ETV Bharat / state

74ನೇ ವಸಂತಕ್ಕೆ ಕಾಲಿರಿಸಿದ ಸಿದ್ದರಾಮಯ್ಯ : ಕೈ ನಾಯಕರಿಂದ ಶುಭಾಶಯ

ಇಂದು 74ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಕಾಂಗ್ರೆಸ್​ ನಾಯಕರು ಶುಭಾಶಯ ಕೋರಿದ್ದಾರೆ.

Siddaramaiah birthday
ಇಂದು 74ನೇ ವರ್ಷಕ್ಕೆ ವಸಂತಕ್ಕೆ ಕಾಲಿರಿಸಿದ ಸಿದ್ದರಾಮಯ್ಯ
author img

By

Published : Aug 12, 2021, 12:12 PM IST

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದು 74ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದು, ಕಾಂಗ್ರೆಸ್ ನಾಯಕರು ಶುಭಾಶಯ ಕೋರಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್ ಪಾಟೀಲ್, ಮಾಜಿ ಸಚಿವ ಜಮೀರ್ ಅಹಮದ್ ಖಾನ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸೇರಿದಂತೆ ಹಲವು ಗಣ್ಯರು ಸಿದ್ದರಾಮಯ್ಯ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಮ್ಮ ಟ್ವೀಟ್​ನಲ್ಲಿ, ನಮ್ಮ‌ ಶಾಸಕಾಂಗ ಪಕ್ಷದ ನಾಯಕರು ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ನಿಮ್ಮ ಜೀವನವು ಸುಖ-ಶಾಂತಿ-ನೆಮ್ಮದಿಯಿಂದ ತುಂಬಿರಲಿ ಎಂದು ಆಶಿಸುತ್ತೇನೆ ಎಂದು ಬರೆದಿದ್ದಾರೆ.

ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್ ಟ್ವೀಟ್​ ಮೂಲಕ, ತಮ್ಮ ಆಯಸ್ಸು ಆರೋಗ್ಯ ವೃದ್ಧಿಸಲಿ ಎಂದು ಸಿದ್ದರಾಮಯ್ಯ ಅವರಿಗೆ ಹಾರೈಸಿದ್ದಾರೆ.

  • ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಶ್ರೀ ಸಿದ್ದರಾಮಯ್ಯನವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಉತ್ತಮ ಆರೋಗ್ಯವನ್ನು ದೇವರು ನಿಮಗೆ ಸದಾ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.@siddaramaiah

    — Dr. G Parameshwara (@DrParameshwara) August 12, 2021 " class="align-text-top noRightClick twitterSection" data=" ">

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಮ್ಮ ಟ್ವೀಟ್​ನಲ್ಲಿ ಸಿದ್ದರಾಮಯ್ಯ ಅವರು ನೀಡಿದ ವಿವಿಧ ಭಾಗ್ಯಗಳ ಕುರಿತು ಪ್ರಸ್ತಾಪಿಸಿದ್ದು, ಬಡವರ ಹಸಿವು ನೀಗಿಸಲು ಅನ್ನಭಾಗ್ಯ, ಮಕ್ಕಳ ಪೌಷ್ಟಿಕತೆಗೆ ಕ್ಷೀರಭಾಗ್ಯ ಕೊಟ್ಟು 5 ವರ್ಷಗಳ ನಿಷ್ಕಳಂಕ, ಅತ್ಯುತ್ತಮ ಆಡಳಿತ ನೀಡಿದ ಮಾಜಿ ಮುಖ್ಯಮಂತ್ರಿ, ನಮ್ಮ ನೆಚ್ಚಿನ ನಾಯಕರಾದ ಸಿದ್ದರಾಮಯ್ಯ ಅವರಿಗೆ ಜನ್ಮದಿನದ ಶುಭಾಶಯಗಳು. ಭಗವಂತ ಆಯಸ್ಸು, ಆರೋಗ್ಯ ಕರುಣಿಸಿ ಈ ನಾಡಿಗೆ ದೀರ್ಘಸೇವೆ ಸಲ್ಲಿಸಲು ಚೈತನ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

