ETV Bharat / state

ಬೆಂಗಳೂರಲ್ಲಿ ಮಹಿಳಾ ಏಷಿಯನ್ ಚಾಂಪಿಯನ್​ಶಿಪ್: ಇತಿಹಾಸ ಸೃಷ್ಟಿಸಿದ ಆಸ್ಟ್ರೇಲಿಯಾ

author img

By

Published : Sep 11, 2022, 10:38 PM IST

Updated : Sep 12, 2022, 6:40 AM IST

ಮಹಿಳೆಯರ ಏಷಿಯನ್ ಚಾಂಪಿಯನ್​​ಶಿಪ್​​ ಬಾಸ್ಕೆಟ್ ಬಾಲ್ ಟೂರ್ನಿ ಗೆದ್ದು ಆಸ್ಟ್ರೇಲಿಯಾ ದಾಖಲೆ ಬರೆಯಿತು, ಕಳೆದ 5 ಬಾರಿಯ ಚಾಂಪಿಯನ್​​ ಚೀನಾ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.

ಬೆಂಗಳೂರಲ್ಲಿ ಮಹಿಳಾ ಏಷಿಯನ್ ಚಾಂಪಿಯನ್ ಶಿಪ್
ಬೆಂಗಳೂರಲ್ಲಿ ಮಹಿಳಾ ಏಷಿಯನ್ ಚಾಂಪಿಯನ್ ಶಿಪ್

ಬೆಂಗಳೂರು: ಪದಾರ್ಪಣೆ ಮಾಡಿದ ತನ್ನ ಮೊದಲ ಏಷಿಯನ್ ಚಾಂಪಿಯನ್​ಶಿಪ್​​ನಲ್ಲಿ ಆಸ್ಟ್ರೇಲಿಯಾ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಹೊಸ ಇತಿಹಾಸ ಬರೆಯಿತು. ಭಾನುವಾರ ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಫಿಬಾ ಅಂಡರ್ 18 ಮಹಿಳಾ ಏಷ್ಯನ್ ಚಾಂಪಿಯನ್​ಶಿಪ್ ಬಾಸ್ಕೆಟ್ ಬಾಲ್​ ಫೈನಲ್ ಪಂದ್ಯ ನಡೆಯಿತು. 81-55 ಅಂತರದಲ್ಲಿ ಹಾಲಿ ಚಾಂಪಿಯನ್​​ ಚೀನಾ ತಂಡವನ್ನು ಆಸ್ಟ್ರೇಲಿಯಾ ತಂಡ ಮಣಿಸಿದೆ. ಜಪಾನ್ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟು ಕಂಚಿನ ಪದಕ ಸ್ವೀಕರಿಸಿತು. 4 ನೇಯ ಸ್ಥಾನವನ್ನು ಚೈನೀಸ್ ತೈಪೈ ಪಡೆದಿದೆ.

ಬೆಂಗಳೂರಲ್ಲಿ ಮಹಿಳಾ ಏಷಿಯನ್ ಚಾಂಪಿಯನ್ ಶಿಪ್
ಬೆಂಗಳೂರಲ್ಲಿ ಮಹಿಳಾ ಏಷಿಯನ್ ಚಾಂಪಿಯನ್ ಶಿಪ್

ಇತಿಹಾಸ ಸೃಷ್ಟಿಸಿದ ಆಸ್ಟ್ರೇಲಿಯಾ: ಫೈನಲ್ ಪಂದ್ಯದ ಮೊದಲ ಕ್ವಾರ್ಟರ್​​ನಲ್ಲೇ ಆಸ್ಟ್ರೇಲಿಯಾ ಪ್ರಭುತ್ವ ಸಾಧಿಸಿತು. ಮುಖ್ಯವಾಗಿ ಇಸ್ಲಾ ಜುಫರ್ ಮ್ಯಾನ್ಸ್ 8 ಪಾಯಿಂಟ್ ಮುನ್ನಡೆ ಗಳಿಸಿ ಕೊಟ್ಟರು. ಆದರೆ ದ್ವಿತೀಯಾರ್ಧದಲ್ಲಿ ಪುಟಿದೆದ್ದ ಚೀನಾ ಆಟಗಾರ್ತಿ ವ್ಯಾಂಗ್ ಝಿಂಗ್ 5 ಪಾಯಿಂಟ್ಸ್ ಗಳಿಸುವ ಮೂಲಕ ಅಂತರವನ್ನು 21-26 ಗೆ ತಂದರು. ಮುಂದೆ ದ್ವಿತೀಯಾರ್ಧವನ್ನು 44-30 ರಿಂದ ಆರಂಭಿಸಿದ ಆಸ್ಟ್ರೇಲಿಯಾ ಆಟಗಾರ್ತಿಯರು ಹಿಂದಿರುಗಿ ನೋಡಲಿಲ್ಲ. ಪ್ಯೂಚ್, ಜುಫರ್ ಮ್ಯಾನ್ಸ್ ಜೋಡಿ ಮಿಂಚಿನ ಆಟವಾಡಿ ಪಂದ್ಯ ಗೆಲ್ಲಿಸಿ ಕೊಟ್ಟರು.

