದ್ದಾರೆ. ಆರೋಪಿಗಳ ಚಲನಾವಲನಾ ಸಿಸಿಟಿವಿಯಲ್ಲಿ ಸೆರೆಯಾಗಿದೆ‌.‌ ಆರೋಪಿಗಳೆಲ್ಲರೂ ಸ್ಥಳೀಯರು ಎಂದು ತಿಳಿದುಬಂದಿದೆ‌. ನಾಪತ್ತೆಯಾಗಿರುವ ಆರೋಪಿಗಳ ಇರುವಿಕೆ ಬಗ್ಗೆ ಸುಳಿವು ದೊರೆತಿದ್ದು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ರೈಲ್ವೇ ಎಸ್ಪಿ ಎಸ್.ಕೆ.ಸೌಮ್ಯಲತಾ ಈಟಿವಿ ಭಾರತ್ ಗೆ ತಿಳಿಸಿದ್ದಾರೆ.

ಮೂರು ತಿಂಗಳಲ್ಲಿ ಮೂರನೇ ಪ್ರಕರಣ : ಎರಡು ತಿಂಗಳ ಹಿಂದೆಯಷ್ಟೇ ಅಂದರೆ ಜನವರಿ 4ರಂದು ಯಶವಂತಪುರ ರೈಲು ನಿಲ್ದಾಣದಲ್ಲಿ‌ ನೀಲಿ ಬಣ್ಣದ ಡ್ರಮ್ ನಲ್ಲಿ ಮಹಿಳೆ ಶವ ಪತ್ತೆಯಾಗಿತ್ತು. ವಿಶಾಖಪಟ್ಟಣದಿಂದ ನಗರಕ್ಕೆ ಬಂದಿದ್ದ ಹಂತಕರು ಡ್ರಮ್ ನಲ್ಲಿ ಶವ ಬಚ್ಚಿಟ್ಟುಕೊಂಡು ರೈಲ್ವೇ ನಿಲ್ದಾಣದಲ್ಲಿ‌ ಇಟ್ಟುಹೋಗಿದ್ದರು‌. ಕಳೆದ ಡಿಸೆಂಬರ್ 8ರಂದು ​ಬಂಗಾರಪೇಟೆ -ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ನ ಕಾಯ್ದಿರಿಸದ ರೈಲ್ವೆ ಕೋಚ್‌ನಲ್ಲಿ ಇದೇ ರೀತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು.

ಈ ಪ್ರಕರಣಗಳ ತನಿಖೆ ಪ್ರಗತಿಯಲ್ಲಿ‌ ಇರುವಾಗಲೇ ಬೈಯ್ಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ಸುಮಾರು 30 ವರ್ಷದ ಮಹಿಳೆ ಶವ ನಿನ್ನೆ ಸಂಜೆ ಪತ್ತೆಯಾಗಿತ್ತು. ಘಟನೆ ಸಂಬಂಧ ನಿನ್ನೆ ಸಂಜೆ ಸ್ಥಳಕ್ಕೆ ದೌಡಾಯಿಸಿ ರೈಲ್ವೇ ಪೊಲೀಸರು ಪರಿಶೀಲಿಸಿದ್ದರು‌‌‌. ಶ್ವಾನದಳ, ಬೆರಳಚ್ಚು ತಂಡ ಹಾಗೂ ಎಫ್ಎಸ್ ಎಲ್ ತಂಡಗಳು ಬಂದು ತಪಾಸಣೆ ನಡೆಸಿದ್ದವು.

ಒಂದೇ ಮಾದರಿಯಲ್ಲಿ ಮಹಿಳೆಯರ ಶವ ಪತ್ತೆಯಾಗಿರುವುದು ಸರಣಿ ಕೊಲೆಗಳ(serial killing) ಭೀತಿಯನ್ನು ಹುಟ್ಟುಹಾಕಿದೆ. ಕಳೆದ ಮೂರು ತಿಂಗಳಲ್ಲಿ ಒಟ್ಟು ಮೂರು ಪ್ರಕರಣಗಳು ಪತ್ತೆಯಾಗಿದ್ದು, ಈ ಎರಡು ಪ್ರಕರಣಗಳಲ್ಲಿ ಮಹಿಳೆಯರನ್ನು ಹತ್ಯೆ ಮಾಡಿದ ಬಳಿಕ ಒಂದು ಡ್ರಮ್​ನಲ್ಲಿ ತುಂಬಿ ರೈಲ್ವೇ ನಿಲ್ದಾಣದಲ್ಲಿ ಎಸೆದಿರುವುದನ್ನು ಕಾಣಬಹುದು. ಈ ಎಲ್ಲಾ ಪ್ರಕರಣಗಳಲ್ಲಿ ಮಹಿಳೆಯರನ್ನು ಹತ್ಯೆ ಮಾಡಿದ ಬಳಿಕ ಒಂದು ನೀಲಿ ಡ್ರಮ್​ನಲ್ಲಿ ಯಾವುದೇ ಅನುಮಾನ ಬಾರದ ರೀತಿಯಲ್ಲಿ ತುಂಬಿಸಿ, ಬಳಿಕ ಸಾರ್ವಜನಿಕ ಸ್ಥಳವಾದ ರೈಲ್ವೆ ನಿಲ್ದಾಣದಲ್ಲಿ ಎಸೆದು ಆರೋಪಿಗಳು ಪರಾರಿಯಾಗಿದ್ದಾರೆ. ಪತ್ತೆಯಾದ ಮಹಿಳೆಯರ ಶವಗಳು ಬಹುತೇಕ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಇದನ್ನೂ ಓದಿ : ಬೈಯ್ಯಪ್ಪನಹಳ್ಳಿ ರೈಲ್ವೇ ನಿಲ್ದಾಣದ ಪ್ಲಾಸ್ಟಿಕ್‌ ಡ್ರಮ್​ನಲ್ಲಿ ಮಹಿಳೆಯ ಶವ ಪತ್ತೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.