ಬೆಂಗಳೂರು: ನಗರದಲ್ಲಿ ನಿತ್ಯ ಉಂಟಾಗುವ ಸಂಚಾರಿ ದಟ್ಟಣೆ, ವಿಐಪಿ ಕಾರ್ಯಕ್ರಮಗಳ ಭದ್ರತೆಯ ಜಂಜಾಟದ ನಡುವೆಯೂ ರಾಜಧಾನಿಯ ರಾಜಾಜಿನಗರ ಟ್ರಾಫಿಕ್ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಹುಲಿಗಮ್ಮ ಎಂಬುವವರಿಗೆ ಠಾಣಾಧಿಕಾರಿ ಸೇರಿದಂತೆ ಸಿಬ್ಬಂದಿಗಳು ಸೋಮವಾರ ಠಾಣೆಯಲ್ಲಿ ಸೀಮಂತ ಕಾರ್ಯ ಮಾಡಿದ್ದಾರೆ (baby shower function in Police station).
-
ಈ ದಿನ ನಮ್ಮ ಠಾಣಾ ವತಿಯಿಂದ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ರವರಿಗೆ ಸೀಮಂತ ಕಾರ್ಯಕ್ರಮ ಮಾಡಲಾಯಿತು. pic.twitter.com/OOKv1CV9e6
— RAJAJINAGAR TRAFFIC BTP (@rajajinagartrps) November 15, 2021 " class="align-text-top noRightClick twitterSection" data="
">ಈ ದಿನ ನಮ್ಮ ಠಾಣಾ ವತಿಯಿಂದ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ರವರಿಗೆ ಸೀಮಂತ ಕಾರ್ಯಕ್ರಮ ಮಾಡಲಾಯಿತು. pic.twitter.com/OOKv1CV9e6
— RAJAJINAGAR TRAFFIC BTP (@rajajinagartrps) November 15, 2021ಈ ದಿನ ನಮ್ಮ ಠಾಣಾ ವತಿಯಿಂದ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ರವರಿಗೆ ಸೀಮಂತ ಕಾರ್ಯಕ್ರಮ ಮಾಡಲಾಯಿತು. pic.twitter.com/OOKv1CV9e6
— RAJAJINAGAR TRAFFIC BTP (@rajajinagartrps) November 15, 2021
ಕೊಪ್ಪಳ ಮೂಲದ ಹುಲಿಗಮ್ಮ ನಾಲ್ಕು ವರ್ಷಗಳಿಂದ ರಾಜಾಜಿನಗರದ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ (Rajajinagar Traffic Police Station) ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಯಿ ಕಳೆದುಕೊಂಡಿರುವ ಹುಲಿಗಮ್ಮಗೆ ತಾಯಿ ಸ್ಥಾನದಲ್ಲಿ ನಿಂತು ಠಾಣಾಧಿಕಾರಿ ಶಿವರತ್ನಾ ಹಾಗೂ ಸಿಬ್ಬಂದಿ ಸೀಮಂತ ಕಾರ್ಯ ಪೂರೈಸಿ ಹಾರೈಸಿದ್ದಾರೆ
ಓದಿ: 12 ಎಕರೆ ವಿಸ್ತೀರ್ಣದ ಕೆರೆಗೆ ಮರುಜೀವ ಕೊಟ್ಟ ವಿದ್ಯಾರ್ಥಿನಿ : ಕೇವಲ 37 ದಿನದಲ್ಲಿ 'ರಚನಾ'ತ್ಮಕ ಕಾಯಕಲ್ಪ...
ಸದಾ ಸಾರ್ವಜನಿಕರ ನಡುವೆಯೇ ಕಾರ್ಯನಿರ್ವಹಿಸುವ ಸಂಚಾರ ಪೊಲೀಸರು, ಕುಟುಂಬ ಮತ್ತು ವೈಯಕ್ತಿಕ ಜೀವನಕ್ಕೆ ಸಮಯ ನೀಡುವುದು ಕಡಿಮೆ. ಹೀಗಾಗಿ, ಕರ್ತವ್ಯದ ಸಮಯದಲ್ಲೂ ಸಾರ್ವಜನಿಕರ ಕೆಲಸಕ್ಕೆ ಯಾವುದೇ ಲೋಪವಾಗದಂತೆ ಕಾರ್ಯನಿರ್ವಹಿಸಿ ಮಧ್ಯಾಹ್ನದ ಊಟದ ಸಮಯಲ್ಲಿ 10 ನಿಮಿಷಗಳಲ್ಲೆ ಸೀಮಂತ ಕಾರ್ಯ (baby shower function) ನಡೆಸಿರುವುದು ಎಲ್ಲೆಡೆ ಜನಮೆಚ್ಚುಗೆಗೆ ಪಾತ್ರವಾಗಿದೆ.