ETV Bharat / state

ಖಾಸಗಿ ಫೋಟೋ ಇಟ್ಕೊಂಡು ಬ್ಲ್ಯಾಕ್​ಮೇಲ್​: ಮಾಜಿ ಪ್ರಿಯಕರನ​​ ಮೊಬೈಲ್ ಕದಿಯಲು ಸುಪಾರಿ ಕೊಟ್ಟ ಯುವತಿ - ಬ್ಲ್ಯಾಕ್​ಮೇಲ್ ಮಾಡ್ತಿದ್ದ ಮಾಜಿ ಲವರ್​​ ಮೊಬೈಲ್​ ರಾಬರಿಗೆ ಸುಪಾರಿ ಕೊಟ್ಟ ಯುವತಿ

ಖಾಸಗಿ ಫೋಟೋವನ್ನು ಮೊಬೈಲ್​ನಲ್ಲಿ ಇಟ್ಟುಕೊಂಡು ಬ್ಲ್ಯಾಕ್​ಮೇಲ್​​ ಮಾಡುತ್ತಿದ್ದ ಮಾಜಿ ಪ್ರಿಯಕರನ ಮೊಬೈಲ್​ ಕದಿಯುವಂತೆ ಯುವತಿಯೊಬ್ಬಳು ತನ್ನ ಸ್ನೇಹಿತನಿಗೆ ಸುಪಾರಿ ಕೊಟ್ಟ ಪ್ರಕರಣ ಬೆಂಗಳೂರಲ್ಲಿ ನಡೆದಿದೆ.

woman supari to theft her ex lover mobile phone
ಮೊಬೈಲ್​ ರಾಬರಿ ಆರೋಪಿಗಳು
author img

By

Published : Nov 22, 2021, 8:11 PM IST

Updated : Nov 22, 2021, 8:57 PM IST

ಬೆಂಗಳೂರು: ಅವರಿಬ್ಬರು ಪರಸ್ಪರ ಪ್ರೀತಿಯಲ್ಲಿದ್ದರು. ಇಬ್ಬರೇ ಏಕಾಂತದಲ್ಲಿದ್ದಾಗ ಹಲವು ಖಾಸಗಿ ಫೋಟೋಗಳನ್ನು ಆತ ಕ್ಲಿಕ್ಕಿಸಿಕೊಂಡಿದ್ದ. ಅದೇನಾಯಿತು ಏನೋ? ಎರಡು ವರ್ಷದ ಪ್ರೀತಿಗೆ ಆಕೆ ತಿಲಾಂಜಲಿ ಇಟ್ಟಿದ್ದಳು. ಆದರೆ ಆ ಪ್ರಿಯಕರ ಅದೇ ಫೋಟೋಗಳನ್ನು ಇಟ್ಟುಕೊಂಡು ಮಾಜಿ ಪ್ರಿಯತಮೆಗೆ ಬ್ಲ್ಯಾಕ್​ಮೇಲ್​ ಮಾಡತೊಡಗಿದ್ದಾನೆ. ಇದರಿಂದ ಕೆರಳಿದ ಯುವತಿ ಸ್ನೇಹಿತನಿಗೆ ಬುದ್ಧಿ ಕಲಿಸೋಕೆ ಹೇಳಿದ್ದಳು. ನಂತರ ನಡೆದಿದ್ದು ರಾಬರಿ ಎಂಬ ಹೈಡ್ರಾಮ.

ಕೊಡುಗೆಹಳ್ಳಿಯ ಕಾಂತಿ ಸ್ವೀಟ್ಸ್ ಶಾಪ್​​ನಲ್ಲಿ ಕೆಲಸ ಮಾಡಿಕೊಂಡಿದ್ದ ಸಂತೋಷ್ ಎಂಬಾತ 2 ವರ್ಷದ ಹಿಂದೆ ಯುವತಿಯೊಬ್ಬಳನ್ನು ಪ್ರೀತಿಸಿದ್ದ.ಇಬ್ಬರೂ ಏಕಾಂತದಲ್ಲಿ ಹಲವು ಬಾರಿ ಕಾಲ ಕಳೆದಿದ್ದರು.‌ ಆ ವೇಳೆ ಆಕೆಯ ಖಾಸಗಿ ಫೋಟೋಗಳನ್ನು ತನ್ನ ಮೊಬೈಲ್​ನಲ್ಲಿ ಕ್ಲಿಕ್ಕಿಸಿಕೊಂಡಿದ್ದಾನೆ. ಆದರೆ ಕೆಲವು ಸಮಯದ ಬಳಿಕ ಇಬ್ಬರ ನಡುವೆ ಮನಸ್ತಾಪವಾಗಿ ದೂರವಾಗಿದ್ದರು. ಆದರೆ ಆಕೆಯನ್ನು ಬಿಟ್ಟಿರಲಾರದೆ ಆರೋಪಿ ಸಂತೋಷ್ ಮಾಜಿ ಪ್ರಿಯತಮೆಯ ಖಾಸಗಿ ಫೋಟೊಗಳನ್ನು ಇಟ್ಟುಕೊಂಡು ಹಣಕ್ಕಾಗಿ ಬ್ಲಾಕ್‌ಮೇಲ್ ಮಾಡುವುದಲ್ಲದೇ ಲೈಂಗಿಕವಾಗಿ ಸಹಕರಿಸುವಂತೆ ಬೆದರಿಸುತ್ತಿದ್ದನಂತೆ, ಇಲ್ಲದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿಯೂ ಹೇಳಿದ್ದ.