ಬೆಂಗಳೂರಲ್ಲಿ ಮಹಿಳಾ ಏಷಿಯನ್ ಚಾಂಪಿಯನ್ ಶಿಪ್
ಬೆಂಗಳೂರಲ್ಲಿ ಮಹಿಳಾ ಏಷಿಯನ್ ಚಾಂಪಿಯನ್ ಶಿಪ್

ಜುಫರ್ ಮ್ಯಾನ್ಸ್- ಮೋಸ್ಟ್ ವ್ಯಾಲ್ಯೂಯೇಬಲ್ ಪ್ಲೇಯರ್: ಇಸ್ಲಾ ಜುಫರ್ ಮ್ಯಾನ್ಸ್ ಮೋಸ್ಟ್ ವ್ಯಾಲ್ಯೂಯೇಬಲ್ ಪ್ಲೇಯರ್ ಎನಿಸಿದರು. ಈ ಕ್ರೀಡಾಕೂಟದಲ್ಲಿ ವಿಜೇತರಾದ ಮೊದಲ 4 ತಂಡಗಳು 2023ರ ಜುಲೈನಲ್ಲಿ ಸ್ಪೇನ್‌ನಲ್ಲಿ ನಡೆಯಲಿರುವ ಅಂಡರ್- 19 ಮಹಿಳೆಯರ ಫಿಬಾ ವಿಶ್ವಕಪ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದವು.

ಬೆಂಗಳೂರಲ್ಲಿ ಮಹಿಳಾ ಏಷಿಯನ್ ಚಾಂಪಿಯನ್ ಶಿಪ್
ಬೆಂಗಳೂರಲ್ಲಿ ಮಹಿಳಾ ಏಷಿಯನ್ ಚಾಂಪಿಯನ್ ಶಿಪ್

ಗಣ್ಯರ ಉಪಸ್ಥಿತಿ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಡಾ.ಅಶ್ವಥ್ ನಾರಾಯಣ್, ಕ್ರೀಡಾ ಸಚಿವ ಡಾ.ನಾರಾಯಣಗೌಡ, ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಪಂದ್ಯವನ್ನು ವೀಕ್ಷಿಸಿ ವಿಜೇತರಿಗೆ ಅಭಿನಂದಿಸಿದರು.

ಬೆಂಗಳೂರಲ್ಲಿ ಮಹಿಳಾ ಏಷಿಯನ್ ಚಾಂಪಿಯನ್ ಶಿಪ್
ಬೆಂಗಳೂರಲ್ಲಿ ಮಹಿಳಾ ಏಷಿಯನ್ ಚಾಂಪಿಯನ್ ಶಿಪ್

ಭಾಗವಹಿಸಿದ್ದ 16 ತಂಡಗಳು: ಕಂಠೀರವ ಒಳಾಂಗಣ ಕ್ರೀಡಾಂಗಣ ಹಾಗೂ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 5 ರಿಂದ ಸೆಪ್ಟೆಂಬರ್ 11ರವರೆಗೆ ಬ್ಯಾಸ್ಕೆಟ್ ಬಾಲ್ ಚಾಂಪಿಯನ್ ಶಿಪ್ ನಡೆಯಿತು. ಭಾರತ, ಜಪಾನ್, ಚೀನಾ, ಇಂಡೋನೇಷ್ಯಾ, ಮಲೇಷ್ಯಾ ಸೇರಿದಂತೆ ಒಟ್ಟು 16 ತಂಡಗಳು ಭಾಗವಹಿಸಿದ್ದವು. ಈ ಕ್ರೀಡಾಕೂಟದಲ್ಲಿ 16 ಅಂತಾರಾಷ್ಟ್ರೀಯ ತಂಡಗಳ 192 ಕ್ರೀಡಾಪಟುಗಳು, 96 ಅಧಿಕಾರಿಗಳು, 100 ಸ್ವಯಂಸೇವಕರು ಭಾಗವಹಿಸಿದ್ದರು.

ಬೆಂಗಳೂರಲ್ಲಿ ಮಹಿಳಾ ಏಷಿಯನ್ ಚಾಂಪಿಯನ್ ಶಿಪ್
ಬೆಂಗಳೂರಲ್ಲಿ ಮಹಿಳಾ ಏಷಿಯನ್ ಚಾಂಪಿಯನ್ ಶಿಪ್

ಭಾರತಕ್ಕೆ ಟೂರ್ನಿಯಲ್ಲಿ ಕೊನೆಯ ಸ್ಥಾನ: ಚಾಂಪಿಯನ್‌ ಶಿಪ್‌ನಲ್ಲಿ ಭಾರತ ತಂಡವನ್ನು ತಮಿಳುನಾಡಿನ ಸತ್ಯಾ ಕೃಷ್ಣಮೂರ್ತಿ ಮುನ್ನಡೆಸಿದರು. ತಂಡದಲ್ಲಿ ಕರ್ನಾಟಕದ ನಿಹಾರಿಕಾ ರೆಡ್ಡಿ ಮತ್ತು ಮೇಖಲಾ ಗೌಡ ಇದ್ದರು. ಭಾರತ ತನ್ನ ಎಲ್ಲಾ ಪಂದ್ಯವನ್ನು ಸೋತು ಟೂರ್ನಿಯಲ್ಲಿ ಕೊನೆಯ ಸ್ಥಾನ ಪಡೆಯಿತು.

ಬೆಂಗಳೂರಲ್ಲಿ ಮಹಿಳಾ ಏಷಿಯನ್ ಚಾಂಪಿಯನ್ ಶಿಪ್
ಬೆಂಗಳೂರಲ್ಲಿ ಮಹಿಳಾ ಏಷಿಯನ್ ಚಾಂಪಿಯನ್ ಶಿಪ್

(ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ಎ ತಂಡಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಡ್ರಾನಲ್ಲಿ ಸಮಾಪ್ತಿ)

Last Updated : Sep 12, 2022, 6:40 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.