ETV Bharat / state

ವಿವಾಹವಾಗಿ 16 ವರ್ಷ, ಇಬ್ಬರು ಮಕ್ಕಳಿದ್ದರೂ ಅಕ್ರಮ ಸಂಬಂಧ: ಗಂಡನ ಕೊಲೆ ಮಾಡಿ ಚರಂಡಿಗೆ ಶವ ಎಸೆದ ಹೆಂಡ್ತಿ - ಗಂಡನ ಶವ ಚರಂಡಿಯೊಳಗೆ ತುರುಕಿದ್ದ ಹೆಂಡ್ತಿ

ಮಹಿಳೆಯೊಬ್ಬರು ಪ್ರಿಯಕರನೊಂದಿಗೆ ಸೇರಿಕೊಂಡು ತನ್ನ ಗಂಡನನ್ನು ಕೊಲೆ ಮಾಡಿ, 50 ಮೀಟರ್ ಚರಂಡಿಯೊಳಗೆ ಶವ ತುರುಕಿದ್ದ ಪ್ರಕರಣವನ್ನು ಬೆಂಗಳೂರಿನ ಪೊಲೀಸರು ಭೇದಿಸಿದ್ದಾರೆ.

woman-killed-her-husband-with-help-of-her-lover-and-threw-his-body-into-the-drain
ವಿವಾಹವಾಗಿ 16 ವರ್ಷ, ಇಬ್ಬರು ಮಕ್ಕಳಿದ್ದರೂ ಅಕ್ರಮ ಸಂಬಂಧ: ಗಂಡನ ಕೊಲೆ ಮಾಡಿ ಚರಂಡಿಗೆ ಶವ ಎಸೆದ ಹೆಂಡ್ತಿ
author img

By

Published : Nov 30, 2022, 5:32 PM IST

Updated : Nov 30, 2022, 5:41 PM IST

ಬೆಂಗಳೂರು: ಅನೈತಿಕ ಸಂಬಂಧಕ್ಕೆ‌ ಅಡ್ಡಿಯಾಗಿದ್ದ ಗಂಡನನ್ನು ಮಹಿಳೆಯೊಬ್ಬರು ಪ್ರಿಯಕರನೊಂದಿಗೆ ಪ್ಲಾನ್​​ ಮಾಡಿ ಸಿನಿಮೀಯ ಶೈಲಿಯಲ್ಲಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿ ಮಹಿಳೆ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

48 ವರ್ಷದ ದಾಸೇಗೌಡ ಎಂಬಾತನೇ ಕೊಲೆಯಾದ ವ್ಯಕ್ತಿ. ಈತನ ಪತ್ನಿ ಜಯಲಕ್ಷ್ಮಿ ಹಾಗೂ ಪ್ರಿಯಕರ ರಾಜೇಶ್​ನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿವಾಹವಾಗಿ 16 ವರ್ಷ, ಇಬ್ಬರು ಮಕ್ಕಳಿದ್ದರೂ ಅಕ್ರಮ ಸಂಬಂಧ: ಸೋಲದೇವಹಳ್ಳಿಯ ಠಾಣಾ ವ್ಯಾಪ್ತಿಯ ಫಾರ್ಮ್​​ಹೌಸ್​ವೊಂದರಲ್ಲಿ ದಾಸೇಗೌಡ ಮತ್ತು ಜಯಲಕ್ಷ್ಮಿ ದಂಪತಿ ಕೆಲಸ ಮಾಡುತ್ತಿದ್ದರು. ಇಬ್ಬರಿಗೂ ವಿವಾಹವಾಗಿ 16 ವರ್ಷವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಹೀಗಿದ್ದರೂ ದಂಪತಿ ನಡುವೆ ವೈಮನಸ್ಸು ಮೂಡಿತ್ತು.

ವಿವಾಹವಾಗಿ 16 ವರ್ಷ, ಇಬ್ಬರು ಮಕ್ಕಳಿದ್ದರೂ ಅಕ್ರಮ ಸಂಬಂಧ: ಗಂಡನ ಕೊಲೆ ಮಾಡಿ ಚರಂಡಿಗೆ ಶವ ಎಸೆದ ಹೆಂಡ್ತಿ