  • ಬಡವರ ಹಸಿವು ನೀಗಿಸಲು ಅನ್ನಭಾಗ್ಯ,ಮಕ್ಕಳ ಪೌಷ್ಟಿಕತೆಗೆ ಕ್ಷೀರಭಾಗ್ಯ ನೀಡಿ, ನಿಷ್ಕಳಂಕ 5 ವರ್ಷಗಳ ಅತ್ಯುತ್ತಮ ಆಡಳಿತ ನೀಡಿದ ಮಾಜಿ ಮುಖ್ಯಮಂತ್ರಿ ನಮ್ಮ ನೆಚ್ಚಿನ ನಾಯಕರಾದ ಶ್ರೀ @siddaramaiah ಅವರಿಗೆ ಜನ್ಮ ದಿನದ ಶುಭಾಶಯಗಳು.
    ಭಗವಂತ ಆಯಸ್ಸು, ಆರೋಗ್ಯ ಕರುಣಿಸಿ ಈ ನಾಡಿಗೆ ದೀರ್ಘಸೇವೆ ಸಲ್ಲಿಸಲು ಚೈತನ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ pic.twitter.com/6CtMpxdyP5

    — Eshwar Khandre (@eshwar_khandre) August 12, 2021 " class="align-text-top noRightClick twitterSection" data=" ">

ಜಮೀರ್ ವಿಶೇಷ ಅಭಿಮಾನ : ತಮ್ಮ ನೆಚ್ಚಿನ ನಾಯಕ ಸಿದ್ದರಾಮಯ್ಯ ಜನ್ಮದಿನವನ್ನು ಸಾಮಾಜಿಕ ಜಾಲತಾಣದಲ್ಲಿ ಅದ್ದೂರಿಯಾಗಿ ಆಚರಿಸಿಕೊಂಡಿರುವ ಮಾಜಿ ಸಚಿವ ಜಮೀರ್ ಅಹಮದ್ ಖಾನ್, ಸಾಮಾಜಿಕ ನ್ಯಾಯ ಮತ್ತು ಜಾತ್ಯಾತೀತ ಸಿದ್ಧಾಂತಗಳ ಪ್ರಬಲ ಪ್ರತಿಪಾದಕರು, ಬಡವರು ಹಾಗೂ ಶೋಷಿತರ ಏಳಿಗೆಗೆ ಸದಾಕಾಲ ಶ್ರಮಿಸುವ ನಮ್ಮ ಹೆಮ್ಮೆಯ ನಾಯಕರಾದ ಸಿದ್ದರಾಮಯ್ಯ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೀರ್ಘ ಆಯಸ್ಸು, ಆರೋಗ್ಯದ ಭಾಗ್ಯ ನಿಮ್ಮದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

  • Happy Birthday to CLP Leader and Former Chief Minister of Karnataka Shri @siddaramaiah Ji

    May Almighty Bless you best Health, Happiness and More successful life Year's ahead pic.twitter.com/Ulph8jPn0A

    — B.Z Zameer Ahmed Khan (@BZZameerAhmed) August 12, 2021 " class="align-text-top noRightClick twitterSection" data=" ">

ಸಾಕಷ್ಟು ನಾಯಕರು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಸಿದ್ದರಾಮಯ್ಯ ಅವರಿಗೆ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ. ಖುದ್ದಾಗಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸುವ ನಿರೀಕ್ಷೆ ಇದೆ. ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ತೀರ್ಮಾನಿಸಿರುವ ಸಿದ್ದರಾಮಯ್ಯ, ಅಭಿಮಾನಿಗಳು ತಮ್ಮನ್ನು ಭೇಟಿಯಾಗಲು ಬರುವುದು ಬೇಡ ಎಂದು ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.