ETV Bharat / state

ಆಂಧ್ರದ ಮಹಿಳೆಗೆ ಕರುನಾಡ ಮಹಿಳೆಯ ಹೃದಯ ಕಸಿ: ಶಸ್ತ್ರಚಿಕಿತ್ಸೆಗೆ ರಾಮಯ್ಯ ಆಸ್ಪತ್ರೆ ವೈದ್ಯರ ಸಿದ್ಧತೆ - ನಗರ ಎಂ.ಎಸ್ ರಾಮಯ್ಯ ಆಸ್ಪತ್ರೆ

ಮೆದುಳು ನಿಷ್ಕ್ರಿಯಗೊಂಡಿದ್ದ 36 ವರ್ಷದ ಮಹಿಳೆಯ ಹೃದಯವನ್ನು ಆಂಧ್ರಪ್ರದೇಶದ 38 ವರ್ಷದ ಮಹಿಳೆಗೆ ಕಸಿ ಮಾಡಲಾಗಿಗುತ್ತಿದೆ. ನಗರ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಹಾರ್ಟ್ ಸರ್ಜನ್ ಡಾ.ನಾಗಮಲ್ಲೇಶ್ ನೇತೃತ್ವದಲ್ಲಿ ಹೃದಯ ಕಸಿ ನಡೆಯಲಿದ್ದು, ಸಂಪೂರ್ಣ ಚಿಕಿತ್ಸಾ ವೆಚ್ಚ ಆಂಧ್ರ ಸರ್ಕಾರವೇ ಭರಿಸುತ್ತಿದೆ.

http://10.10.50.85:6060//finalout4/karnataka-nle/thumbnail/11-July-2021/12424600_818_12424600_1625998212543.png
ಶಸ್ತ್ರಚಿಕಿತ್ಸೆಗೆ ಸಿದ್ಧಗೊಂಡ ರಾಮಯ್ಯ ಆಸ್ಪತ್ರೆ ವೈದ್ಯರು
author img

By

Published : Jul 11, 2021, 4:13 PM IST

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಅಂಗಾಂಗ ಕಸಿ ಪ್ರಕ್ರಿಯೆ ನಡೆಯುವುದು ಸಾಮಾನ್ಯವಾಗಿದೆ. ಆದರೆ ಹೃದಯ, ಶ್ವಾಸಕೋಶ ವೈಫಲ್ಯದಿಂದ ಬಳಲುತ್ತಿರುವವರಿಗೆ ಅಂಗಾಂಗ ಅವಶ್ಯಯವಿದ್ದು ಲಕ್ಷಾಂತರ ಮಂದಿ ಈ ಚಿಕಿತ್ಸೆಯ ನೆರವಿಗಾಗಿ ಕಾಯುತ್ತಿದ್ದಾರೆ. ಈ ನಡುವೆಯು ಹಲವು ಕುಟುಂಬಗಳು ತಮ್ಮವರನ್ನೇ ಕಳೆದುಕೊಂಡ ನೋವಿನಲ್ಲೂ ಅಂಗಾಂಗ ದಾನ ಮಾಡುವ ನಿಸ್ವಾರ್ಥ ಸೇವೆ ಮಾಡುತ್ತಿವೆ.

ಆಂಧ್ರ ಮೂಲದ ಮಹಿಳೆಗೆ ಕರುನಾಡ ಮಹಿಳೆಯ ಹೃದಯ ಕಸಿ

ಈಗ ಮೆದುಳು ನಿಷ್ಕ್ರಿಯಗೊಂಡಿದ್ದ 36 ವರ್ಷದ ಮಹಿಳೆಯ ಹೃದಯವನ್ನು ಆಂಧ್ರಪ್ರದೇಶದ 38 ವರ್ಷದ ಮಹಿಳೆಗೆ ಕಸಿ ಮಾಡಲಾಗುತ್ತಿದೆ. ನಗರ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಹಾರ್ಟ್ ಸರ್ಜನ್ ಡಾ. ನಾಗಮಲ್ಲೇಶ್ ನೇತೃತ್ವದಲ್ಲಿ ಹೃದಯ ಕಸಿ ನಡೆಯಲಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, 35ನೇ ಹೃದಯ ಕಸಿ ಮಾಡಲಾಗುತ್ತಿದ್ದು, 38 ವರ್ಷದ ಮಹಿಳೆಗೆ, ಮೆದುಳು ನಿಷ್ಕ್ರಿಯಗೊಂಡಿರುವ 36 ವರ್ಷ ಮಹಿಳೆಯ ಹಾರ್ಟ್ ಟ್ರಾನ್ಸ್​ಪ್ಲಾಂಟ್ ಮಾಡಲಾಗುತ್ತಿದೆ ಎಂದಿದ್ದಾರೆ.

3 ವರ್ಷದಿಂದ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದು, ಹೃದಯ ಕಸಿಗಾಗಿ ಕಾದಿದ್ದರು. ಅಪೋಲೋ ಆಸ್ಪತ್ರೆಯಲ್ಲಿ ಮೆದುಳು ನಿಷ್ಕ್ರಿಯಗೊಂಡ ಮಹಿಳೆಯ ಹೃದಯವನ್ನ ಇವರಿಗೆ ಜೋಡಣೆ ಮಾಡಲಾಗುತ್ತಿದೆ. ಇದರ ಚಿಕಿತ್ಸಾ ವೆಚ್ಚ ಆಂಧ್ರಪ್ರದೇಶದ ಸರ್ಕಾರವೇ ನೋಡಿಕೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಶಾಲೆ ಆರಂಭವಾಗದಿದ್ರೆ ಕೊರೊನಾ ರೋಗಕ್ಕಿಂತಲೂ ಹೆಚ್ಚಾಗುತ್ತೆ 'ಸಾಮಾಜಿಕ ರೋಗ' ಎಚ್ಚರ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.