ETV Bharat / state

ಸರ್ಕಾರದಿಂದ ರೇಷನ್, ಹಣ ಕೊಡಿಸುವುದಾಗಿ ನಂಬಿಸಿ ಮಹಿಳೆಯರ ಚಿನ್ನಾಭರಣ ದೋಚಿದ ಖದೀಮ

author img

By

Published : Jan 6, 2021, 7:56 PM IST

ಸರ್ಕಾರಿ ಸೌಲಭ್ಯದ ಹೆಸರಿನಲ್ಲಿ ಮಹಿಳೆಯರ ಚಿನ್ನಾಭರಣ ದೋಚಿದ ಎರಡು ಪ್ರತ್ಯೇಕ ಪ್ರಕರಣ ರಾಜಧಾನಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

jewelry theft in the name of a govt facility in Bengaluru
ಸರ್ಕಾರಿ ಸೌಲಭ್ಯ ಕೊಡಿಸುವುದಾಗಿ ಮಹಿಳೆಯರಿಗೆ ವಂಚನೆ

ಬೆಂಗಳೂರು : ಆರ್ಥಿಕವಾಗಿ ದುರ್ಬಲರಾದವರಿಗೆ, ಬಡವರಿಗೆ ರೇಷನ್ ಹಾಗೂ ಸರ್ಕಾರದಿಂದ ಹಣ ಕೊಡಿಸುವುದಾಗಿ ನಂಬಿಸಿ, ಇಬ್ಬರು ಮಹಿಳೆಯರಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿರುವ ಎರಡು ಪ್ರತ್ಯೇಕ ಪ್ರಕರಣ ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

ಪ್ರಕರಣ-1

ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ರಾಚಪ್ಪ ಬಡಿಗೇರ್ ನೀಡಿದ‌ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೆಸರಘಟ್ಟದಲ್ಲಿ ವಾಸವಾಗಿರುವ ರಾಚಪ್ಪ ಅವರ ಪತ್ನಿಗೆ, ಆರೋಪಿಯು ಸರ್ಕಾರ‌ದಿಂದ ಹಣ ಕೊಡಿಸುತ್ತೇನೆ ಎಂದು ಹೇಳಿ ಸಮೀಪದ‌ ಸ್ಟುಡಿಯೋಗೆ ಕರೆದುಕೊಂಡು ಹೋಗಿದ್ದ. ಫೋಟೊ ತೆಗೆಯುವಾಗ ಶ್ರೀಮಂತರಾಗಿ ಕಂಡರೆ ಸರ್ಕಾರ ಹಣ ಕೊಡುವುದಿಲ್ಲ ಎಂದು ಹೇಳಿ, ಆಕೆ ಧರಿಸಿದ್ದ 130 ಗ್ರಾಂ ಮೌಲ್ಯದ ಚಿನ್ನಾಭರಣ ತೆಗೆದು ಇರಿಸಿಕೊಂಡಿದ್ದ. ಮಹಿಳೆ ಫೋಟೊ ತೆಗೆದು ಬರುವಷ್ಟರಲ್ಲಿ ಆರೋಪಿ ಚಿನ್ನ ಸಮೇತ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಪತ್ನಿಗೆ ಆರೋಗ್ಯ ಸಮಸ್ಯೆ ಇದ್ದಿದ್ದರಿಂದ ತಡವಾಗಿ ದೂರು ನೀಡಿರುವುದಾಗಿ ರಾಚಪ್ಪ ತಿಳಿಸಿದ್ದಾರೆ.

ಓದಿ: ಮನೆಯ ಬೀಗ ಮುರಿದು ಚಿನ್ನಾಭರಣ ಕಳ್ಳತನ: ಆರೋಪಿ ಅರೆಸ್ಟ್​

ಪ್ರಕರಣ-2

ಇದೇ ರೀತಿ ಮಹಿಳೆಯನ್ನು ಸ್ಟುಡಿಯೋಗೆ ಕರೆದುಕೊಂಡು ಹೋಗಿ 35 ಗ್ರಾಂ ಚಿನ್ನಾಭರಣ ದೋಚಲಾಗಿದೆ. ಅನು ಮೇರಿ ವಂಚನೆಗೊಳಗಾದ ಮಹಿಳೆ ಎಂದು ತಿಳಿದು ಬಂದಿದೆ. ಮಹಿಳೆ ನೀಡಿದ ದೂರಿನ ಮೇರೆಗೆ‌‌ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎರಡು ಪ್ರಕರಣಗಳ ತನಿಖೆ ಪ್ರಾರಂಭಿಸಿದ ಪೊಲೀಸರು, ಆರೋಪಿಗಾಗಿ ಬಲೆ ಬೀಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.