woman supari to theft her ex lover mobile phone
ಮಾಜಿ ಪ್ರೇಯಸಿಗೆ ಬ್ಲ್ಯಾಕ್​ಮೇಲ್​ ಮಾಡ್ತಿದ್ದ ಸಂತೋಷ

ಇದರಿಂದ ಹೆದರಿದ ಯುವತಿ, ತನ್ನ ಸ್ನೇಹಿತನಿಗೆ ವಿಷಯ ಎಲ್ಲವನ್ನೂ ಹೇಳಿ ಖಾಸಗಿ ಫೋಟೋಗಳಿದ್ದ ಆ ಮೊಬೈಲ್ ಫೋನ್ ಅವನಿಂದ ತೆಗೆದುಕೊಂಡು ಬರುವಂತೆ ಹೇಳಿದ್ದಾಳೆ. ಅದರಂತೆ ನ. 16ರಂದು ಮಧ್ಯರಾತ್ರಿ ತೆರಳಿದ್ದ ನಾಲ್ಕು ಜನರ ಗುಂಪು ಸಂತೋಷ್ ವಾಸವಿದ್ದ ಕೊಡಿಗೆಹಳ್ಳಿಯ ನಿವಾಸಕ್ಕೆ ತೆರಳಿ ಮನೆಯಲ್ಲಿದ್ದ ಸಂತೋಷ್ ಹಾಗೂ ಸ್ನೇಹಿತರನ್ನು ಬೆದರಿಸಿ ಮನೆಯಲ್ಲಿದ್ದ ಮೂರು ಮೊಬೈಲ್​​ಗಳನ್ನು ರಾಬರಿ ಮಾಡಿದ್ದರು. ಘಟನೆ ಸಂಬಂಧ ಕೊಡಿಗೆಹಳ್ಳಿ ಠಾಣೆಯಲ್ಲಿ ರಾಬರಿ ಕೇಸ್ ದಾಖಲಾಗಿತ್ತು. ಅಪರಿಚಿತರು ಮನೆಗೆ ನುಗ್ಗಿ ಪೆಪ್ಪರ್ ಸ್ಪ್ರೈ ಹಾಕಿ ಮೊಬೈಲ್ ಫೋನ್ ರಾಬರಿ ಮಾಡಿದ್ದಾರೆ ಸಂತೋಷ್ ನೀಡಿದ ದೂರಿನ ಮೇರೆಗೆ ಆರೋಪಿಗಳ ವಿಚಾರಣೆ ಮಾಡಿದಾಗ ಅಸಲಿಯತ್ತು ಬಯಲಾಗಿದೆ.

ಈ ಘಟನೆ ಸಂಬಂಧ ಆಕಾಶ್, ನಂಜುಂಡಸ್ವಾಮಿ, ಎರ್ರಿಸ್ವಾಮಿ ಎಂಬ ಮೂವರನ್ನು ಬಂಧಿಸಿರುವ ಕೊಡಿಗೆಹಳ್ಳಿ ಠಾಣೆ ಪೊಲೀಸರು ಮತ್ತಿಬ್ಬರ ಬಂಧನಕ್ಕೆ ಬಲೆ ಬೀಸಿದ್ದಾರೆ. ಇತ್ತ ಯುವತಿ ಸಂತೋಷ್ ತನ್ನ ಮೊಬೈಲ್​​ನಲ್ಲಿ ಖಾಸಗಿ ಫೋಟೋ ಇಟ್ಟುಕೊಂಡು ಬ್ಲ್ಯಾಕ್​ಮೇಲ್​ ಮಾಡುತ್ತಿದ್ದ ಎಂದು ನೀಡಿದ ದೂರಿನಡಿ ಸಂತೋಷ್ ನನ್ನು ಪೊಲೀಸರು ಬಂಧಿಸಿದ್ದಾರೆ.

Last Updated : Nov 22, 2021, 8:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.