ETV Bharat / state

ಹೈಕೋರ್ಟ್​ಗೆ ಡಿ. 24ರಿಂದ ಜ. 1ರವರೆಗೆ ಚಳಿಗಾಲದ ರಜೆ: 3 ದಿನ ಕಡಿತ ಮಾಡಿ ಆದೇಶ

ಡಿ. 24 ರಿಂದ ಜ. 1ರವರೆಗೆ ಒಟ್ಟು 9 ದಿನಗಳ ಕಾಲ ರಜೆ ನೀಡಲಾಗಿದೆ. ಜನವರಿ 2 ಮತ್ತು 3ನೇ ತಾರೀಕು ಶನಿವಾರ ಹಾಗೂ ಭಾನುವಾರದ ರಜೆ ಇರುವುದರಿಂದ ಹೈಕೋರ್ಟ್ ಪೀಠಗಳು ಜನವರಿ 4ರಿಂದ ಕಾರ್ಯಾರಂಭ ಮಾಡಲಿವೆ.

High Court
ಹೈಕೋರ್ಟ್
author img

By

Published : Nov 14, 2020, 7:22 PM IST

ಬೆಂಗಳೂರು: ರಾಜ್ಯ ಹೈಕೋರ್ಟ್​ನ ಬೆಂಗಳೂರು ಪ್ರಧಾನ ಪೀಠ, ಧಾರವಾಡ ಹಾಗೂ ಕಲಬುರಗಿ ಪೀಠಗಳಿಗೆ ಡಿಸೆಂಬರ್ 24ರಿಂದ ಜನವರಿ 1ರವೆಗೆ ರಜೆ ನೀಡಿ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್ ಅಧಿಸೂಚನೆ ಹೊರಡಿಸಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ಅವರ ಆದೇಶದ ಮೇರೆಗೆ ಈ ಅಧಿಸೂಚನೆ ಹೊರಡಿಸಿದ್ದು, ಡಿ. 24ರಿಂದ ಜ. 1ರವರೆಗೆ ಒಟ್ಟು 9 ದಿನಗಳ ಕಾಲ ರಜೆ ನೀಡಲಾಗಿದೆ. ಜನವರಿ 2 ಮತ್ತು 3ನೇ ತಾರೀಕು ಶನಿವಾರ ಹಾಗೂ ಭಾನುವಾರದ ರಜೆ ಇರುವುದರಿಂದ ಹೈಕೋರ್ಟ್ ಪೀಠಗಳು ಜನವರಿ 4ರಿಂದ ಕಾರ್ಯಾರಂಭ ಮಾಡಲಿವೆ. ಕೊರೊನಾ ಕಾರಣಕ್ಕಾಗಿ ನ್ಯಾಯಾಲಯಗಳ ಸಮಯ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗದ ಹಿನ್ನೆಲೆಯಲ್ಲಿ 3 ದಿನಗಳ ರಜೆಯನ್ನು ಕಡಿತ ಮಾಡಲಾಗಿದೆ.

ಪೂರ್ವ ನಿಗದಿಯಂತೆ ಚಳಿಗಾಲದ ರಜೆ ಡಿಸೆಂಬರ್ 21ರಿಂದ ಜನವರಿ 1ರವರೆಗೆ ಇತ್ತು. ಆದರೆ ಕೊರೊನಾ ಪರಿಣಾಮವಾಗಿ ನ್ಯಾಯಾಲಯಗಳ ಕಲಾಪಕ್ಕೆ ತೊಂದರೆಯಾದ ಹಿನ್ನೆಲೆಯಲ್ಲಿ ರಜೆ ಕಡಿತ ಮಾಡಲು ಸಿಜೆ ನೇತೃತ್ವದಲ್ಲಿ ಬೆಂಗಳೂರು, ಧಾರವಾಡ ಹಾಗೂ ಕಲಬುರಗಿ ಪೀಠದ ವಕೀಲರ ಸಂಘಗಳು ಹಾಗೂ ರಾಜ್ಯ ವಕೀಲರ ಪರಿಷತ್ತಿನೊಂದಿಗೆ ಸಭೆ ನಡೆಸಲಾಗಿತ್ತು. ಅದರಂತೆ ರಜೆ ಕಡಿತ ಮಾಡುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.