ETV Bharat / state

ಮಾಜಿ ಸಚಿವ ಬಾಬುರಾವ್ ಚಿಂಚನಸೂರುಗೆ ಸಾಲ ಕೊಟ್ಟಿದ್ದ ಮಹಿಳೆ ಆತ್ಮಹತ್ಯೆಗೆ ಶರಣು - Woman committed suicide news

ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ವಿರುದ್ಧ ವಂಚನೆ ಆರೋಪದಡಿ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದ ಮಹಿಳೆ ನೇಣು ಬಿಗಿದುಕೊಂಡು‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಹಿಳೆ ಆತ್ಮಹತ್ಯೆ
author img

By

Published : Nov 3, 2019, 2:34 PM IST

Updated : Nov 3, 2019, 3:37 PM IST

ಬೆಂಗಳೂರು: ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ವಿರುದ್ಧ ವಂಚನೆ ಆರೋಪದಡಿ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದ ಮಹಿಳೆ ನೇಣು ಬಿಗಿದುಕೊಂಡು‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಂದ್ರಾಲೇಔಟ್ ಠಾಣೆಯ ಆದರ್ಶ ನಗರದ ಅಂಜನಮ್ಮ ಸಾವನ್ನಪ್ಪಿದ ಮಹಿಳೆ ಎಂದು ತಿಳಿದುಬಂದಿದೆ.

ಬೆಂಗಳೂರು ಮೂಲದ ಅಂಜನಮ್ಮ ಗಂಡ ವಿಜಯ್ ಕುಮಾರ್​ಗೆ ಡಿವೋರ್ಸ್ ನೀಡಿದ ಬಳಿಕ ಮಗ ಸುಮಂತ್‌ನೊಂದಿಗೆ ವಾಸವಾಗಿದ್ದರು. ಮಗ ಊರಿಗೆ ಹೋಗಿರುವಾಗ ತಾಯಿ ಮಗನಿಗೆ ಕರೆ ಮಾಡಿ ನಾನು ಸಾಯುತ್ತಿದ್ದೇನೆ, ನನ್ನ ಚಿತೆಗೆ ನೀನೆ ಬಂದು‌ ಬೆಂಕಿ‌ ಇಡು ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದಾರೆ. ಆತಂಕಗೊಂಡ ಮಗ ಮನೆಗೆ ಬರುವಷ್ಟರಲ್ಲಿ ಅಂಜನಮ್ಮ ಆತ್ಮಹತ್ಯೆಗೆ ಶರಣಾಗಿದ್ದರು.

ಅಂಜನಮ್ಮ ಹಾಗೂ ಗಂಡ ವಿಜಯ್ ಕುಮಾರ್ ಇಬ್ಬರು ಬ್ಯಾಂಕಿನಿಂದ ಸಾಲ ಕೊಡಿಸುವುದಾಗಿ ನಂಬಿಸಿ ಹಲವರಿಗೆ ಮೋಸ ಮಾಡಿದ ಆರೋಪದಡಿ ಕಬ್ಬನ್ ಪಾರ್ಕ್ ಸೇರಿದಂತೆ ವಿವಿಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 2016 ರಲ್ಲಿ ಮಾಜಿ ಸಚಿವ ಬಾಬುರಾವ್ ಚಿಂಚನಸೂರಿಗೆ 11.88 ಕೋಟಿ ರೂ. ಸಾಲ ನೀಡಿದ್ದರಂತೆ. ಇದೇ ವಿಚಾರಕ್ಕಾಗಿ ಅವರು ಚಿಂಚನಸೂರ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು ಎಂದು ತಿಳಿದು ಬಂದಿದೆ.

ಆರ್ಥಿಕ ಸಮಸ್ಯೆ ಹಿನ್ನೆಲೆ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಗ ಸುಮಂತ್ ಚಂದ್ರಾಲೇಔಟ್ ಪೊಲೀಸರಿಗೆ ತಿಳಿಸಿದ್ದಾರೆ.

Intro:Body:ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಸಾಲ ಕೊಟ್ಟಿದ್ದ ಮಹಿಳೆ ನೇಣುಬಿಗಿದುಕೊಂಡು ಆತ್ಮಹತ್ಯೆ

ಬೆಂಗಳೂರು: ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ವಿರುದ್ಧ ವಂಚನೆ ಆರೋಪದಡಿ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದ ಮಹಿಳೆ ನೇಣು ಬಿಗಿದುಕೊಂಡು‌ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಂದ್ರಲೇಔಟ್ ಠಾಣೆಯ ಆದರ್ಶ ನಗರದ ಅಂಜನಮ್ಮ ಸಾವನ್ನಪ್ಪಿದ ಮಹಿಳೆ... ಬೆಂಗಳೂರು ಮೂಲದ ಅಂಜನಮ್ಮ ಗಂಡ ವಿಜಯ್ ಕುಮಾರ್ ಗೆ ಡಿವೋರ್ಸ್ ಮಾಡಿ ದೂರ ಉಳಿದಿದ್ದರು. ಮಗ ಸುಮಂತ್ ನೊಂದಿಗೆ ಅಂಜನಮ್ಮ ವಾಸವಾಗಿದ್ದರು. ಮಗ ಊರಿಗೆ ಹೋಗಿರುವಾಗ ತಾಯಿ ಮಗನಿಗೆ ಕರೆ ಮಾಡಿ ನಾನು ಸಾಯುತ್ತಿದ್ದೇನೆ.. ನನ್ನ ಚಿತೆಗೆ ನೀನೆ ಬಂದು‌ ಬೆಂಕಿ‌ ಇಡು ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದಾರೆ.. ಆತಂಕದಿಂದ ಮನೆ ಬರುವಷ್ಟರಲ್ಲಿ ಅಂದರೆ ಕಳೆದ ಶುಕ್ರವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸುದ್ದಾರೆ..
ವಿಚ್ಚೇದನಕ್ಕೂ ಅಂಜನಮ್ಮ ಹಾಗೂ ಗಂಡ ವಿಜಯ್ ಕುಮಾರ್ ಇಬ್ಬರು ಬ್ಯಾಂಕಿನಿಂದ ಲೋನ್ ಕೊಡಿಸುವುದಾಗಿ ನಂಬಿಸಿ ಹಲವರಿಗೆ ಮೋಸ ಮಾಡಿದ ಆರೋಪದಡಿ ಕಬ್ಬನ್ ಪಾರ್ಕ್ ಸೇರಿದಂತೆ ವಿವಿಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 2016 ರಲ್ಲಿ ಬಾಬುರಾವ್ ಚಿಂಚನಸೂರಿಗೆ 11.88 ಕೋಟಿ ಸಾಲ ಪಡೆದಿದ್ದರಂತೆ. ಇದೇ ವಿಚಾರಕ್ಕಾಗಿ ಚಿಂಚನಸೂರ್ ವಿರುದ್ಧ ಕೋರ್ಟ್ ಮೆಟ್ಡಿಲೇರಿದ್ದರು ಎಂದು ತಿಳಿದು ಬಂದಿದೆ. ಆರ್ಥಿಕ ಸಮಸ್ಯೆ ಹಿನ್ನಲೆ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಮಗ ಸುಮಂತ್ ಚಂದ್ರಾಲೇಔಟ್ ಪೊಲೀಸರಿಗೆ ತಿಳಿಸಿದ್ದಾರೆ.
Conclusion:
Last Updated : Nov 3, 2019, 3:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.