ETV Bharat / state

ಬೆಂಗಳೂರು: ಮಗು ಬೇಡವೆಂದು ಗರ್ಭಪಾತದ ಮಾತ್ರೆ ನುಂಗಿದ ಗರ್ಭಿಣಿ ಸಾವು - ಗರ್ಭಪಾತದ ಮಾತ್ರೆ‌‌‌‌ ನುಂಗಿದ ಮಹಿಳೆ ಸಾವು

ಗರ್ಭಪಾತದ ಮಾತ್ರೆ‌‌‌‌ ನುಂಗಿದ ಪರಿಣಾಮ ಗರ್ಭಿಣಿ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

woman-dies-after-having-abortion-pill-in-bengaluru
ಬೆಂಗಳೂರಲ್ಲಿ ಮಗು ಬೇಡವೆಂದು ಗರ್ಭಪಾತದ ಮಾತ್ರೆ ನುಂಗಿದ ಗರ್ಭಿಣಿ ಸಾವು
author img

By

Published : Dec 14, 2022, 4:10 PM IST

Updated : Dec 14, 2022, 4:29 PM IST

ಬೆಂಗಳೂರು: ಗರ್ಭಪಾತದ ಮಾತ್ರೆ‌‌‌‌ ನುಂಗಿದ ಪರಿಣಾಮ ಗರ್ಭಿಣಿ ಪ್ರಾಣ ಕಳೆದುಕೊಂಡಿದ್ದಾಳೆ. ಅಬಾರ್ಶನ್ ಮಾತ್ರೆ ಸೇವಿಸಿದ ಬಳಿಕ ಉಂಟಾದ‌ ರಕ್ತಸ್ರಾವ ಹಾಗೂ ನೋವಿನಿಂದ ಮಹಿಳೆ ಮೃತಪಟ್ಟ ಘಟನೆ ನಗರದ ಬೇಗೂರು ಠಾಣಾ ವ್ಯಾಪ್ತಿಯ ನ್ಯೂ ಮೈಕೋ ಲೇಔಟ್​​ನಲ್ಲಿ ನಡೆದಿದೆ.

ಪ್ರೀತಿ ಕುಶ್ವಾಸ್ ಎಂಬಾಕೆಯೆ ಸಾವನ್ನಪ್ಪಿದ ಮಹಿಳೆ. 2016ರಲ್ಲಿ ದೇವಬ್ರತ್ ಜೊತೆ ಪ್ರೀತಿಯ ವಿವಾಹವಾಗಿತ್ತು‌. ಖಾಸಗಿ ಕಂಪನಿಯಲ್ಲಿ ಗಂಡ ಕೆಲಸ ಮಾಡುತ್ತಿದ್ದರೆ, ಹೆಂಡತಿ ಗೃಹಿಣಿಯಾಗಿದ್ದಳು. ದಂಪತಿಗೆ 11 ತಿಂಗಳಿನ ಗಂಡು ಮಗುವಿದೆ.‌‌ ಈ ನಡುವೆ ಪ್ರೀತಿ ಮತ್ತೆ ಗರ್ಭ ಧರಿಸಿದ್ದರು.‌‌ ಚಿಕ್ಕ ಮಗುವಿದ್ದು, ಈಗಲೇ ಮತ್ತೊಂದು ಮಗು ಬೇಡವೆಂದು ಅಬಾರ್ಶನ್ ಮಾತ್ರೆ ಸೇವಿಸುವುದಾಗಿ ಹೇಳಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಗಂಡ ಮಾತ್ರೆ ಬೇಡ, ಆಸ್ಪತ್ರೆಗೆ ಹೋಗೋಣ ಎಂದು ಹೇಳಿದ್ದರಂತೆ.

ಆದರೆ, ಈ‌ ನಡುವೆ ಗಂಡನಿಗೆ ತಿಳಿಸದೇ ಮಾತ್ರೆ‌ ನುಂಗಿದ್ದಾರೆ. ಪರಿಣಾಮ ಆರೋಗ್ಯದಲ್ಲಿ ಏರುಪೇರಾಗಿ ಹೊಟ್ಟೆನೋವು ಹಾಗೂ ಭಾರಿ ಪ್ರಮಾಣದಲ್ಲಿ ರಕ್ತಸ್ರಾವ ಆಗಿದ್ದು, ದಿಢೀರ್​ ಅರೆ ಪ್ರಜ್ಞಾವಸ್ಥೆಗೆ ತಲುಪಿಸಿದ್ದಾರೆ. ಆ ಬಳಿಕ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ‌‌ ಅಸಹಜ ಸಾವು ಪ್ರಕರಣ ಕೂಡಾ ದಾಖಲಾಗಿದೆ.

ಇದನ್ನೂ ಓದಿ: ಇಬ್ಬರು ಹೆಣ್ಣುಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ.. ವಿಜಯಪುರ ಜಿಲ್ಲೆಯಲ್ಲಿ ದುರಂತ

Last Updated : Dec 14, 2022, 4:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.