ಈ‌ ಮಧ್ಯೆ ಜಯಶ್ರೀಗೆ ರಾಜೇಶ್ ಪರಿಚಯವಾಗಿ ಅದು ಅನೈತಿಕ ಸಂಬಂಧಕ್ಕೆ ತಿರುಗಿತ್ತು‌‌.‌ ಗಂಡ ಮನೆಯಲ್ಲಿ ಇಲ್ಲದಿರುವಾಗ ಆಗಾಗ ರಾಜೇಶ್ ಬಂದು ಹೋಗುತ್ತಿದ್ದ‌. ಈ ವಿಚಾರ ತಿಳಿದು ಗಂಡ ಪತ್ನಿಯೊಂದಿಗೆ ಜಗಳವಾಡಿದ್ದ.‌ ನಿತ್ಯ ಇದೇ ವಿಚಾರಕ್ಕಾಗಿ ಇಬ್ಬರ ನಡುವೆ ಗುದ್ದಾಟವಾಗುತಿತ್ತು.‌ ಈ ಬಗ್ಗೆ ಜಯಶ್ರೀ ಪ್ರಿಯಕರ ರಾಜೇಶ್​ ಬಳಿ ಹೇಳಿಕೊಂಡಿದ್ದಳು. ಇಬ್ಬರು ಮಾತನಾಡಿಕೊಂಡು ದಾಸೇಗೌಡನನ್ನ ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಗಂಡನ ಶವ ಚರಂಡಿಯೊಳಗೆ ತುರುಕಿದ್ದ ಹೆಂಡ್ತಿ: ಜಯಶ್ರೀ ಮತ್ತು ಆಕೆಯ ಪ್ರಿಯಕರ ರಾಜೇಶ್​ ತಮ್ಮ ಯೋಜನೆಯಂತೆ ಕಳೆದ‌ ಭಾನುವಾರ ರಾತ್ರಿ ದಾಸೇಗೌಡನನ್ನು ಕೊಲೆ ಮಾಡಿದ್ದಾರೆ. ಪ್ರಿಯತಮೆ ಮನೆಗೆ ಬಂದಿದ್ದ ರಾಜೇಶ್, ದನದ ಕೊಟ್ಟಿಗೆಯಲ್ಲಿದ್ದ ಹಗ್ಗ ಎತ್ತಿಕೊಂಡು ದಾಸೇಗೌಡನ ಕತ್ತುಬಿಗಿದು ಹತ್ಯೆ ಮಾಡಿದ್ದಾನೆ. ಇಬ್ಬರು ಸೇರಿಕೊಂಡು ಬಳಿಕ ಕೈ ಕಾಲುಗಳಿಗೆ ಹಗ್ಗ ಕಟ್ಟಿ ಪ್ಲಾಸ್ಟಿಕ್ ಚೀಲದಲ್ಲಿ ಶವವಿರಿಸಿ ಕಾರಿನಲ್ಲಿ ತೆರಳಿದ್ದಾರೆ.

ಬೆಂಗಳೂರು - ಮೈಸೂರು ಹೆದ್ದಾರಿ‌ ಸಂಪರ್ಕಿಸುವ ರಾಮನಗರ ಬಳಿಯ ಚರಂಡಿಯೊಳಗಿಳಿದು 50 ಮೀಟರ್​ಯೊಳಗೆ ಶವ ತುರುಕಿದ್ದಾರೆ. ಅಲ್ಲದೇ, ಮೊಬೈಲ್ 500 ಮೀಟರ್ ದೂರ ಎಸೆದರೆ ಹಗ್ಗವನ್ನ ಮತ್ತೊಂದು ಕಡೆ ಬಿಸಾಕಿ ಸಾಕ್ಷ್ಯನಾಶ ಮಾಡಿದ್ದರು. ಬಳಿಕ ಮನೆಗೆ ಬಂದು ಮಾರನೇ ದಿನ ತನ್ನ ಗಂಡ ಕಾಣೆಯಾಗಿದ್ದಾನೆ ಎಂದು ಜಯಶ್ರೀ ದೂರು ನೀಡಿದ್ದಳು.

ರಾಜೇಶ್​ ತಮ್ಮನಂತೆ ಎಂದು ಸುಳ್ಳು ಹೇಳಿದ್ದ ಜಯಶ್ರೀ: ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಗಂಡನ ಮನೆಯವರನ್ನು ಕರೆಯಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ, ಮೃತ ದಾಸೇಗೌಡ ಸಹೋದರ ಪೊಲೀಸರಿಗೆ ಜಯಶ್ರೀ ಅನೈತಿಕ ಸಂಬಂಧದ ಬಗ್ಗೆ ಮಾಹಿತಿ ನೀಡಿದ್ದರು. ಅಂತೆಯೇ ಜಯಶ್ರೀಯನ್ನು ಪೊಲೀಸರು ಪ್ರಶ್ನಿಸಿದಾಗ ರಾಜೇಶ್​ ತನ್ನ ತಮ್ಮನಂತೆ ಎಂದು ಈ ಚಾಲಾಕಿ ಮಹಿಳೆ ಸುಳ್ಳು ಹೇಳಿದ್ದಳು.

ಆದರೂ, ಜಯಶ್ರೀ ನಡತೆ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸರು ಆಕೆಯ ಮೊಬೈಲ್ ಸಿಡಿಆರ್ ಪರಿಶೀಲಿಸಿದಾಗ ರಾಜೇಶ್ ಜೊತೆ ಹಲವು ಬಾರಿ ಪೋನ್ ಮಾಡಿರುವುದು ಗೊತ್ತಾಗಿದೆ. ಪೊಲೀಸ್ ಶೈಲಿಯಲ್ಲಿ ವಿಚಾರಿಸಿದಾಗ ಗಂಡನನ್ನ ಕೊಲೆ ಮಾಡಿರುವ ಬಗ್ಗೆ ಆರೋಪಿ ಜಯಶ್ರೀ ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.

ಇದನ್ನೂ ಓದಿ: ಪ್ರೇಮಿಗಳ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ.. ಅನುಮಾನಪಟ್ಟು ಪ್ರೀತಿಸಿದವಳನ್ನೇ ಕೊಂದ ಲವರ್​

Last Updated : Nov 30, 2022, 5:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.